Advertisement

ಡಿಸೆಂಬರ್‌ ಅಂತ್ಯದೊಳಗೆ ಚುನಾವಣೆ ನಿರೀಕ್ಷೆ

03:35 PM Jul 16, 2020 | mahesh |

ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಕೆಡಿಸಿಸಿಯಿಂದ ಕಳೆದ ಐದು ವರ್ಷದ ಅವಧಿಯಲ್ಲಿ ಉತ್ತಮ ಕಾರ್ಯಚಟುವಟಿಕೆಗಳು ನಡೆದಿವೆ. ಡಿಸೆಂಬರ್‌ ಅಂತ್ಯದೊಳಗೆ ಚುನಾವಣೆಯಾಗುವ ನಿರೀಕ್ಷೆಯಿದೆ. ಮುಂದಿನ ಅವಧಿಗೆ ಒಳ್ಳೆಯ ಸದಸ್ಯರು ಆಯ್ಕೆಯಾಗುತ್ತಾರೆಂಬ ವಿಶ್ವಾಸವಿದೆ ಎಂದು ಬ್ಯಾಂಕ್‌ನ ಹಾಲಿ ಅಧ್ಯಕ್ಷ ಎಸ್‌.ಎಲ್‌. ಘೋಕ್ಲೃಕರ್‌ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ. 8 ಹೊಸ ಶಾಖೆ ತೆರೆಯಲಾಗಿದೆ. ಹಿಂದಿನಿಂದ ನಡೆದು ಬಂದಂತೆ ಲಾಭ ಬಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 7.70 ಕೋಟಿ ಲಾಭ ಗಳಿಸಿದೆ. ಮೊಬೈಲ್‌ ಎಟಿಎಂ, ಕಚೇರಿ ರಿನಿವೇಶನ್‌, 87 ಸಾವಿರ ಕಿಸಾನ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. ಶತಮಾನೋತ್ಸವ ಆಚರಣೆ ಅಪವಾದ ಬಾರದೆಂಬ ಕಾರಣ ಮುಂದೂಡಲಾಗಿದೆ ಎಂದರು.

ಚುನಾವಣೆಗೆ ಸಂಬಂಧಿಸಿದಂತೆ ಸಹಕಾರಿ ಸಂಘಗಳಿಗೆ ಮೊದಲ ಹಂತದಲ್ಲಿ ಪತ್ರ ಕಳುಹಿಲಾಗಿತ್ತು. ಆದರೆ ನಂತರ ಸರಕಾರದ ಆದೇಶದಂತೆ ಚುನಾವಣೆ ರದ್ದು ಮಾಡಲಾಗಿದೆ ಎಂದ ಅವರು, ಕೊರೊನಾ ತಡೆಗಟ್ಟಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೆಡಿಸಿಸಿ ಬ್ಯಾಂಕ್‌ನಿಂದ 1.10 ಕೋಟಿ ರೂ.ನೀಡಲಾಗಿದೆ. ಹಾಗೇ ಬ್ಯಾಂಕ್‌ನ ನೌಕರರ ಎರಡು ದಿನದ ಸಂಬಳ 10ಲಕ್ಷ ರೂ.ಗಳನ್ನು ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತರಿಗೆ ಗೌರವವಾಗಿ ನೀಡಲಾಗಿದೆ ಎಂದರು.

ಬ್ಯಾಂಕ್‌ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ನಿರ್ದೇಶಕ ಜಿ.ಟಿ. ಹೆಗಡೆ ತಟ್ಟಿಸರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next