Advertisement

ಪ್ರಧಾನಿ ಮೋದಿ ಮಾತಿಗೆ ಮನ್ನಣೆ : ಕುಂಭಮೇಳ ಅಂತ್ಯ

09:09 PM Apr 17, 2021 | Team Udayavani |

ನವದೆಹಲಿ : ದೇಶದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಅಂತ್ಯ ಮಾಡಲಾಗಿದೆ.

Advertisement

ಕುಂಭ ಮೇಳವು ಕೋವಿಡ್ ಹೆಚ್ಚಿಸುತ್ತದೆ ಎಂಬ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಈ ಬಾರಿ ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪಿಗೆ ನೀಡಿರುವ ಸಾಧುಗಳು ಕುಂಭಮೇಳವನ್ನು ಅಂತ್ಯ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ಮಿತಿಮೀರುತ್ತಿದೆ. ಕುಂಭಮೇಳದಲ್ಲಿ ಅನೇಕರು ಸೋಂಕಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಹಿಂದು ಧರ್ಮ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್​ ಅವರೊಂದಿಗೆ ಫೋನ್​ ಮೂಲಕ ಚರ್ಚೆ ನಡೆಸಿದ್ದೇನೆ. ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಮನವಿಯನ್ನೂ ಮಾಡಿದ್ದೇನೆ ಎಂದಿದ್ದರು.

ಈ ವಿಚಾರವಾಗಿ ಧನಾತ್ಮಕ ಪ್ರತಿಕ್ರಿಯೆ ನೀಡಿರುವ ಜುನಾ ಅಖಾಡದ ಅವಧೇಶಾನಂದ ಗಿರಿ ಜಿ ಮಹಾರಾಜ್, ಭಾರತದ ಜನರನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆ. ಕೋವಿಡ್ ವೈರಸ್​ ಹೆಚ್ಚುತ್ತಿರುವುದರಿಂದ ಎಲ್ಲಾ ದೇವರುಗಳನ್ನು ಇಂದೇ (ಏಪ್ರಿಲ್​ 17) ವಿಸರ್ಜನೆ ಮಾಡಿದ್ದೇವೆ ಎಂದಿದ್ದಾರೆ. ಏಪ್ರಿಲ್​ 1ರಂದು ಕುಂಭಮೇಳ ಆರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next