Advertisement

ಚುನಾವಣಾ ವೇಳಾಪಟ್ಟಿ ಸೋರಿಕೆಯಾಗಿರಲಿಲ್ಲ

11:36 AM Apr 14, 2018 | Team Udayavani |

ನವದೆಹಲಿ: ಕರ್ನಾಟಕ ಚುನಾವಣಾ ವೇಳಾಪಟ್ಟಿಯ ಮಾಹಿತಿ ಸೋರಿಕೆಯಾಗಿ ರಲಿಲ್ಲ. ಇದು ಸಂಪೂರ್ಣ ಊಹೆಯಾಗಿತ್ತು ಎಂದು ಕೇಂದ್ರ ಚುನಾವಣಾ  ಆಯೋಗ ರಚಿಸಿದ್ದ ಆಂತರಿಕ ಸಮಿತಿ ವರದಿ ನೀಡಿದೆ. ಈ ಮೂಲಕ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥರ ಮಾಹಿತಿ ಸೋರಿಕೆ ಪ್ರಕರಣಕ್ಕೆ ಅಂತ್ಯ ಹಾಡಿದೆ. 

Advertisement

ಮಾ.27 ರಂದು ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡುವ ಕೆಲ ನಿಮಿಷಗಳ ಮುನ್ನವೇ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥರು  ಚುನಾವಣಾ ದಿನಾಂಕ ಮತ್ತು ಫ‌ಲಿತಾಂಶದ ದಿನಾಂಕದ ಬಗ್ಗೆ ಟ್ವೀಟ್‌ ಮಾಡಿದ್ದರು. ಆದರೆ ಮತದಾನದ ದಿನಾಂಕ ನಿಜವಾಗಿ ಫ‌ಲಿತಾಂಶದ ದಿನ ಸುಳ್ಳಾಗಿತ್ತು.

ಆದರೆ ಈ ಟ್ವೀಟ್‌ ತೀವ್ರ  ವಿವಾದ ಎಬ್ಬಿಸಿತ್ತಲ್ಲದೇ, ಆಯೋಗದ ಮಾಹಿತಿ ಬಿಜೆಪಿಗೆ ತಲುಪಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಚುನಾ ವಣಾ ಆಯೋಗ ತನಿಖೆಗಾಗಿ ಆಂತರಿಕ ಸಮಿತಿ  ರಚಿಸಿತ್ತು. ಈ ಸಮಿತಿ ಕೂಲಂಕಶವಾಗಿ ತನಿಖೆ ನಡೆಸಿ ವರದಿ ನೀಡಿದ್ದು, ಆಯೋಗದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ, ಟಿವಿ ಚಾನಲ್‌ ನೋಡಿ ಕೊಂಡು ಊಹೆ ಮಾಡಿಕೊಂಡು ಟ್ವೀಟ್‌ ಮಾಡಿದ್ದಾರೆ ಎಂದು ಹೇಳಿದೆ. ಅಲ್ಲದೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥರೂ ಇದೇ ಉತ್ತರವನ್ನೂ ನೀಡಿದ್ದರು. ಟಿವಿ ಚಾನೆಲ್‌ ಅನ್ನೂ ಆಯೋಗ  ವಿಚಾರಣೆ ನಡೆಸಿದ್ದು, ಅದು ನಂಬಿಕಸ್ಥ ಮೂಲವನ್ನು ಇರಿಸಿಕೊಂಡು ವೇಳಾಪಟ್ಟಿಯ ಸುದ್ದಿ ಪ್ರಕಟಿಸಿದ್ದಾಗಿ ಹೇಳಿದೆ. ಆದರೆ ಇದರಲ್ಲಿ ಫ‌ಲಿತಾಂಶದ ದಿನ  ತಪ್ಪಾಗಿತ್ತು ಎಂಬುದನ್ನೂ ಉಲ್ಲೇಖೀಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next