Advertisement

ಸಾಹಿತ್ಯ ಸಮ್ಮೇಳನದ ಫ‌ಲಶ್ರುತಿ ಅಗತ್ಯ

12:50 AM Jan 18, 2019 | Team Udayavani |

ಸಮ್ಮೇಳನಕ್ಕಾಗಿ ಸಮ್ಮೇಳನ ನಡೆಯುವ ಬದಲು ಸಮ್ಮೇಳನದಿಂದ ಫ‌ಲಶ್ರುತಿ ಸಿಗುವಂತಾಗಬೇಕು. ಅಲ್ಲಿ ಗಂಭೀರವಾದ ಚರ್ಚೆ  ನಡೆಯುವಂತಾಗಬೇಕು. ಈಗ ಸಮ್ಮೇಳನವೆಂದರೆ ಹಬ್ಬದ ವಾತಾವರಣ ಇರುತ್ತದೆ. ಸಮ್ಮೇಳನದ ನಿರ್ಣಯವೂ ಅನುಷ್ಠಾನವಾಗುವುದಿಲ್ಲ. 

Advertisement

ಉಡುಪಿ: ಜ.18ರಂದು ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ನಡೆಯುವ ಉಡುಪಿ ತಾ| ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಘಟಕ ಡಾ| ಗಣನಾಥ ಎಕ್ಕಾರು ಆಯ್ಕೆಯಾಗಿದ್ದಾರೆ. ಮೂಲತಃ ಮಂಗಳೂರು ತಾಲೂಕಿನ ಎಕ್ಕಾರಿನವರಾದ ಡಾ| ಗಣನಾಥರು, ಹತ್ತು ಪುಸ್ತಕಗಳ ರಚನೆ, ಪತ್ರಿಕೆಗಳಲ್ಲಿ ಲೇಖನಗಳು, ಜಾನಪದ ಮತ್ತು ಸಾಹಿತ್ಯತಜ್ಞರು. ಉಡುಪಿ ತಾ| ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ, ಉಡುಪಿಯಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಮೂರು ದಶಕಗಳಿಂದ ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಕಾಲೇಜುಗಳಲ್ಲಿ  ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ನೋಡಲ್‌ ಅಧಿಕಾರಿಯಾಗಿ, ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್ನೆಸ್ಸೆಸ್‌ ಕೋಶದಲ್ಲಿ ರಾಜ್ಯ ಸಂಪರ್ಕಾಧಿಕಾರಿ ಮತ್ತು ಸರಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದ ಭಾಗ ಇಂತಿದೆ:

-ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ಸ್ಥಾನ ಹಿಂದಿನಷ್ಟು  ಇಲ್ಲ ಎಂದೆನಿಸುತ್ತದೆಯೆ?
ಹಿಂದಿನ ತಲೆಮಾರಿನಲ್ಲಿದ್ದಷ್ಟು ಸಾಹಿತ್ಯಿಕ ಕೃಷಿ ಈಗ ಕಂಡು ಬಾರದಿರುವುದೇ ಈ ಅನಿಸಿಕೆಗೆ ಕಾರಣ. ಹಿಂದೆ ಬೇರೆ ಮಾಧ್ಯಮಗಳಿರಲಿಲ್ಲ, ಏನೇ ಇದ್ದರೂ ಸಾಹಿತ್ಯದ ಮೂಲಕವೇ ಅಭಿವ್ಯಕ್ತಿ ಗೊಳಿಸುತ್ತಿದ್ದರು. ಹಿಂದಿನ ರೀತಿಯ ಸಾಹಿತಿಗಳು ಈಗಿಲ್ಲ. 

– ಜಾನಪದ ಕಲಾವಿದರಿಗೆ ಸಿಗುವುದಕ್ಕಿಂತ ಹೆಚ್ಚಿನ ಸಾಮಾಜಿಕ, ಆರ್ಥಿಕ ಮನ್ನಣೆ ಅವರನ್ನು ಆಧರಿಸಿ ಅಧ್ಯಯನ ನಡೆಸುವ ಅಕಾಡೆಮಿಕ್‌ ವಿದ್ವಾಂಸರಿಗೆ ಸಿಗುತ್ತಿದೆಯೆ?
ಒಂದು ದಶಕದಿಂದ ಚಿತ್ರಣ ಬದಲಾಗಿದೆ. ಹಿಂದೆ ಅಕಾಡೆಮಿ ಪ್ರಶಸ್ತಿಗಳನ್ನು ಕೊಡುವಾಗ ವಿದ್ವಾಂಸ ರನ್ನೇ ಗುರುತಿಸುತ್ತಿದ್ದರು. ಈಗ ಒಂದು ದಶಕ ದಿಂದ ಕಲಾವಿದರನ್ನೇ ಗುರುತಿಸುತ್ತಿದ್ದಾರೆ. ವಿದ್ವಾಂಸರು ಕಲಾವಿದರಿಂದ ವಿಷಯ ಸಂಗ್ರಹಿಸಿ ಪ್ರಕಟಿಸುತ್ತಿದ್ದರು. ಈಗ ಜಾನಪದ ಕಲಾವಿದರು ಎಂದು ಹೇಳುವುದಕ್ಕಿಂತ ಅವರನ್ನು ಜಾನಪದ ಕವಿಗಳೆಂದೇ ಪರಿಗಣಿಸುತ್ತಿದ್ದಾರೆ. ಅವರಿಗೆ ಅದರ ಕಾಪಿರೈಟ್‌ ಕೂಡ ಇದೆ. 

– ಜಾನಪದ ಕಲಾವಿದರಿಗೆ ಅಕಾಡೆಮಿಕ್‌  ಶಿಕ್ಷಣ ಕೊಟ್ಟರೆ ಜಾನಪದ ಕಲೆ ಇನ್ನಷ್ಟು ವಿಜೃಂಭಿಸಬಹುದೆ?
ಖಂಡಿತವಾಗಿ. ಜಾನಪದ ಕಲಾವಿದ ರಿಗೆ ತರಬೇತಿ ಕೊಟ್ಟರೆ ಹೆಚ್ಚು ಅನುಕೂಲ ವಾಗು¤ದೆ. ಹಿಂದಿನ ತಲೆಮಾರಿನ ಕಲಾವಿದರು ಈಗಿನ ತಲೆಮಾರಿನ ಕಲಾವಿದರಿಗೆ ತಾತ್ವಿಕವಾಗಿ ವಿದ್ಯೆಯನ್ನು ಹಸ್ತಾಂತರಿಸಬೇಕು. ಈಗ ಹಾಗೆ ಆಗುತ್ತಿಲ್ಲ. ಇದಕ್ಕೆ ಸಾಮಾಜಿಕ, ಆರ್ಥಿಕ ಕಾರಣಗಳಿರ ಬಹುದು. ಕಲಾವಿದರನ್ನೇ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸಿದರೆ ಪರಿಣಾಮಕಾರಿ ಆಗುತ್ತದೆ. 

Advertisement

– ಜಾನಪದ ಅಧ್ಯಯನ ಸಂಶೋಧಕರು ಕೇವಲ ದಾಖಲೀ ಕರಣಕ್ಕೆ ಸೀಮಿತವಾಗುತ್ತಿದ್ದಾರೆಯೆ?
ಹೌದು. ಜಿಶಂಪರಂತಹ ಸಾಹಿತಿಗಳು ಇಂಟರ್‌ಲೈಸೇಶನ್‌ (ತಮ್ಮೊಳಗೆ ಒಂದಾಗುವುದು) ಆಗುತ್ತಿದ್ದರು. ಕೆಲವರು ಕೇವಲ ಮಾಹಿತಿ ಸಂಗ್ರಹ ಮತ್ತು ಅಧ್ಯಯನ ಮಾಡುತ್ತಾರೆ. ವಿಶೇಷವಾಗಿ ದಲಿತ ಹಿನ್ನೆಲೆಯಲ್ಲಿ ಬಂದ ಜಾನಪದ ವಿದ್ವಾಂಸರು ಸ್ವತಃ ಕಲಾವಿದರಾಗಿರುತ್ತಾರೆ. ಉದಾಹರಣೆಗೆ ವೀರಗಾಸೆ ಬಗ್ಗೆ ಅಧ್ಯಯನ ನಡೆಸುವವರಿಗೆ ವೀರಗಾಸೆ ಕುಣಿತವೂ ಗೊತ್ತಿರುತ್ತದೆ. ಹಿಂದೆ ಜರ್ಮನಿಯಿಂದ ಯಕ್ಷಗಾನ ಕುರಿತು ಅಧ್ಯಯನ ನಡೆಸಲು ಬಂದವರು ಸ್ವತಃ ಯಕ್ಷಗಾನವನ್ನು ಕಲಿತು ಅಧ್ಯಯನ ನಡೆಸುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next