Advertisement

ಚಿತ್ರಕಲಾ ಪರಿಷತ್‌ ಆವರಣದಲ್ಲಿ ದೀಪಗಳ ಉತ್ಸವ

11:15 AM Oct 27, 2018 | |

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ಸೂರಿನಡಿ ಕೊಂಡುಕೊಳ್ಳಲು ಅವಕಾಶ ಕಲ್ಪಿಸಿರುವ “ಬೆಂಗಳೂರು ಉತ್ಸವ-ದೀಪಗಳ ಪ್ರದರ್ಶನ ಮತ್ತು ಮಾರಾಟ ಮೇಳ’ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರದಿಂದ ಆರಂಭಗೊಂಡಿದೆ. 

Advertisement

ಲೋಹ, ಗಾಜು, ಕಲ್ಲು, ಮರ, ಮಣ್ಣಿನ ದೀಪಗಳು ಸೇರಿದಂತೆ ವೈವಿದ್ಯಮಯ ದೀಪಗಳು, ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 100 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಕರಕುಶಲ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಬೆಳ್ಳಿ-ಹಿತ್ತಾಳೆಯ ಸೂಕ್ಷ್ಮ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಮಧುಬನಿ ಕಲಾ ಪ್ರಕಾರಗಳು, ಅಲಂಕಾರಿಕ ವಸ್ತುಗಳು, ಪುರಾತನ ಕಲಾತ್ಮಕ ವಸ್ತುಗಳು, ಉಡುಪುಗಳು, ಗೃಹೋಪಯೋಗಿ ವಸ್ತುಗಳು ಉತ್ಸವದ ಆಕರ್ಷಣೆಯಾಗಿವೆ.

ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌ ಶಂಕರ್‌, ಒಂದೇ ಸೂರಿನಡಿ ಹಬ್ಬದ ಎಲ್ಲಾ ಸಾಮಗ್ರಿ ದೊರೆಯುತ್ತಿರವುದು ವಿಶೇಷ. ವಿವಿಧ ರಾಜ್ಯಗಳ ಕಲಾವಿದರ ಕೈಯಲ್ಲಿ ಅರಳಿರುವ ದೀಪಗಳು ವಿಶೇಷವಾಗಿವೆ. ಮೇಳದಲ್ಲಿ ಕಲಾಕೃತಿಗಳು, ಕರಕುಶಲ ವಸ್ತುಗಳು ಕೈಗೆಟಕುವ ದರದಲ್ಲಿ ದೊರಕಲಿವೆ ಎಂದರು.

ಉತ್ಸವದ ಆಯೋಜಕರಾದ ಅಫ್ತಾಬ್‌ ಮಾತನಾಡಿ, ನೇಕಾರರು ಮತ್ತು ಕುಶಲ ಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ ಉತ್ಪಾದಕರಿಗೆ ಲಾಭ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ. ದೀಪಾವಳಿ ಹಬ್ಬಕ್ಕೆ ಅಗತ್ಯವಿರುವ ದೀಪಗಳ ಬೃಹತ ಕಲೆಕ್ಷನ ಇಲ್ಲಿ ಇರಲಿದೆ. ದೇಶದ ವಿವಿಧ ಭಾಗಗಳ ಕಲಾಕಾರರು ತಮ್ಮ ಪ್ರದೇಶದಲ್ಲಿ ತಯಾರಿಸುವ ದೀಪಗಳನ್ನು ಇಲ್ಲಿ ಪ್ರದರ್ಶಿಸಲಿ¨ªಾರೆ. ಅ.26 ರಿಂದ ನ.4ವರೆಗೆ ಬೆಳಗ್ಗೆ 11 ರಿಂದ ಸಂಜೆ 7.30 ರವರೆಗೆ ಉತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next