Advertisement

ಹೆಣ್ಣು ಕುಟುಂಬ-ಸಮಾಜದ ಕಣ್ಣು: ಹುಲ್ಲೂರ

05:40 PM Mar 09, 2022 | Team Udayavani |

ಬಾಗಲಕೋಟೆ: ತಾಯಿಯಾಗಿ, ಅಕ್ಕ-ತಂಗಿ, ಹೆಂಡತಿಯಾಗಿ ಸಮಾಜದಲ್ಲಿ ವಿವಿಧ ರೀತಿಯಿಂದ ತನ್ನನ್ನು ತಾನು ತೊಡಗಿಸಿಕೊಂಡ ಮಹಿಳೆ ಕುಟುಂಬ ಹಾಗೂ ಸಮಾಜದ ಕಣ್ಣಾಗಿದ್ದಾಳೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಹೇಳಿದರು.

Advertisement

ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾಡಳಿ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೀವನೋಪಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬವಿವ ಸಂಘದ ಆರ್‌ಡಿಎಫ್‌, ಆರ್‌ಸೆಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹಕ್ಕೆ ಹೆಣ್ಣು ಮಕ್ಕಳು ಅರಿತೋ ಅರಿಯದೇ ಬಲಿಯಾಗುತ್ತಿದ್ದಾರೆ. ಈ ಅನಿಷ್ಟ ಪದ್ದತಿ ಕೂಡಲೇ ಕೊನೆಗೊಳ್ಳಬೇಕು. ಜಿಲ್ಲಾಡಳಿತ ಈಗಾಗಲೇ ಬಾಲ್ಯವಿವಾಹ ನಿರ್ಮೂಲನೆ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಅಭಿಯಾನ ಸಹ ಕೈಗೊಂಡಿದೆ. ಇದರಿಂದ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಬಾಲ್ಯವಿವಾಹಕ್ಕೆ ಪ್ರಚೋದನೆ ನೀಡದೇ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ನೀಡಿ ಸಮಾಜದ ಪ್ರಮುಖ ವಾಹಿನಿಗೆ ತರುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ದತಿ ಹೆಚ್ಚಾಗಿ ಕಂಡುಬಂದಿರುವುದರಿಂದ ಮುಂದಿನ ಒಂದು ವಾರ ಸಪ್ತಾಹ ಆಚರಿಸಲಾಗುತ್ತಿದ್ದು, ಕೇಂದ್ರ ಸರಕಾರದ ಆದೇಶದ ಮೇರೆ ನಯಾ ಭಾರತ ಕಿ ನಾರಿ ಎಂಬ ಘೋಷದೊಂದಿಗೆ ಜಿಲ್ಲೆಯಾದ್ಯಂತ ಬಾಲ್ಯವಿವಾಹ ಪ್ರಕರಣ ನಡೆಯದಂತೆ ಜಾಗೃತಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಮತ್ತು ವಕೀಲರಾದ ಸೋನಿ ಪರಾಂಡೆ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಅಸಾಧಾರಣ ಪ್ರತಿಭೆ, ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿಯ ರಿಂದ ಮಹಿಳಾ ದಿನಾಚರಣೆಯ ಹಾಡಿಗೆ ನೃತ್ಯ, ಇಲಕಲ್ಲ ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದಿಂದ ನೃತ್ಯ, ಜಾನಪದ ನೃತ್ಯ ಡೊಳ್ಳು ಕುಣಿತ, ಏಕಪಾತ್ರಾಭಿನಯ, ಕೇರಳ, ಮಹಾರಾಷ್ಟ್ರ, ಬಂಗಾಲಿ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವೇಷಭೂಷಣ ಪ್ರದರ್ಶನ ನಡೆಯಿತು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಉಪಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ, ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ|ಜಯಶ್ರೀ ಎಮ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್‌.ಎಸ್‌. ಬಿರಾದಾರ, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಅಕ್ಕಮಹಾದೇವಿ ಗಾಣಿಗೇರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಶಿಕ್ಷಣ
ಇಲಾಖೆಯ ಯೋಜನಾ ಸಮನ್ವಯಾ ಕಾರಿ ಜಾಸ್ಮಿನ ಕಿಲ್ಲೇದಾರ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಸಂಕೀನ ಮುಂತಾದವರು ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ ಸ್ವಾಗತಿಸಿದರು. ಲಕ್ಷ್ಮೀ ಗೌಡರ ಕಾರ್ಯಕ್ರಮ ನಿರೂಪಿಸಿದರು.

ಉತ್ತಮ ಒಕ್ಕೂಟದ ಸದಸ್ಯರಿಗೆ ಪ್ರಶಸ್ತಿ: ದೀನ್‌ ದಯಾಳ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದಾಖಲಾತಿ ನಿರ್ವಹಣೆ ಮಾಡುವಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ 9 ಜನ ಮುಖ್ಯ ಪುಸ್ತಕ ಬರಹಗಾರರಿಗೆ, ಉತ್ತಮವಾಗಿ ಕೆಲಸ ನಿರ್ವಹಿಸಿದ ಮಹಿಳೆಯರಿಗೆ, ಬ್ಯಾಂಕಿಂಗ್‌ ಸೇವೆಯನ್ನು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ತಲುಪಿಸುವಲ್ಲಿ ಉತ್ತಮ ಕೆಲಸ ನಿರ್ವಹಿಸಿದ 9 ಜನ ಬ್ಯಾಂಕ್‌ ಸಖೀಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಅಸಾಧಾರಣ ಮಕ್ಕಳಿಗೆ ಪ್ರಶಸ್ತಿ: ಅಸಾಧಾರಣ ಪ್ರತಿಭೆ ತೋರಿದ ಸಿಂಚನಾ ಕಾಂಬಳೆ, ನಿಖೀಲ ಹುಲಿ, ಅಂಬಿಕಾ ಕುಮಕಾಲೆ, ಸಂಗೀತ ಗೋದಿ, ಮುತ್ತುರಾಜ ಸಗರ, ಶಂಕರ ಶಿವನಾಳ, ರಾಣಿಶ್ರೀ ನಾಗರೇಶಿ ಹಾಗೂ ಖುಷಿ ವರ್ಮಾ ಅವರಿಗೆ ತಲಾ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಉತ್ತಮ ಕಾರ್ಯಕರ್ತೆ, ಸಹಾಯಕಿಯರಿಗೆ ಸನ್ಮಾನ: ಉತ್ತಮ ಸೇವೆ ಸಲ್ಲಿಸಿದ ಪ್ರತಿ ತಾಲೂಕಿಗೆ ತಲಾ ಒಬ್ಬರಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು.

ಕಾರ್ಯಕರ್ತೆಯರಾದ ಬಸವರಾಜೇಶ್ವರಿ ಕುಬಕಡ್ಡಿ, ಹನಮವ್ವ ಮಾದರ, ಆಶಾ ಭಜಂತ್ರಿ, ಮಂಜುಳಾ ಶಾಹಾಪುರ, ಮೈತ್ರಾ ಹಿರೇಮಠ, ಸಹಾಯಕಿಯರಾದ ಮುತ್ತವ್ವ ಮೇಟಿ, ತಾಯಕ್ಕ ನಾಗರೇಶಿ, ನೀಲವ್ವ ನಾಟಿಕಾರ, ಶಿವಮ್ಮ ಹಡಪದ, ಜೈರಾ ಜೀರಗಾಳ, ಶಂಕ್ರಮ್ಮ ಪರಸನಾಯಕ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next