Advertisement

ಕೇಬಲ್‌ ದೂರು ಕೋಶ ಸ್ಥಾಪನೆ 

11:41 AM Mar 22, 2017 | Team Udayavani |

ಉಡುಪಿ: ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ಸ್ (ರೆಗ್ಯುಲೇಶನ್‌) ಕಾಯಿದೆಯಡಿ ಜಿಲ್ಲಾ ಮಟ್ಟದಲ್ಲಿ ಕಣ್ಗಾವಲು ಸಮಿತಿ ರಚಿಸಲಾಗಿದ್ದು ಸಾರ್ವಜನಿಕರು ಅಹವಾಲು ಸಲ್ಲಿಸಲು ದೂರು ಕೋಶ ಆರಂಭಿಸಲಾಗಿದೆ. ಸ್ಥಳೀಯ ಕೇಬಲ್‌ಗ‌ಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತು ದೂರು/ಅಹವಾಲುಗಳು ಇದ್ದರೆ ಸಾರ್ವಜನಿಕರು ವಾರ್ತಾ ಇಲಾಖೆ ಕಚೇರಿಗೆ ಸಲ್ಲಿಸಬಹುದಾಗಿದೆ.

Advertisement

ಜಿಲ್ಲಾ ಮಟ್ಟದ ಕೇಬಲ್‌ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು, ನೋಂದಣಿ ಯಾಗಿರುವ ಎಲ್ಲ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳು 30 ದಿನಗಳ ಒಳಗೆ ನೋಂದ‌ಣಿ ಪತ್ರದ ಪ್ರತಿಯನ್ನು ವಾರ್ತಾ ಇಲಾಖೆಗೆ ಸಲ್ಲಿಸುವಂತೆ ನಿರ್ದೇಶಿಸಿದರು. ಮುಂದಿನ ಹಂತದಲ್ಲಿ ನೋಂದಣಿ ಪತ್ರ ನೀಡದ ಸಂಸ್ಥೆಗಳನ್ನು ಅನಧಿಕೃತ ಎಂದು ಪರಿಗಣಿಸಿ, ನೋಟಿಸ್‌ ನೀಡಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಕೇಬಲ್‌ ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ಸದಸ್ಯರಾದ ಎಸ್ಪಿ ಪರವಾಗಿ ಡಿಸಿಆರ್‌ಬಿ ರಾಮಕೃಷ್ಣ, ಶಿಕ್ಷಣ ತಜ್ಞ ರಾಮಕೃಷ್ಣ ರಾವ್‌, ಮನಃಶಾಸ್ತ್ರಜ್ಞ ಡಾ| ವಿರೂಪಾಕ್ಷ ದೇವರಮನೆ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಜಗದೀಶ್‌ ರಾವ್‌, ಸಮಾಜ ಶಾಸ್ತ್ರಜ್ಞ ದುಗ್ಗಪ್ಪಕಜೆಕಾರ್‌, ವಿಶ್ವಾಸದ ಮನೆಯ ಪ್ರೇಮಾ ಮಾರ್ಗರೆಟ್‌ ಕರ್ಕಡ, ಪವರ್‌ ಸಂಸ್ಥೆಯ ದಿವ್ಯಾರಾಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next