ಮದುಮಲೈ: ಸೋಮವಾರ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದ ‘ದಿ ಎಲೆಫೆಂಟ್ ವಿಸ್ಪರರ್’ ಪ್ರಶಸ್ತಿ ಪಡೆದಿದೆ. ಈ ಸಾಕ್ಷ್ಯಚಿತ್ರವು ತಮಿಳುನಾಡಿನ ಮದುಮಲೈ ಕಾಡಿನ ಆನೆ ಮತ್ತು ಅದನ್ನು ಸಾಕುವ ಇಬ್ಬರ ಬಗೆಗಿನ ಕಥೆಯಾಗಿದೆ. ಸಾಕ್ಷ್ಯಚಿತ್ರವು ಆಸ್ಕರ್ ವೇದಿಕೆಯಲ್ಲಿ ಪುರಸ್ಕಾರ ಪಡೆದ ಬಳಿಕ ಇದೀಗ ಮದುಮಲೈ ತೆಪ್ಪಕಾಡು ಆನೆ ಬಿಡಾರ ಪ್ರವಾಸಿಗರ ತಾಣವಾಗಿದೆ.
ಸಾಕ್ಷ್ಯಚಿತ್ರವು ಕಥಾವಸ್ತುವು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಅನಾಥ ಆನೆಗಳನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ಸುತ್ತುತ್ತದೆ.
ಇದನ್ನೂ ಓದಿ:‘ಬಹುದೊಡ್ಡ ತಪ್ಪು ಮಾಡಿದೆ’; ಬಿಜೆಪಿ ವಿರುದ್ಧ ಕುಮಾರಸ್ವಾಮಿ ‘ಒಕ್ಕಲಿಗ ಅಸ್ತ್ರ’
“ಇದೊಂದು ಉತ್ತಮ ಕ್ಷಣವಾಗಿದೆ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಆನೆ ನನ್ನ ನೆಚ್ಚಿನ ಪ್ರಾಣಿ ಮತ್ತು ಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವುದು ನನಗೆ ಸಂತೋಷ ಉಂಟು ಮಾಡಿದೆ” ಎಂದು ಪ್ರವಾಸಿಗರೊಬ್ಬರು ಹೇಳಿದರು.
ತಮಿಳು ಸಾಕ್ಷ್ಯಚಿತ್ರದ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಸೋಮವಾರ 95 ನೇ ಅಕಾಡೆಮಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.