Advertisement
ನಗರದ ವಿದ್ಯಾನಗರ ನಿವಾಸಿ, ಜಿ.ಪಂ. ಮಾಜಿ ಸದಸ್ಯ ರಾಮಶೆಟ್ಟಿ ಅವರ ಮಗ ಮಧು (47) ನ. 22ರಂದು ರಾಜಘಟ್ಟದಲ್ಲಿ ಕೆಲಸ ಮಾಡುವಾಗ ಜಾರಿ ಬಿದ್ದು ಮೆದುಳಿಗೆ ಗಂಭೀರ ಪೆಟ್ಟಾಗಿತ್ತು. ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ ಬದುಕುವುದು ಕಷ್ಟ ಎಂದು ಅರಿತ ವೈದ್ಯರು ಕುಟುಂಬಿಕರಿಗೆ ವಿಷಯ ತಿಳಿಸಿದ್ದರು. ಜತೆಗೆ ಆತನ ಅಂಗಾಂಗ ದಾನ ಮಾಡಬಹುದು ಎಂದೂ ಸಲಹೆ ನೀಡಿದ್ದರು.
ನ. 26ರಂದು ಮಧು ಮೃತಪಟ್ಟಿದ್ದು, ಮಗನ ಅಂಗಾಂಗ ದಾನ ಮಾಡುವ ನಿರ್ಧಾರವನ್ನು ರಾಮ ಶೆಟ್ಟಿ ಅವರು ವೈದ್ಯರಿಗೆ ತಿಳಿಸಿದರು. ಅದರಂತೆ ಹೃದಯ, ಕಿಡ್ನಿ, ಕಣ್ಣು, ಲಿವರ್ ಮತ್ತು ಚರ್ಮವನ್ನು ವೈದ್ಯರು ಪಡೆದು ಬೇರೊಬ್ಬರಿಗೆ ಅಳವಡಿಸಿದ್ದಾರೆ. ನೋವಿನಲ್ಲೂ ತುಸು ಸಮಾಧಾನ
ಬೆಂಕಿಯಲ್ಲಿ ಸುಟ್ಟುಹೋಗಲಿದ್ದ ಅಂಗಾಂಗಗಳನ್ನು ಬೇರೊಬ್ಬರಿಗೆ ದಾನ ಮಾಡಿದ್ದು, ನೋವಿನಲ್ಲೂ ತುಸು ಸಮಾಧಾನ ತರಿಸಿದೆ ಎಂದು ಮಧು ಅವರ ತಂದೆ ರಾಮ ಶೆಟ್ಟಿ ಹೇಳಿ ಗದ್ಗದಿತರಾದರು.
Related Articles
Advertisement