Advertisement
ಪ್ರಸಕ್ತ ವರ್ಷದ ಆರಂಭದ ಎರಡು ತಿಂಗಳಲ್ಲಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಪತ್ತೆಯಾಗಿದ್ದವು. ಬಳಿಕ ಬೇಸಿಗೆಯಲ್ಲಿ ಅಷ್ಟೊಂದು ಹಾವಳಿ ಇರಲಿಲ್ಲ. ಸದ್ಯ ಜ.1 ರಿಂದ 29ರವರೆಗೆಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕೀಟಜನ್ಯಸಾಂಕ್ರಾಮಿಕ ರೋಗಗಳ ಹಾವಳಿಕಡಿಮೆ ಆಗಿದೆ. 2019ರಲ್ಲಿ 250 ಜನರಲ್ಲಿಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾಹಾಗೂ 2020ರಲ್ಲಿ 36 ಜನರಲ್ಲಿ ಡೆಂಘೀ, 17 ಜನರಲ್ಲಿ ಚಿಕೂನ್‌ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಈವರ್ಷದ ಆರು ತಿಂಗಳಲ್ಲಿ 29 ಜನರಲ್ಲಿ ಡೆಂಘೀ, 5 ಜನರಲ್ಲಿ ಚಿಕೂನ್‌ಗುನ್ಯಾ, ಒಬ್ಬರಲ್ಲಿ ಮೆದುಳು ಜ್ವರ ಪತ್ತೆಯಾಗಿದೆ.
Related Articles
Advertisement
ಮೂರು ವರ್ಷದಿಂದ ಶೂನ್ಯ ಸಾಧನೆ : ಜಿಲ್ಲೆಯಲ್ಲಿ 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ನೆರೆ ರಾಜ್ಯಗಳಿಂದ ಜಿಲ್ಲೆಗೆಆಗಮಿಸಿದವರಲ್ಲಿ 2019ರಲ್ಲಿ 17, 2020ರಲ್ಲಿ 8 ಹಾಗೂ2021ರಲ್ಲಿ ಒಬ್ಬರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ 2019ರಿಂದಜಿಲ್ಲೆಯಲ್ಲಿ ಮಲೇರಿಯಾ ಶೂನ್ಯ ಸಾಧನೆಯಾಗಿದ್ದು, ಸತತವಾಗಿಕಳೆದ ಮೂರು ವರ್ಷಗಳಿಂದ ಮಲೇರಿಯಾ ಮುಕ್ತ ಜಿಲ್ಲೆಯಾಗಿ ಧಾರವಾಡ ಹೊರ ಹೊಮ್ಮಿದೆ.
ಮಕ್ಕಳಲ್ಲಿಯೇ ಹೆಚ್ಚಿದ ಡೆಂಘೀ! : ಕೋವಿಡ್‌ನ 3ನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕದ ಮಧ್ಯೆ ಜಿಲ್ಲೆಯಲ್ಲಿ ಜ್ವರ, ಹೊಟ್ಟೆನೋವಿನಂತಹ ಲಕ್ಷಣಗಳಿಂದ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದೆ. ಇದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಧಾರವಾಡ ಮಾತ್ರವಲ್ಲ, ಪಕ್ಕದ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿಮತ್ತು ಹಾವೇರಿ ಜಿಲ್ಲೆಯಲ್ಲಿಯೂ ಮಕ್ಕಳಲ್ಲಿ ಡೆಂಘೀ ಜ್ವರ ಹೆಚ್ಚಾಗಿಕಂಡುಬರುತ್ತಿದೆ. ಆದರೆ ಒಂದು ವಾರದಲ್ಲಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ಲಭಿಸಿದರೆ ಕೂಡಲೇ ಗುಣಮುಖರಾಗಿ ಆಸ್ಪತ್ರೆಯಿಂದ ಮರಳುತ್ತಿದ್ದಾರೆ.
ಹೈಟೆಕ್ ಸೊಳ್ಳೆ ಪರದೆ ಪರಿಚಯ! : ಕೀಟಜನ್ಯ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಲು ಆರೋಗ್ಯ ಇಲಾಖೆ ಕೀಟನಾಶಕ ಅಂತರ್ಗತ ಸೊಳ್ಳೆ ಪರದೆಪರಿಚಯಿಸಿದೆ. ಈ ಪರದೆಗೆ ಬಳಸಿರುವ ದಾರದಲ್ಲಿಯೇ ಕೀಟಜನ್ಯಗಳನ್ನು ನಾಶಮಾಡುವ, ದೂರವಿಡುವ ಔಷಧಿ ಗುಣವಿದೆ. ಈ ಸೊಳ್ಳೆ ಪರದೆಗಳು ಜಿಲ್ಲೆಗೆ 1800 ಬಂದಿದ್ದು, ಈಗಾಗಲೇ 982ವಿತರಿಸಲಾಗಿದೆ. ಧಾರವಾಡ ತಾಲೂಕಿನಮಂಡಿಹಾಳ ಹಾಗೂ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿಪ್ರತಿ ಮನೆಗೆ ಈ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಉಳಿದಿರುವ ಹೈಟೆಕ್ ಸೊಳ್ಳೆ ಪರದೆಗಳನ್ನು ಹೊರ ರಾಜ್ಯಗಳಿಂದ ವಲಸೆ ಬಂದವರಿಗೆನೀಡಲಾಗುತ್ತಿದೆ. ಹುಬ್ಬಳ್ಳಿಯ ಗೋಕುಲ್‌ರಸ್ತೆಯ ಕೈಗಾರಿಕಾ ಪ್ರದೇಶ, ಧಾರವಾಡದಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿನಅನ್ಯ ರಾಜ್ಯ ವಲಸಿಗರಿಗೆ ಹಾಗೂ ನವಲಗುಂದ ತಾಲೂಕಿನ ಕಾಲುವೆ ಕೆಲಸಕ್ಕೆಬಂದಿರುವ ಅನ್ಯ ರಾಜ್ಯ ಹಾಗೂ ಅಂತರಜಿಲ್ಲೆಯ ಕಾರ್ಮಿಕರಿಗೆ ಈ ಹೈಟೆಕ್ ಸೊಳ್ಳೆಪರದೆ ವಿತರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪಶ್ಚಿಮಘಟ್ಟದ ಸೆರೆಗು ಹೊಂದಿರುವ ಜಿಲ್ಲೆಯ ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕಿನಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಮಂಗಗಳ ಉಣ್ಣೆಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆ ನೆಗೆಟಿವ್ ಬಂದಿರುವ ಕಾರಣ ಕ್ಯಾಸನೂರು ಅರಣ್ಯ ಕಾಯಿಲೆಯ(ಮಂಗನ ಕಾಯಿಲೆ) ಆತಂಕವಿಲ್ಲ. ಇದಲ್ಲದೇ ಫೈಲೇರಿಯಾ(ಆನೆಕಾಲು) ರೋಗವೂ ಕಂಡು ಬಂದಿಲ್ಲ. –ಡಾ| ಟಿ.ಪಿ. ಮಂಜುನಾಥ, ಜಿಲ್ಲಾ ಕೀಟಶಾಸ್ತ್ರಜ್ಞ
ಶಶಿಧರ್ ಬುದ್ನಿ