Advertisement

Kumbh Mela: ದಕ್ಷಿಣದ ಕುಂಭಮೇಳದ ಸೊಬಗು

12:38 PM Feb 21, 2024 | Team Udayavani |

ಪ್ರತಿವರ್ಷವೂ ಪುಷ್ಯ ಬಹುಳ ಬಿದಿಗೆಯಂದು ನಡೆವ ಗವಿಮಠದ ಜಾತ್ರಾ ಮಹೋತ್ಸವಕ್ಕೆ ನಾಡಿನಾದ್ಯಂತ ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ. ಹಾಗಾಗಿಯೇ ಇದನ್ನು ದಕ್ಷಿಣದ ಕುಂಭಮೇಳವೆಂದೇ ಕರೆಯುತ್ತಾರೆ. ಇಲ್ಲಿ ಜರಗುವ ಉತ್ಸವ, ಜಾತ್ರೆ ಕೇವಲ ಆಡಂಬರಕ್ಕೆ ಸೀಮಿತವಾಗಿಲ್ಲ. ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ಜಾತ್ರೆ ಬೆಳಗ್ಗೆ ಆರಂಭವಾಗಿ ಸಂಜೆ ರಥೆ ಎಳೆಯುವ ಮೂಲಕ ಅಂತ್ಯಗೊಳ್ಳುತ್ತದೆ.

Advertisement

ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ಗವಿಮಠದ ಐದಿನೈದು ದಿನಗಳ ಕಾಲ ನಡೆಯುತ್ತದೆ. ಇನ್ನು ಒಂದು ತಿಂಗಳು ಇರುವಾಗಲೇ ಇಲ್ಲಿಯ ಜಾತ್ರೆಯ ಸಿದ್ಧತೆಗಳು ಆರಂಭಗೊಳ್ಳುತ್ತವೆ. ಇಲ್ಲಿಯ ಯಾವ ಕಾರ್ಯಕ್ರಮಗಳು ಸರಕಾರದ ಅನುದಾನದಲ್ಲಿ ಜರಗುವುದಿಲ್ಲ. ಎಲ್ಲವೂ ಭಕ್ತರದ್ದೆ. ಜಿಲ್ಲೆಯ ಸುತ್ತಮುತ್ತ ಹಳ್ಳಿಯ ಜನರೆಲ್ಲಾ ಇಲ್ಲಿ ನಡೆವ ಏಳು ದಿನಗಳ ಮಹಾದಾಸೋಹಕ್ಕೆ ಜೋಳದ ಕಡಕ್‌ ರೊಟ್ಟಿ, ಥರಥರ ಚಟ್ನಿ ಪುಡಿಗಳು, ಕಾಯಿಪಲ್ಯಗಳು, ಮಾದಿಲಿ, ಬೂಂದಿ ಹೀಗೆ ವಿಭಿನ್ನ ಖಾದ್ಯ ಪದಾರ್ಥಗಳನ್ನು ಸ್ವತಃ ಮನೆಯಲ್ಲಿ ತಯಾರಿಸಿ,ಎತ್ತು ಬಂಡಿಗಳಲ್ಲಿ ಮಠಕ್ಕೆ ಬಂದು ಅರ್ಪಿಸುತ್ತಾರೆ. ಸ್ವ ಇಚ್ಚೆಯಿಂದ ಜಾತ್ರಾ ಸಿದ್ಧತೆಯಲ್ಲಿ ಪಾಲ್ಗೊಂಡು ಕರ ಸೇವೆಯನ್ನು ಮಾಡುತ್ತಾರೆ. ಕೆಲವರಂತೂ ಒಂದು ವಾರಗಳ ಕಾಲ ಮಠದಲ್ಲಿ ಉಳಿದುಕೊಂಡು ನಿರಪೇಕ್ಷವಾಗಿ, ನಿಷ್ಕಲ್ಮಶ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಇಲ್ಲಿನ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಪಾರವೇ ಇಲ್ಲ.

ಗವಿಸಿದ್ದೇಶ್ವರನ ಜಾತ್ರೆ ಎಂದರೆ ಅದು ಸಾಮಾಜಿಕ ಜಾಗೃತಿಯಾತ್ರೆ’ ಗವಿಮಠದ ಶ್ರೀಗಳು ಮಹತ್ವಾಕಾಂಕ್ಷೆಯುಳ್ಳವರು. ಸಮಾಜದಲ್ಲಿ ವಿನೂತನ ಬದಲಾವಣೆ ತರುವ ನಿಟ್ಟಿನಲ್ಲಿ ಇಲ್ಲಿಯ ಕಾರ್ಯಶೈಲಿಯನ್ನು ರೂಪಿಸಿದವರು. ಸಮಾಜ ಸೇವೆಯೇ ಸಾಕ್ಷಾತ್ ಗವಿಸಿದ್ದೇಶ್ವರ ಸೇವೆ ಅಂದುಕೊಂಡವರು. ಹಾಗಾಗಿ ಪ್ರತಿವರ್ಷವೂ ಇಲ್ಲಿಯ ಜಾತ್ರೆ ಒಂದು ಮುಖ್ಯ ಧ್ಯೇಯವನ್ನು ಇಟ್ಟುಕೊಂಡು ಆರಂಭಗೊಳ್ಳುತ್ತದೆ.

ಪ್ರತಿವರ್ಷವೂ ಜಾತ್ರೆಯನ್ನು ಮಠಾಧಿಪತಿಗಳೇ ಆರಂಭಿಸುವುದಿಲ್ಲ. ಸಮಾಜದಲ್ಲಿ ಎಲೆ ಮರೆ ಕಾಯಿಯಂತೆ ಸಾಧನೆ ಮಾಡುತ್ತಿರುವ, ಮಾಡಿದ ಗಣ್ಯರನ್ನು ಅಂದು ಇಲ್ಲಿಗೆ ಆಹ್ವಾನಿಸಿ, ಅವರನ್ನು ಸಮ್ಮಾನಿಸಿ ಅವರಿಂದಲೇ ರಥೋತ್ಸವಕ್ಕೆ, ಚಾಲನೆಯನ್ನು ನೀಡಲಾಗುತ್ತದೆ.

Advertisement

ಮಠ ಮಂದಿರಗಳು ಇವತ್ತು ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು. ಸಮಾಜದಲ್ಲಿ ಧರ್ಮಶ್ರದ್ಧೆ, ಸಮಾನತೆ, ಶಾಂತಿಯನ್ನು ಕಾಪಾಡಬೇಕು. ಈ ನಿಟ್ಟಿನಲ್ಲಿ ಗವಿಮಠ ಹಾಗೂ ಮಠಾಧಿಪತಿಗಳಾದ ಅಭಿನವ ಗವಿಶ್ರೀಗಳು ಅದನ್ನು ಚೆನ್ನಾಗಿ ಮಾಡಿಕೊಂಡು ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಮಾಜದಲ್ಲಿ ವಿನೂತನ ಸಾಮಾಜಿಕ ಕ್ರಾಂತಿಯೊಂದಕ್ಕೆ ನಾಂದಿಯಾಡಿದ್ದಾರೆ. ಕಾಯಕವೇ ಕೈಲಾಸ’ ಬಸವ ತತ್ತ್ವವನ್ನು ಅಕ್ಷರಶಃ ಪಾಲನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

-ಗವಿಸಿದ್ದೇಶ್‌ ಕೆ. ಕಲ್ಗುಡಿ

ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next