Advertisement

ದುಬಾರಿ ವಸ್ತುಗಳು ಉಪಕರಣಗಳ ದೀರ್ಘ‌

03:44 PM Apr 20, 2020 | mahesh |

ಗಿರ್ರೆನ್ನಿಸುವ ಹೆಡ್‌ ಫೋನ್‌ 45 ಲಕ್ಷ ರೂ
ಹೆಡ್‌ಫೋನ್‌ ಕುರಿತಾಗಿ ನಿಮಗೆ ಆಸಕ್ತಿ ಇದ್ದರೆ, “ಸೆನ್‌ ಹೈಸರ್‌’ ಕಂಪನಿ ಬಗ್ಗೆ ತಿಳಿದೇ ಇರುತ್ತದೆ. ಉತ್ತಮ ಗುಣಮಟ್ಟದ ಹೆಡ್‌ ಫೋನ್‌, ಇಯರ್‌ ಫೋನುಗಳನ್ನು ಈ ಸಂಸ್ಥೆ ಹೊರತರುತ್ತದೆ. ಆನ್‌ಲೈನ್‌ ಮತ್ತು ಅಂಗಡಿಗಳಲ್ಲಿ ಸಿಗುವ ಈ ಹೆಡ್‌ಫೋನ್‌ಗಳ ಬೆಲೆ, ಕೈಗೆ ಎಟಕುವಂತೆ ಇರುತ್ತದೆ. ಅವರದ್ದೇ “ಎಚ್‌ ಇ 1′ ಎಂಬ ಹೆಡ್‌ಫೋನಿಗೆ 45 ಲಕ್ಷ ರೂ. ಬೆಲೆ ಎಂಬುದನ್ನು ತಿಳಿದರೆ, ಎಂಥವರಿಗೇ ಆದರೂ ತಲೆ ಒಂದು ಕ್ಷಣ ಗಿರ್ರನೆ ತಿರುಗುವುದು ಖಂಡಿತ. ಈ ಉತ್ಪನ್ನದಲ್ಲಿ ಉತ್ಕೃಷ್ಟ ಲೋಹಗಳನ್ನು ಬಳಸಲಾಗಿದೆ. ಅವುಗಳನ್ನು ಬಳಸಿರುವುದು ಅಂದ ಚಂದಕ್ಕಲ್ಲ, ಶಬ್ದ ತಂತ್ರಜ್ಞಾನದ ಗುಣಮಟ್ಟ ಹೆಚ್ಚಿಸುವ ಸಲುವಾಗಿ.

Advertisement

ಪುಟ್ಟ ಬ್ಯಾಗು 1,50,000 ರೂ.
ಲೂಯಿ ವುಟ್ಟಾನ್‌ ಸಂಸ್ಥೆಯ “ಡೇಮಿಯರ್‌ ಗ್ರಾಫೈಟ್‌’ ಸರಣಿಯ ಈ ಬ್ಯಾಗಿನ ಗಾತ್ರ ಹೀಗಿದೆ. 12.5 ಇಂಚು ಎತ್ತರ, 6 ಇಂಚು ಅಗಲ. ಒಂದು ಲೀಟರ್‌ ನೀರಿನ ಬಾಟಲಿಯನ್ನು
ಇಟ್ಟುಕೊಳ್ಳಬಹುದಾದಷ್ಟು ಜಾಗವಿರುವ ಈ ಪುಟ್ಟ ಬ್ಯಾಗಿಗೆ 1.50 ಲಕ್ಷ ಅಂದರೆ ನಂಬುವುದು ಕಷ್ಟ. ಇದರಲ್ಲಿ ಚಿನ್ನವನ್ನೋ, ಬೆಳ್ಳಿಯನ್ನೋ ಬಳಸಿದ್ದಾರೆ, ಅದಕ್ಕೇ ದುಬಾರಿ ಇರಬಹುದು ಎಂದುಕೊಂಡರೆ, ಅದೂ ಕೂಡ ಇಲ್ಲ. ಎರಡು ಕಂಪಾರ್ಟ್‌ಮೆಂಟು ಇರುವ ಸರಳ ಬ್ಯಾಗನ್ನು, ಸ್ಲಿಂಗ್‌ ಬ್ಯಾಗ್‌ ಎಂದು ಕರೆಯುತ್ತಾರೆ. ಏಕೆಂದರೆ, ಇದನ್ನು ಒಂದು ಕೈಗೆ ನೇತು
ಹಾಕಿಕೊಳ್ಳಬಹುದು. ಇದರ ಮೇಲಿರುವ ದುಬಾರಿ ವಸ್ತು ಎಂದರೆ, ಲೇಬಲ…. ಇದನ್ನು ತಯಾರಿಸುವ ಲೂಯಿ ವುಟ್ಟಾನ್‌ ಸಂಸ್ಥೆಯ ಲೋಗೊ ಈ ಬ್ಯಾಗಿನ ಮೇಲಿದೆ. ಅದಕ್ಕೇ ಈ ಪರಿಯ ಬೆಲೆ. ಕ್ರಿಕೆಟಿಗ ವಿರಾಟ್‌ ಕೊಹ್ಲಿಯ ಬಳಿ ಈ ಬ್ಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next