Advertisement
ಸೋಮವಾರ ಕೇಂದ್ರ ಸರಕಾರದ ಜತೆ ಐದು ಸುತ್ತಿನ ಮಾತುಕತೆ ನಡೆಸಿದ್ದ 33 ಸಂಘಟನೆಗಳ ನಾಯಕರು ಹರಿಯಾಣ- ದಿಲ್ಲಿ ಗಡಿ ಸಿಂಘುವಿನಲ್ಲಿ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು. ಇದರ ಮಧ್ಯೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಾತುಕತೆ ನಡೆಸಿದರು. ಇದಾದ ಅನಂತರ ಮಾತನಾಡಿದ ಥೋಮರ್, ರೈತರ ಜತೆ ಮತ್ತೂಂದು ಸುತ್ತಿನ ಮಾತುಕತೆ ನಡೆಸುವುದಾಗಿ ಹೇಳಿದರು. ಈಗಾಗಲೇ ರೈತರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದರು. ಅಲ್ಲದೆ ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಿಲ್ಲ. ವಿವಿಧ ರಾಜ್ಯಗಳ 10 ರೈತ ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದೇವೆ. ಈ ರೈತ ಸಂಘಟನೆಗಳು, ಮೂರು ಕಾಯ್ದೆಗಳಿಗೆ ಬೆಂಬಲ ನೀಡಿವೆ ಎಂದು ಥೋಮರ್ ಹೇಳಿದರು.
ದಿಲ್ಲಿ -ಜೈಪುರ ಹೆದ್ದಾರಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಹರಿಯಾಣದಿಂದ ದಿಲ್ಲಿಗೆ ಬರುತ್ತಿದ್ದ ರೈತರನ್ನು ತಡೆದ ಪೊಲೀಸರು ವಾಪಸ್ ಕಳುಹಿಸಲು ಯತ್ನಿಸಿದರು. ಈ ವೇಳೆ ಘರ್ಷಣೆ ಉಂಟಾಯಿತು. ಪೊಲೀಸರು ರೈತರು ಬಂದಿದ್ದ ಟ್ರ್ಯಾಕ್ಟರ್‌ಗಳ ಕೀಗಳನ್ನು ಪಡೆದರು. ಕಡೆಗೆ 20 ಮಂದಿಯನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ರೈತರ ವಿರುದ್ಧ ಯಾವುದೇ ಪ್ರತಿಗಾಮಿ ಹೆಜ್ಜೆ ಇರಿಸುವುದಿಲ್ಲ. ಭಾರತದಲ್ಲಿ ಕೃಷಿ ವಲಯ ಮಾತೃ ವಲಯದಂತಿದೆ. ಇದರ ಸುಧಾರಣೆಗಾಗಿ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಚರ್ಚೆ ಮತ್ತು ಮಾತುಕತೆಗೆ ಸರಕಾರ ಸದಾ ಸಿದ್ಧವಿದೆ.
ರಾಜನಾಥ್ ಸಿಂಗ್, ರಕ್ಷಣ ಸಚಿವ