Advertisement

Bypoll; 13 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದ ಚುನಾವಣಾ ಆಯೋಗ

04:09 PM Jun 10, 2024 | Team Udayavani |

ಹೊಸದಿಲ್ಲಿ: ಏಳು ರಾಜ್ಯಗಳಲ್ಲಿ 13 ಸ್ಥಾನಗಳಿಗೆ ವಿಧಾನಸಭಾ ಉಪಚುನಾವಣೆ ನಡೆಸುವ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.

Advertisement

ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಎಲ್ಲಾ ಏಳು ಸ್ಥಾನಗಳಿಗೆ ಜುಲೈ 10 ರಂದು ಉಪಚುನಾವಣೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲವು ಹಾಲಿ ಶಾಸಕರು ತಮ್ಮ ಸ್ಥಾನಗಳನ್ನು ತೆರವು ಮಾಡಿದ ಕಾರಣದಿಂದ ಹಲವೆಡೆ ಚುನಾವಣೆ ನಡೆಯುತ್ತಿದೆ.

ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ. ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ.

ಬಿಹಾರದ ರುಪೌಲಿ, ರಾಯ್‌ ಗಂಜ್ ರಣಘಾಟ್ ದಕ್ಷಿಣ್, ಪಶ್ಚಿಮ ಬಂಗಾಳದ ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ ನ ಜಲಂಧರ್ ಪಶ್ಚಿಮ ಮತ್ತು ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢದಲ್ಲಿ ಉಪ ಚುನಾವಣೆ ನಡೆಯಲಿದೆ.

ರುಪೌಲಿಯಲ್ಲಿ ಜೆಡಿಯು ಶಾಸಕಿ ಬಿಮಾ ಬಾರ್ತಿ ಅವರು ರಾಜೀನಾಮೆ ನೀಡಿ ಆರ್ ಜೆಡಿ ಪಕ್ಷ ಸೇರಿ ಪೂರ್ನಿಯಾದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next