ಬಸವನಬಾಗೇವಾಡಿ: ವಿದ್ಯುತ್ ತಂತಿ ತಗುಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು
ಹೆಸ್ಕಾಂ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದ ಚಳ್ಳಕೇರಿ ತಾಲೂಕಿನ ಹೊನ್ನೂರಿನ ಮಂಜು (18), ತಿಪ್ಪೇಸ್ವಾಮಿ (19) ಮೃತ ಕಾರ್ಮಿಕರು. ಪಟ್ಟಣದ
ವಿಜಯಪುರ ರಸ್ತೆಯ ಸರ್ಕಾರಿ ಆಸ್ಪತ್ರೆ ಹಾಗೂ ಅಂಚೆ ಕಚೇರಿ ಮುಂಭಾಗದ ವಿದ್ಯುತ್ ಕಂಬಗಳಿಗೆ ಹೊಸ ವಿದ್ಯುತ್ ತಂತಿ ಜೋಡಣೆ ಕಾರ್ಯದಲ್ಲಿ ನಿರತರಾಗಿದ್ದಾಗ ಘಟನೆ ಜರುಗಿದೆ.
ಆಂಧ್ರಪ್ರದೇಶ ಮೂಲದ ಗುತ್ತಿಗೆದಾರರೊಬ್ಬರು ಕಂಬಗಳಿಗೆ ಹೊಸ ತಂತಿ ಜೋಡಣೆಗೆ ಗುತ್ತಿಗೆ ಪಡೆದಿದ್ದು, ಮೃತರು ಕಳೆದ ಆರು ದಿನಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ವಿಜಯಪುರ ರಸ್ತೆಯಲ್ಲಿರುವ ಜನರು ಜಮಾಯಿಸಿ ಹೆಸ್ಕಾಂ ಇಲಾಖೆ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಲೈನ್‌ಮನ್‌ಗಳನ್ನು ನೆರೆದಿದ್ದ ಜನ ಹೊಡೆಯಲು ಯತ್ನಿಸಿದಾಗ ಓಡಿ ಹೋದ ಪ್ರಸಂಗವೂ ನಡೆಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಡಿವೈಎಸ್‌ಪಿ, ಸಿಪಿಐ ಜನರನ್ನು ಚದುರಿಸಿದರು.