Advertisement

ನಿರೀಕ್ಷಿತ ಯಶಸ್ಸು ಕಾಣಬೇಕಿದೆ ನೇತ್ರದಾನ

12:06 PM Nov 08, 2021 | Team Udayavani |

ರಾಯಚೂರು: ನಟ ಪುನೀತ್‌ ರಾಜ್‌ಕುಮಾರ್‌ ಸಾವಿನ ನಂತರ ರಾಜ್ಯದ ವಿವಿಧೆಡೆ ನೇತ್ರದಾನ ಅಭಿಯಾನ ಜೋರಾಗಿದೆ. ಆದರೆ ಈ ಅಭಿಯಾನಕ್ಕೆ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಬೇಕಿದೆ.

Advertisement

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮಾತ್ರ ನೇತ್ರದಾನ ಪಡೆಯಲು ಅವಕಾಶ ಇದೆ. ಆದರೆ ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೆಚ್ಚು ಆಸಕ್ತಿ ತೋರಬೇಕಿದೆ. ಕೆಲ ದಾನಿಗಳು ರಿಮ್ಸ್‌ಗೆ ನೇತ್ರದಾನ ಮಾಡುತ್ತಾರೆ. ವ್ಯಕ್ತಿ ಮೃತಪಟ್ಟ 3-4 ಗಂಟೆಯೊಳಗೆ ಕಣ್ಣುಗಳನ್ನು ಪಡೆಯಬೇಕಿದೆ. ಹೀಗಾಗಿ ಮೃತರು ವಾಸಿಸುವ ಸ್ಥಳ ಸಮೀಪವಿದ್ದರೆ ಮಾತ್ರ ರಿಮ್ಸ್‌ ನೇತ್ರ ವಿಭಾಗದ ಸಿಬ್ಬಂದಿ ಹೋಗಿ ಸಂಗ್ರಹಿಸುತ್ತಾರೆ. ಇಲ್ಲವಾದರೆ ರಿಮ್ಸ್‌ನಲ್ಲಿ ದಾಖಲಾಗಿ ಮೃತಪಟ್ಟಾಗ ಕುಟುಂಬ ಸದಸ್ಯರು ಒಪ್ಪಿದರೆ ಅಲ್ಲಿಯೇ ಸಂಗ್ರಹಿಸಲಾಗುತ್ತದೆ.

ರಿಮ್ಸ್‌ನಲ್ಲಿ ಪ್ರತ್ಯೇಕ ನೇತ್ರ ಚಿಕಿತ್ಸಾ ವಿಭಾಗವಿದ್ದು, ದಾನಿಗಳು ಒಪ್ಪಿದರೆ ನಿಯಮಾನುಸಾರ ಕಣ್ಣುಗಳನ್ನು ಸಂಗ್ರಹಿಸಲಾಗುವುದು. ಆದರೆ ನಮ್ಮಲ್ಲಿ ನೇತ್ರ ಕಸಿ ವಿಭಾಗ ಇಲ್ಲ. ಅದಕ್ಕೆ ವಿಶೇಷ ಅನುಮತಿ ಪಡೆಯಬೇಕಿದೆ. ನಮ್ಮಲ್ಲಿ ಕೇವಲ ಏಳು ಜನ ವೈದ್ಯರಿರುವ ಕಾರಣ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿಲ್ಲ. ನೇತ್ರ ಸಂಗ್ರಹಿಸಿದರೆ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗುವುದು. ಕಣ್ಣುಗಳನ್ನು ಪಡೆಯಲು ಸಾಕಷ್ಟು ಪ್ರಕ್ರಿಯೆಗಳಿವೆ. -ಡಾ| ಸಿದ್ಧೇಶ ಕುಮಾರ್‌, ಎಚ್‌ಒಡಿ, ನೇತ್ರವಿಭಾಗ, ರಿಮ್ಸ್‌

ಪ್ರತಿಯೊಬ್ಬ ಮನುಷ್ಯನಿಗೆ ದಾನ ಮಾಡುವುದು ದೊಡ್ಡ ಗುಣ. ನಾವು ಇರುವಾಗ ಬೇರೆ ಬೇರೆ ಸ್ವರೂಪದ ದಾನಗಳು ಮಾಡುತ್ತೇವೆ. ಆದರೆ ಸತ್ತ ಮೇಲೆಯೂ ಇನ್ನೊಬ್ಬರ ಬಾಳಿಗೆ ಬೆಳಕಾಗುವುದೇ ಶ್ರೇಷ್ಠ ದಾನ. ಆದರೆ ಯಾರಿಗೂ ಈ ವಿಚಾರದಲ್ಲಿ ಒತ್ತಾಯ ಮಾಡಲು ಬರಲ್ಲ. ಬೇರೆಯವರಿಗೆ ಅನುಕೂಲ ಆಗುವುದಾದರೆ ಖಂಡಿತಾ ಇಂಥ ದಾನಗಳನ್ನು ಮಾಡಬೇಕು. -ಪಂ| ನರಸಿಂಹಲು ವಡವಾಟಿ, ಅಂತಾರಾಷ್ಟ್ರೀಯ ಕ್ಲಾರಿಯೋನೆಟ್‌ ವಾದಕ

ಇದನ್ನೂ ಓದಿ: ಥ್ರಿಲ್‌ ನೀಡಲು ರಮೇಶ್‌ ‘100’ ರೆಡಿ: ನ.19ಕ್ಕೆ ಚಿತ್ರ ರಿಲೀಸ್

Advertisement

ಅನ್ನದಾನ, ರಕ್ತದಾನದಂತೆ ನೇತ್ರದಾನವು ಶ್ರೇಷ್ಠ. ನಮ್ಮ ನಂತರ ಬೇರೆಯವರ ಬಾಳಿಗೆ ಬೆಳಕು ನೀಡುವ ಕೆಲಸ ಆಗಬೇಕು. ಜಗತ್ತಿನಲ್ಲಿ ಎಷ್ಟೋ ಜನರಿಗೆ ದೃಷ್ಟಿ ಇಲ್ಲದೇ ಅಂಧಕಾರದಲ್ಲಿ ಬದುಕುತ್ತಿದ್ದಾರೆ. ಅಂಥವರಿಗೆ ಈ ಸುಂದರ ಜಗತ್ತನ್ನು ನೋಡುವ ಅವಕಾಶ ಕಲ್ಪಿಸಿಕೊಟ್ಟಂತೆ ಆಗಲಿದೆ. ಈಗ ದಾನ ಮಾಡಿದರೂ ನಾವು ಸತ್ತ ನಂತರವೇ ಕಣ್ಣುಗಳನ್ನು ಪಡೆಯುವುದರಿಂದ ಯಾವುದೇ ತೊಂದರೆ ಇಲ್ಲ. ಯುವ ಸಮೂಹ ಯಾವುದೇ ಭಯವಿಲ್ಲದೇ ನೇತ್ರದಾನಕ್ಕೆ ಮುಂದಾಗಬೇಕು. -ಡಿಂಗ್ರಿ ನರೇಶ, ಸಿನಿಮಾ ನಟ, ರಾಯಚೂರು

-ಸಿದ್ದಯ್ಯಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next