Advertisement

ಗಾನಕೋಗಿಲೆಯ ದುಬಾರಿ ಉಡುಗೊರೆ

10:50 AM Jun 15, 2019 | Team Udayavani |

ಸೊಲ್ಲಾಪುರ: ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶಕರ್‌ ಅವರು ತಾವು ಬಳಸಿದ ಕೋಟ್ಯಂತರ ರೂ. ಬೆಲೆ ಬಾಳುವ ಎರಡು ಕಾರುಗಳನ್ನು ಅಕ್ಕಲಕೋಟೆಯ ಶ್ರೀಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ಉಡುಗೊರೆ ನೀಡಿದ್ದಾರೆ.

Advertisement

ಲತಾ ಮಂಗೇಶಕರ್‌ ಅವರು ಮುಂಬೈ ಮಹಾನಗರದ ಪೇಡರ್‌ ರಸ್ತೆಯಲ್ಲಿರುವ ತಮ್ಮ ‘ಪ್ರಭುಕುಂಜ್‌’ ನಿವಾಸದಲ್ಲಿ ಮರ್ಸಿಡೀಸ್‌ ಬೆಂಜ್‌-ಕಾಂಪ್ರಸರ್‌ ಸಿ-200, ಎಂ.ಎಚ್-01/ ಎನ್‌.ಎ./4221 ಮತ್ತು ಶೆವರಲೆಟ್-ಕ್ರುಝ್ ಕಂಪನಿಯ ಎಂ.ಎಚ್-01/ ಎ.ಎಕ್ಸ್‌. /8584 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಾರತರತ್ನ ಲತಾ ಮಂಗೇಶಕರ್‌ ಕುರಿತು ಮಿನಾತಾಯಿ ಖಡಿಕರ್‌ ಬರೆದ ‘ಅವಳ ನೆರಳು’ ಕೃತಿಯಲ್ಲಿ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರು ಮಂಗೇಶಕರ್‌ ಕುಟುಂಬದ ಒಬ್ಬ ಸದಸ್ಯರು ಎಂದು ಉಲ್ಲೇಖೀಸಲಾಗಿದೆ. ಜನ್ಮೇಜಯರಾಜೆ ಭೋಸಲೆ ಅವರು ಅಷ್ಟೊಂದು ಮಂಗೇಶಕರ್‌ ಕುಟುಂಬದ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ.

ಭಾರತರತ್ನ ಲತಾ ಮಂಗೇಶಕರ್‌ ಅವರು ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಮತ್ತು ಅವರ ಪುತ್ರ, ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಅವರ ನೇತೃತ್ವಕ್ಕೆ ಸಲಹೆ, ಸಹಕಾರ ಮತ್ತು ಆಶೀರ್ವಾದ ನೀಡುತ್ತ ಬಂದಿದ್ದಾರೆ. ಲತಾ ಮಂಗೇಶಕರ್‌ ಅವರು ಸ್ವಾಮಿ ಸಮರ್ಥರ ಮೇಲೆ ಅಫಾರ ಭಕ್ತಿ ಹೊಂದಿದ್ದಾರೆ. ಹೀಗಾಗಿ ಸುಮಾರು ವರ್ಷಗಳಿಂದಲೂ ಮಂಗೇಶಕರ್‌ ಮತ್ತು ಭೋಸಲೆ ಕುಟುಂಬಗಳ ಮಧ್ಯೆ ಅನ್ಯೋನ್ಯ ಸಂಬಂಧವಿದೆ. ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಪರಿಶ್ರಮದಿಂದ ಆರಂಭಗೊಂಡಿರುವ ಅನ್ನಛತ್ರ ಮಂಡಳ ದೇಶ- ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ದಾನಗಳಲ್ಲಿ ಅನ್ನದಾನ ಶ್ರೇಷ್ಠದಾನವಾಗಿದ್ದು, ಹಸಿದು ಬಂದ ಜನರಿಗೆ ಅನ್ನ ಬಡಿಸುವುದು ಮಹಾ ದಾನವಾಗಿದೆ. ಅಂತೆಯೇ ದರ್ಶನಕ್ಕೆ ಬಂದ ಸಾವಿರಾರು ಭಕ್ತರಿಗೆ ಪ್ರಸಾದ ಮೂಲಕ ತೃಪ್ತಿ ಒದಗಿಸುತ್ತಿರುವ ಕಾರ್ಯ ಮೆಚ್ಚುವಂತದ್ದು. ಭಕ್ತರು ನೀಡಿದ ಕಾಣಿಕೆಯಿಂದ ಇಷ್ಟೊಂದು ಜನರಿಗೆ ಪ್ರಸಾದ ಬಡಿಸುತ್ತಿರುವುದು ಅದ್ಭುತವಾಗಿದೆ. ಅಲ್ಲದೇ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

Advertisement

ಪಂಡಿತ ಹೃದಯನಾಥ ಮಂಗೇಶಕರ್‌, ಭಾರತಿತಾಯಿ ಮಂಗೇಶಕರ್‌, ರಾಧಾತಾಯಿ ಮಂಗೇಶಕರ್‌, ಆದಿನಾಥ ಮಂಗೇಶಕರ್‌, ಕೃಷ್ಣಾತಾಯಿ ಮಂಗೇಶಕರ್‌, ಉಷಾತಾಯಿ ಮಂಗೇಶಕರ್‌, ಮೀನಾತಾಯಿ ಖಡಿಕರ್‌, ಯೋಗೇಶ ಖಡಿಕರ್‌, ಮಹೇಶ ರಾಠೊರ್‌ ಹಾಗೂ ಜನ್ಮೆಜಯರಾಜೆ ಭೋಸಲೆ, ಅಲಕಾ ಭೋಸಲೆ, ಅಮೋಲರಾಜೆ ಭೋಸಲೆ, ಅರ್ಪಿತಾರಾಜೆ ಭೋಸಲೆ, ಅನುಯಾ ಫುಗೆ, ಅಂಜನಾ ಪವಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next