ಹುಣಸೂರು : ಜೂ.13ರಂದು ನಡೆಯಲಿರುವ ದಕ್ಷಿಣ ಪಧವೀಧರ ಕ್ಷೇತ್ರದ ಚುನಾವಣೆಗಾಗಿ ಹುಣಸೂರು ತಾಲೂಕು ಕಚೇರಿಯಲ್ಲಿ ನಾಲ್ಕು ಮತಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಡಾ.ಅಶೋಕ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 3187 ಮತದಾರರಿದ್ದು, ಮತದಾನ ಸುವ್ಯವಸ್ಥಿತವಾಗಿ ನಡೆಯಲು ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದ್ದು, ಪ್ರತಿ ಬೂತ್‌ನಲ್ಲಿ ಮತಗಟ್ಟೆ ಅಧಿಕಾರಿ ಸೇರಿದಂತೆ ನಾಲ್ಕು ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಒಟ್ಟಾರೆ 20 ಮಂದಿ ಚುನಾವಣಾ ಸಿಬ್ಬಂದಿ ಕರ್ತವ್ಯದಲ್ಲಿ ನಿರ್ವಹಿಸುವರು.
ಮತ ಕೇಂದ್ರ ವ್ಯಾಪ್ತಿಯ 200ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇದಾಜ್ಞೆ ಜಾರಿಗೊಳಿಸಿದ್ದು, ಮತಗಟ್ಟೆಯ ನೂರು ಮೀಟರ್ ಅಂತರದಲ್ಲಿ ಪ್ರಚಾರ ನಡೆಸುವಂತಿಲ್ಲಾ, ಮಾಸ್ಟರ್ ಟ್ರೈನರ್ ಆದ ಬಿಆರ್‌ಸಿ ಸಂತೋಷ್ ಕುಮಾರ್ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ನೀಡಿದರು.
ಕಡ್ಡಾಯವಾಗಿ ಪೊಟೋ ಇರುವ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ, ಪಡಿತರ ಕಾರ್ಡ್ ಸೇರಿದಂತೆ ೨೧ ದಾಖಲೆಗಳಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಾರು ಢಿಕ್ಕಿ ಹೊಡೆದು ವ್ಯಕ್ತಿ ಸಾವು : ನೊಂದಣಿಯಾಗದ ಬಿಳಿ ಬಣ್ಣದ ಕಾರಿಗಾಗಿ ಪೊಲೀಸರ ಶೋಧ