Advertisement

ಅನುಕಂಪದ ಆಧಾರದಲ್ಲಿ ಕಾರ್ಯಕರ್ತೆಯರ ನೇಮಕಾತಿಗೆ ಸರಕಾರ ಒಪ್ಪಿಗೆ

11:42 PM Mar 06, 2022 | Team Udayavani |

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆ ಸೇವೆಯಲ್ಲಿರುವಾಗ ಮರಣ ಹೊಂದಿ ದರೆ ಅನುಕಂಪದ ಆಧಾರದಲ್ಲಿ ಷರತ್ತುಗಳಿಗೆ ಒಳಪಟ್ಟು ಮಗಳು ಅಥವಾ ಸೊಸೆಯನ್ನು ಆ ಹುದ್ದೆಗೆ ನೇಮಿಸುವುದು ಸಹಿತ ಹಲವು ಬೇಡಿಕೆ
ಗಳ ಈಡೇರಿಕೆಗೆ ಸರಕಾರ ಒಪ್ಪಿಕೊಂಡಿದ್ದು, ಪರಿ ಣಾಮ ಅಂಗನವಾಡಿ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆದುಕೊಂಡರು.

Advertisement

ರಾಜ್ಯ ಅಂಗನವಾಡಿ ನೌಕಕರರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಪ್ರತಿಕ್ರಿಯಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಕಲ್ಯಾಣ ಇಲಾಖೆ ಸಚಿವರು ಮಧ್ಯ ಪ್ರವೇಶಿಸಿ ಅನುಕಂಪದ ಆಧಾರದ ಮೇಲೆ ಮಗಳು ಮತ್ತು ಸೊಸೆಗೆ ಆ ಕೆಲಸ ನೀಡುವುದು ಸಹಿತ ಕೆಲವು ಬೇಡಿಕೆಗಳ ಈಡೇರಿಕೆಗೆ ಸಹಮತ ವ್ಯಕ್ತಪಡಿಸಿ ಸುತ್ತೋಲೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಜತೆಗೆ ಕೋಳಿ ಮೊಟ್ಟೆ ಹಣವನ್ನು ಮುಂಗಡ ವಾಗಿ ನೀಡಲು ಕೂಡ ಒಪ್ಪಿಕೊಂಡಿದ್ದಾರೆ. ಅಂಗನವಾಡಿ ಸಹಾಯಕಿಯರಿಗೆ ಮತ್ತು ಮಿನಿ ಕಾರ್ಯಕರ್ತೆಯರಿಗೆ ಸೇವಾ ಜ್ಯೇಷ್ಠತೆಯನ್ನು ಸಮಪ್ರಮಾಣದಲ್ಲಿ ನೀಡಲು ಶಿಫಾರಸು ಮಾಡು ವುದಾಗಿಯೂ ಭರವಸೆ ನೀಡಿದ್ದಾರೆ ಎಂದರು.

ಎಲ್‌ಕೆಜಿ, ಯುಕೆಜಿ ಆರಂಭಿಸಲಿ
ಸರಕಾರ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರದಲ್ಲೆ ತರೆಯಬೇಕು. ಸರಕಾರವೇ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡುವುದು ಸಹಿತ ವಿವಿಧ ಬೇಡಿಕೆ ಈಡೇರಿಕೆ ಸಂಬಂಧ ಸೋಮವಾರ ಅಧಿಕಾರಿಗಳ ಜಂಟಿ ಸಭೆ ನಡೆಯಲಿದೆ ಎಂದು ವರಲಕ್ಷ್ಮೀ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next