Advertisement

“ಗ್ರಾಮೀಣ ಜನರ ಅಗತ್ಯ ಪೂರೈಕೆ ಶ್ಲಾಘನೀಯ’

06:40 AM Mar 20, 2018 | Team Udayavani |

ಕಾಪು: ಲಯನ್ಸ್‌ ಕ್ಲಬ್‌ ಗ್ರಾಮೀಣ ಜನರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದು, ಸ್ಥಳೀಯ ಸಂಸ್ಥೆಗಳ ಯೋಜನೆಗಳೊಂದಿಗೆ ಕೈ ಜೋಡಿಸುವ ಮೂಲಕ ಜನಸ್ನೇಹಿಯಾಗುತ್ತಿದೆ ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ಉಜ್ಜನಪ್ಪ ಹೇಳಿದರು.

Advertisement

ಮಾ. 12ರಂದು ಇಲ್ಲಿಯ ಲಯನ್ಸ್‌ ಕ್ಲಬ್‌ಗ ಭೇಟಿ ನೀಡಿ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸ್ವತ್ಛತಾ ಅಭಿಯಾನದ ಅಂಗವಾಗಿ ಪುರಸಭೆಗೆ ಹಸಿಕಸ ಒಣಕಸ ಬೇರ್ಪಡಿಸಲು ಸುಮಾರು 100 ಬಕೆಟ್‌ಗಳನ್ನು ಮುಖ್ಯಾಧಿಕಾರಿ ರಾಯಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು. ಪೊಲೀಸ್‌ ಠಾಣೆಯಲ್ಲಿ ಎರಡು ಸೂಚನಾ ಫ‌ಲಕಗಳನ್ನು ಉದ್ಘಾಟಿಸಲಾಯಿತು.

ಕೆಎಸ್‌ಸಿಎಸ್‌ಟಿ ಆಯೋಜಿಸಿದ ಸ್ಪರ್ಧೆಯಲ್ಲಿ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ಪಡೆದ ಚಂದ್ರಕಾಂತ ಶೆಣೆ„ ಮತ್ತು ದೇಹಧಾಡ್ಯì ಸ್ಪರ್ಧೆಯಲ್ಲಿ ಮಿ| ಕರ್ನಾಟಕ ಬೆಳ್ಳಿ ಪದಕ ಪಡೆದ ಸ್ವರೂಪ್‌ ಎಂ. ಬಂಗೇರ ಅವರನ್ನು ಸಮ್ಮಾನಿಸಲಾಯಿತು.

ಲಯನ್ಸ್‌ ವಲಯಾಧ್ಯಕ್ಷ ಇಲಿಸ್‌ ಡಿ.ಸೋಜ, ಪ್ರಾಂತ್ಯ ಸಲಹೆಗಾರ ದೇವದಾಸ್‌ ಹೆಬ್ಟಾರ್‌, ಜಿಲ್ಲಾ ಪದಾಧಿಕಾರಿಗಳಾದ ತಲ್ಲೂರು ಶಿವರಾಂ ಶೆಟ್ಟಿ , ಸುರೇಶ್‌ ಶೆಟ್ಟಿ ಉಪಸ್ಥಿತರಿದ್ದರು.ಲಯನ್ಸ್‌ ಅಧ್ಯಕ್ಷ ಉದಯ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವರುಣ್‌ ಶೆಟ್ಟಿ ವಂದಿಸಿದರು. ಜಿಲ್ಲಾ ಸಂಯೋಜಕ ಹರೀಶ್‌ ಕೆ ನಾಯಕ್‌, ಉಪನ್ಯಾಸಕ ಶಿವಣ್ಣ  ಬಾಯಾರ್‌ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next