Advertisement

ಸ್ವಂತ ಮೂಲದಿಂದ ಹಣ ಸಂಗ್ರಹಕ್ಕೆ ಒತ್ತು

12:00 PM Mar 26, 2017 | |

ಬೆಂಗಳೂರು: ಪಾಲಿಕೆಯ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹವಾಗುವ ಆದಾಯಕ್ಕೆ ಅನುಗುಣವಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ ಕಾರ್ಯಕ್ರಮಗಳನ್ನು ಘೋಷಿಸಿದ್ದು, ಪಾಲಿಕೆಯ ವಿವಿಧ ಮೂಲಗಳಿಂದ 4,997.53 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 4249.82 ಕೋಟಿ ರೂ. ಅನುದಾನ ನಿರೀಕ್ಷಿಸಿದ್ದು, ಪಾಲಿಕೆ ಮೂಲಗಳಿಂದಲೇ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಆಸ್ತಿಗಳ ಪರಿಶೀಲನೆ, ಪ್ರತಿ ಮನೆಗೆ ಡಿಜಿಟಲ್‌ ಸಂಖ್ಯೆ ನೀಡುವುದು ಮತ್ತು ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯ ಮೂಲಕ ತಪ್ಪಾಗಿ ಮತ್ತು ಕಡಿಮೆ ವಿಸ್ತೀರ್ಣ ಘೋಷಣೆ ಮಾಡಿಕೊಂಡಿರುವ ಮಾಲ್‌, ಟೆಕ್‌ಪಾರ್ಕ್‌ ಹಾಗೂ ಕೈಗಾರಿಕೆ ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೇ ಮೂಲಕ ಪತ್ತೆ ಹೆಚ್ಚಲು ತೀರ್ಮಾನಿಸಿದೆ. 

ಅದರಂತೆ ಆಸ್ತಿ ತೆರಿಗೆಯಿಂದ 2600 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಪಾಲಿಕೆ ಹೊಂದಿದೆ. ಉಳಿದಂತೆ ಉಪಕರಗಳಿಂದ 624 ಕೋಟಿ ರೂ., ಸುಧಾರಣೆ ಶುಲ್ಕದಿಂದ 140 ಕೋಟಿ ರೂ., ದಂಡದ ಮೂಲಕ 175 ಕೋಟಿ ರೂ., ಘನತ್ಯಾಜ್ಯ ಕರದಿಂದ 50 ಕೋಟಿ ರೂ. ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳ ಮೇಲೆ ಸೇವಾ ಶುಲ್ಕ 65 ಕೋಟಿ ರೂ. ಸೇರಿ ಒಟ್ಟಾರೆಯಾಗಿ 3,726.25 ಕೋಟಿ ರೂ. ತೆರಿಗೆ ನಿರೀಕ್ಷಿಸಲಾಗಿದೆ. 

ನಗರದಲ್ಲಿರುವ ಅನಕೃತ ಜಾಹೀರಾತು ಫ‌ಲಕಗಳ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ, ಹೊಸ ಜಾಹೀರತು ನೀತಿ ಜಾರಿಗೆ ತಂದು, ಜಾಹೀರಾತು ಬೈಲಾಗಳಲ್ಲಿ ಸೂಕ್ತ ತಿದ್ದುಪಡಿ ತರುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದ್ದು, ಅಂಗಡಿ ಮುಂಗಟ್ಟುಗಳಲ್ಲಿನ ಸ್ವಂತ ಜಾಹೀರಾತು ಫ‌ಲಕಗಳ ಮೇಲಿನ ತೆರಿಗೆ ವಸೂಲಾತಿಗೆ ಸ್ವಯಂ ಘೋಷಿತ ತೆರಿಗೆ ಪದ್ಧತಿಯನ್ನು (ಎಸ್‌ಎಎಸ್‌) ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಒಟ್ಟಾರೆಯಾಗಿ ಜಾಹೀರಾತು ತೆರಿಗೆಯಿಂದ 82.50 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.

ನಗರದಲ್ಲಿ ಅನಕೃತ ಕೇಬಲ್‌ಗ‌ಳನ್ನು ತೆರವುಗೊಳಿಸಲು ಮತ್ತು ನಿಯಂತ್ರಿಸಲು ಜಾಗೃತ ದಳ ರಚನೆ, ಒಎಫ್ಸಿ ಕೇಬಲ್‌ ಅಳವಡಿಸಿರುವ ಸಂಸ್ಥೆಗಳಿಂದ ನೆಲಬಾಡಿಗೆ ಸಂಗ್ರಹಿಸಲು ಅನುವಾಗುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಅನಕೃತವಾಗಿ ರಸ್ತೆ ಅಗೆದ ಪ್ರಕರಣಗಳಲ್ಲಿ ವಯಕ್ತಿಕ ಮನೆಗಳಿಗೆ 10 ಲಕ್ಷ ರೂ. ಹಾಗೂ ಸಂಸ್ಥೆಗಳಿಗೆ ಅಥವಾ ಏಜೆನ್ಸಿಗಳಿಗೆ 25 ಲಕ್ಷ ರೂ. ದಂಡ ವಿಸಲಿದೆ.

Advertisement

ಇದರೊಂದಿಗೆ ರಸ್ತೆ ಅಗೆತ ಆನ್‌ಲೈನ್‌ಗೊಳಿಸಲಾಗಿರುವುದರಿಂದ ಒಟ್ಟಾರೆಯಾಗಿ ಈ ವಿಭಾಗದಿಂದ 350.05 ಕೋಟಿ ರೂ. ತೆರಿಗೆ ಸಂಗ್ರಹವಾಗುವ ಮತ್ತು ಒಟ್ಟಾರೆಯಾಗಿ ನಗರ ಯೋಜನೆ ವಿಭಾಗದಿಂದ ಒಟ್ಟು 461.85 ಕೋಟಿ ತೆರಿಗೆ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ. 

ನಿಯಮ ಮೀರಿದರೆ ಮುಟ್ಟುಗೋಲು!
ನಗರದಲ್ಲಿ ನೆಲ ಮತ್ತು ನಾಲ್ಕು ಅಂತಸ್ತಿನ ಕಟ್ಟಡ ಮತ್ತು ಮೇಲ್ಪಟ್ಟ ಬಹು ಮಹಡಿ ಕಟ್ಟಡಗಳು ಪರವಾನಗಿ ಪಡೆದು, ನಿರ್ಮಾಣಕ್ಕೂ ಮೊದಲು ನೆಲ ಅಂತಸ್ತನ್ನು ಕರಾರು ಪತ್ರದ ಮೂಲಕ ಸಾಂಕೇತಿಕ ಮೊತ್ತ 100 ರೂ. ಕ್ರಯಕ್ಕೆ ನೋಂದಣಿ ಮಾಡಿಸಬೇಕು. ಮಾಲೀಕರು ಕಟ್ಟಡ ನಿರ್ಮಾಣದ ನಂತರ ಪಾಲಿಕೆಯಿಂದ ಸ್ವಾಧೀನಾನುಭವ ಪತ್ರ ಪಡೆಯುವ ಮುನ್ನ ಪರವಾನಗಿಗೆ ಅನುಗುಣವಾಗಿ ಕಟ್ಟಡ ನಿರ್ಮಾಣವಾಗಿದ್ದರೆ,

ನೋಂದಣಿಯಾಗಿದ್ದ ಜಾಗವನ್ನು ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ಒಂದೊಮ್ಮೆ ನಿಯಮಗಳನ್ನು ಉಲ್ಲಂ ಸಿರುವುದು ಕಂಡು ಬಂದರೆ ಜಾಗವನ್ನು ಬಿಬಿಎಂಪಿ ಮುಟ್ಟುಗೋಲು ಹಾಕಿಕೊಳ್ಳಲಿದೆ. ಇದಕ್ಕೆ ಸಂಬಂಸಿದಂತೆ ಕಟ್ಟಡಗಳ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಪಾಲಿಕೆ ಸಲ್ಲಿಸಿದೆ ಎಂದು ಬಜೆಟ್‌ನಲ್ಲ ಉಲ್ಲೇಖೀಸಲಾಗಿದೆ.

ಕಳೆದ ಬಾರಿಯ ಅನುದಾನ ಎಲ್ಲಿ ಹೋಯ್ತು?
ಬೆಂಗಳೂರು:
ಕಳೆದ ಬಜೆಟ್‌ನಲ್ಲಿ ಬಿಬಿಎಂಪಿಗೆ 7,300 ಕೋಟಿ ಅನುದಾನ ಘೋಷಿಸಿದ್ದ ರಾಜ್ಯ ಸರ್ಕಾರ, ಬಿಡುಗಡೆ ಮಾಡಿದ್ದು ಮಾತ್ರ 1,300 ಕೋಟಿ ರೂ. ಉಳಿದ 5,973 ಕೋಟಿ ರೂ. ಏನಾಯ್ತು ಎಂಬ ಬಗ್ಗೆ ಪ್ರಸ್ತುತ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಹೀಗಾಗಿ ಕಳಪೆ ಬಜೆಟ್‌ ಇದಾಗಿದೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಟೀಕಿಸಿದರು.

ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ 2,300 ಕೋಟಿ ರೂ.ಗಳ ಕುರಿತು ಮಾತ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕಳೇದ ಬಾರಿ ನೀಡದೆ ಉಳಿದ ಅನುದಾನ ಎಲ್ಲಿ ಹೋಯಿತು ಎಂದು ಮಾಹಿತಿ ನೀಡಲ್ಲ. ಜೊತೆಗೆ ಹೊಸ ಕಾರ್ಯಕ್ರಮಗಳಿಲ್ಲದ, ಅನುದಾನ ಹಂಚಿಕೆಯಲ್ಲಿ ತಾರತಮ್ಯದಿಂದ ಕೂಡಿರುವುದು ಈ ಬಾರಿಯ ಪಾಲಿಕೆ ಬಜೆಟ್‌ ವಿಶೇಷತೆ ಎಂದರು.

ಕಾಂಗ್ರೆಸ್‌ ಶಾಸಕರು ಮತ್ತು ಪಾಲಿಕೆ ಸದಸ್ಯರು ಪ್ರತಿನಿಸುವ ವಿಧಾನಸಭೆ ಕ್ಷೇತ್ರ ಹಾಗೂ ವಾರ್ಡ್‌ಗಳಿಗೆ ಹಣ ಹಂಚಿಕೆ ಮಾಡಲಾಗಿದೆ. ಆದರೆ, ಬಿಜೆಪಿ ಶಾಸಕರು ಮತ್ತು ಪಾಲಿಕೆ ಸದಸ್ಯರಿರುವ ಕ್ಷೇತ್ರಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ದೂರಿದರು.

ರಾಜಧಾನಿಯ ಜನತೆಗೆ ಭ್ರಮನಿರಸನ ಉಂಟು ಮಾಡಿರುವ ಬಜೆಟ್‌ ಇದಾಗಿದ್ದು, ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ವಿಶೇಷ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಅನುದಾನ ಹಂಚಿಕೆ ಸರಿಪಡಿಸದಿದ್ದರೆ ಬಜೆಟ್‌ ಅನುಮೋದನೆಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಅಭಿವೃದ್ ದೃಷ್ಟಿಯಿಂದ 198 ವಾರ್ಡ್‌ಗಳನ್ನು ಸಮನಾಗಿ ಕಾಣಬೇಕು ಎಂದು ಆಗ್ರಹಿಸಿದರು.

ಕಾಮಗಾರಿ ಶೀಘ್ರ ಆರಂಭ
ರಾಜ್ಯ ಸರ್ಕಾರದಿಂದ 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ 7300 ಕೋಟಿ ರೂ. ಅನುದಾನಕ್ಕೆ ಈಗಾಗಲೇ ಟೆಂಡರ್‌, ಸಮಗ್ರ ಕ್ರಿಯಾ ಯೋಜನೆ ಸೇರಿದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದೆ. ಸರ್ಕಾರದಿಂದ ಅನುಮೋದ®ಯೂೆ ಸಿಕ್ಕಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ  89.36 ಕೋಟಿ ಅನುದಾನ
ಪಾಲಿಕೆಯ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳ ಉನ್ನತೀಕರಣ ಮತ್ತು ಅಭಿವೃದ್ಗೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಸಕ್ತ ಬಜೆಟ್‌ನಲ್ಲಿ 89.36 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಶಾಲೆ, ಕಾಲೇಜು ಕಟ್ಟಡಗಳ ಉನ್ನತೀಕರಣಕ್ಕೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ 20 ಕೋಟಿ, ಸಿವಿಲ್‌ ಕಾಮಗಾರಿಗಳ ನಿರ್ವಹಣೆ ಮತ್ತು ದುರಸ್ತಿಗೆ 15 ಕೋಟಿ, ಶಾಲೆ, ಕಾಲೇಜುಗಳಲ್ಲಿ ಸಿಸಿ ಟಿವಿ ಕ್ಯಾಮೆರಾ, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಶುದ್ಧ ಕುಡಿಯುವ ನೀರು ಒದಗಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಆರೋಗ್ಯ ವಿಮೆಗಾಗಿ 1.75 ಕೋಟಿ ರೂ., ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸಲು 15 ಲಕ್ಷ ರೂ. ಅನುದಾನ ನಿಗದಿಯಾಗಿದೆ.

ಸಿಇಟಿ ಮತ್ತು ಕಂಪ್ಯೂಟರ್‌ ತರಬೇತಿಗೆ 2 ಕೋಟಿ ರೂ., ಎಲ್ಲ ಶಾಲೆ, ಕಾಲೇಜು ಆವರಣದಲ್ಲಿ ಮಳೆ ಕೊಯ್ಲು ಪದ್ಧತಿ ಅನುಷ್ಠಾನಕ್ಕೆ ಒಂದು ಕೋಟಿ, ಕ್ರೀಡಾ ಸಾಮಗ್ರಿಗಳ ವಿತರಣೆಗೆ 50 ಲಕ್ಷ ಹಾಗೂ ಉದ್ಯಾನ ಅಭಿವೃದ್ಗಾಗಿ 1 ಕೋಟಿ ರೂ. ಮೀಸಲಿಡಲಾಗಿದೆ.

ಜನರಿಗೆ ನೀಡಿದ ಭರವಸೆ ಈಡೇರಿಸಿದ್ದೇವೆ: ಮೇಯರ್‌
ಜನರಿಗೆ ನೀಡಿದ ಭರವಸೆಯಂತೆ ಉತ್ತಮ, ಜನಪರ ಬಜೆಟ್‌ ನೀಡಲಾಗಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಆದಾಯ ಮೂಲಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನಗಳನ್ನು ಗಣನೆಗೆ ತೆಗೆದುಕೊಂಡು ವಾಸ್ತವಿಕ ಬಜೆಟ್‌ ಮಂಡಿಸಿದ್ದು, ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

2016-17ನೇ ಸಾಲಿನ ಬಜೆಟ್‌ ಅಂಶಗಳಲ್ಲಿ ಶೇ.60ರಷ್ಟು ಅನುಷ್ಠಾನವಾಗಿದ್ದು, ಪ್ರಸಕ್ತ ಬಜೆಟ್‌ ಶೇ.90ರಿಂದ 95ರಷ್ಟು ಂಶಗಳ ಅನುಷ್ಠಾನದ ಗುರಿ ಹೊಂದಲಾಗಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಎಲ್ಲ ಅಂಶಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದು, ತಾರತಮ್ಯ ಮಾಡದೆ ಎಲ್ಲ ವಾರ್ಡ್‌ಗಳಿಗೆ ಸಮನಾಗಿ ಅನುದಾನ ಹಂಚಲಾಗಿದೆ ಎಂದು ಸ್ಪಷ್ಟಪಡಿಸಿದರು.

* 1.21 ಕೋಟಿ ರೂ. ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ ಕೊಟ್ಟ ಅನುದಾನ 

ಪ್ಲಾಟಿನಂ ಬಜೆಟ್‌…
ಬಿಬಿಎಂಪಿ ಬಜೆಟ್‌ ಮಂಡಿಸಲು ಆಗಮಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ಕೈಯಲ್ಲಿದ್ದ ಸ್ಟೀಲ್‌ ಕೋಟೆಡ್‌ ಸೂಟ್‌ಕೇಸ್‌ ಗಮನ ಸೆಳೆಯಿತು. ಸಾಮಾನ್ಯವಾಗಿ ಲೆದರ್‌ ಸೂಟ್‌ಕೇಸ್‌ನಲ್ಲಿ ಬಜೆಟ್‌ ಪುಸ್ತಕವನ್ನು ಇರಿಸಿ ಕೌನ್ಸಿಲ್‌ಗೆ ತೆಗೆದುಕೊಂಡು ಬರುವುದು ವಾಡಿಕೆ. ಆದರೆ, ಈ ಬಾರಿ ವಿಶೇಷವಾಗಿ ಸ್ಟೀಲ್‌ ಕೋಟೆಡ್‌ ಸೂಟ್‌ಕೇಸ್‌ನಲ್ಲಿ ಬಜೆಟ್‌ನ ಪ್ರತಿ ಇರಿಸಲಾಗಿತ್ತು.  ಪ್ರತಿಪಕ್ಷ ಸದಸ್ಯರು ಇದೇನು ಪ್ಲಾಟಿನಂ ಸೂಟ್‌ಕೇಸ್‌ ತಂದಿದ್ದಾರಾ ಎಂದು ಕಿಚಾಯಿಸಿದಾಗ, ಕಾಂಗ್ರೆಸ್‌ ಸದಸ್ಯ ಸಂಪತ್‌ರಾಜ್‌ ಹೌದು, ಇದು ಪ್ಲಾಟಿನಂ ಸೂಟ್‌ಕೇಸ್‌ ಹೀಗಾಗಿ  ಈ ಬಾರಿ ನಗರದ ಜನತೆಗೆ ಪ್ಲಾಟಿನಂ ಬಜೆಟ್‌ ನೀಡ್ತೇವೆ ಎಂದು ಚಟಾಕಿ ಹಾರಿಸಿದರು.

ಎಷ್ಟು ಕಷ್ಟ ತಿಳಿಯಿತೇ?
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್‌ ಭಾಷಣ ಮಾಡಲು ಮುಂದಾದಾಗ ಮಾಜಿ ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಅವರು, ಗುಣಶೇಖರ್‌ ಅವರೇ ಕೆಎಂಸಿ ಕಾಯ್ದೆಯಲ್ಲಿ ಫೆಬ್ರುವರಿ ತಿಂಗಳ ಅಂತ್ಯದೊಳಗೆ ಬಜೆಟ್‌ ಮಂಡಿಸಬೇಕು ಎಂದು ನೀವೇ ಹಿಂದೆ ಹೇಳುತ್ತಿದ್ದಿರಿ. ಇದೀಗ ನೀವು ಮಾರ್ಚ್‌ನಲ್ಲಿ ಮಂಡಿಸುತ್ತಿದ್ದೀರಾ. ಬಜೆಟ್‌ ಮಂಡಿಸುವುದು ಎಷ್ಟು ಕಷ್ಟ ಎಂದು ತಿಳಿಯಿತೇ ಎಂದು ಕಾಲೆಳೆದರು.

“ಬಿಬಿಎಂಪಿಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆರ್ಥಿಕ ಶಿಸ್ತು ಮೂಡಿಸುವ ಜತೆಗೆ ನಗರದ ಸರ್ವಾಂಗೀಣ ಅಭಿವೃದ್ಗೆ ಆದ್ಯತೆ ನೀಡಿರುವುದು ಅಭಿನಂದನಾರ್ಹ’.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಬಜೆಜ್‌ ಕುರಿತು ಈಗಲೇ ಏನೂ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ನಂತರದಲ್ಲಿ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಲಾಗುವುದು.
– ಎಂ. ಆನಂದ್‌, ಉಪ ಮೇಯರ್‌

ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕಿಂಗ್‌ ನಿರ್ಮಾಣ ಫ‌ಲ ನೀಡುವುದಿಲ್ಲ. ಸಂಚಾರದಟ್ಟಣೆ ತಗ್ಗಿಸಲು ಮೆಟ್ರೊ, ಮಾನೊದಂತಹ ಯೋಜನೆಗಳಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಆರ್ಥಿಕ ನೆರವು ನೀಡಬೇಕಿತ್ತು. 
– ಪ್ರೊ ಶ್ರೀಹರಿ, ಸಂಚಾರ ತಜ್ಞರು 

ಬಡ ಜನರ ಅನುಕೂಲಕ್ಕೆ ಬೈಸಿಕಲ್‌, ಹೊಲಿಗೆ ಯಂತ್ರ ನೀಡಿರುವುದು ಅಭಿನಂದನೀಯ. ಜೆಡಿಎಸ್‌ನಿಂದ ನೀಡಿದ್ದ ಹಲವು ಸಲಹೆಗಳನ್ನು ಪರಿಗಣಿಸದೆ ಇರುವುದನ್ನು ಚರ್ಚೆಯಲ್ಲಿ ಪ್ರಸ್ತಾಪಿಸುತ್ತೇವೆ. 
– ಗೋಪಾಲಯ್ಯ, ಜೆಡಿಎಸ್‌ ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next