Advertisement
ಎರಡೂ ವಿಧೇಯಕ ಮಂಡನೆಗಾಗಿ ವಿಧಾನಮಂಡಲ ಅಧಿವೇಶನ ಆರಂಭವಾಗುವುದನ್ನೇ ಕಾಯುತ್ತಿದ್ದ ಸರ್ಕಾರ ಕಳೆದ ವಾರ ವಿಧಾನಸಭೆಯಲ್ಲಿ ಎರಡೂ ವಿಧೇಯಕಗಳನ್ನು ಮಂಡಿಸಿದೆ. ಪರಿಷತ್‌ನಲ್ಲಿ ಇನ್ನೂ ಮಂಡನೆಯಾಗಬೇಕಿದೆ. ಆದರೆ, ಇದು ಅಂಗೀಕಾರಕ್ಕೆ ಮುನ್ನವೇ ವಿವಾದದ ಸ್ವರೂಪ ಪಡೆದು ಶಿಕ್ಷಣ ಕ್ಷೇತ್ರದ ತಜ್ಞರು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಸರ್ಕಾರದ ಮೇಲೆ ತಿರುಗಿಬಿದ್ದಿದ್ದಾರೆ.
ಸೋಮವಾರದಿಂದ ಮೂರು ದಿನಗಳ ಕಾಲ ಮುಂದುವರಿಯುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಎರಡೂ ವಿಚಾರಗಳೆನ್ನೆತ್ತಿಕೊಂಡು ಮುಗಿಬೀಳಲು ಎಲ್ಲಾ ಕಾರ್ಯತಂತ್ರ ರೂಪಿಸಿಕೊಂಡಿವೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಂತೂ ಎಂತಹುದೇ ಪರಿಸ್ಥಿತಿಯಲ್ಲೂ ವಿಧೇಯಕ ಹಿಂದೆ ಪಡೆಯುವ ಮಾತೇ ಇಲ್ಲ ಎಂದು ಹಠ ಹಿಡಿದಿದ್ದಾರೆ. ಹೀಗಾಗಿ ಸದನವು ಬಿಸಿ ಚರ್ಚೆ, ವಾಗ್ವಾದಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ
ಮೂಲಕ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಮೂಲಸೌಕರ್ಯ ಮತ್ತು ಸೇವೆಯ ಗುಣಮಟ್ಟ ಆಧರಿಸಿ ಸರ್ಕಾರವೇ ಚಿಕಿತ್ಸಾ ದರ ನಿಗದಿಪಡಿಸುವುದು ಹಾಗೂ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿ ವಸೂಲಿ ಮಾಡಿದರೆ ಜೈಲುಶಿಕ್ಷೆ ವಿಧಿಸುವ ಅಂಶವನ್ನು ಕಾಯ್ದೆಯಲ್ಲಿ ಸೇರಿಸಿರುವುದು ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದಟಛಿ ತಿರುಗಿಬಿದ್ದಿರುವ ವೈದ್ಯರು ಒಂದು ದಿನದ ಸೇವೆ ಸ್ಥಗಿತದ “ಬಿಸಿ’ಮುಟ್ಟಿಸಿ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದಾರೆ. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಜತೆಗೆ ನಿಂತಿರುವುದು ಇವರ ಹೋರಾಟಕ್ಕೆ ಬಲ ಬಂದಿದೆ. ಇದು ಸರ್ಕಾರಕ್ಕೂ ತಲೆನೋವಾಗಿ
ಪರಿಣಮಿಸಿದೆ. ಇನ್ನು, ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಏಕರೂಪದ ನೀತಿ ಹೆಸರಿನಲ್ಲಿ ಕುಲಪತಿ, ಕುಲಸಚಿವ
ನೇಮಕಾತಿ, ಕಾಮಗಾರಿಗಳ ಟೆಂಡರ್ ಸಹಿತ ಎಲ್ಲ ಅಧಿಕಾರ ಸರ್ಕಾರದ ನಿಯಂತ್ರಣದಲ್ಲಿಟ್ಟುಕೊಳ್ಳುವ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಉದ್ದೇಶದ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದು ಶಿಕ್ಷಣ ತಜ್ಞರ ಕೋಪಕ್ಕೆ ಕಾರಣವಾಗಿದೆ.
Related Articles
ಮಾರ್ಪಾಡುಗಳೊಂದಿಗೆಅಂಗೀಕಾರವಾಗಬಹುದು.
Advertisement
ಆದರೆ, ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ ಅಂಗೀಕಾರ ಸಾಧ್ಯತೆ ಕಡಿಮೆ. ಸರ್ಕಾರವೇವಿಧೇಯಕ ಹಿಂದಕ್ಕೆ ಪಡೆಯುವ ಮಟ್ಟಕ್ಕೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಲಾಬಿ ಜೋರಾಗಿದ್ದು ಸರ್ಕಾರವನ್ನೇ ಅಲುಗಾಡಿಸುವ ಮಟ್ಟದಲ್ಲಿದೆ ಎಂದು ಹೇಳಲಾಗಿದೆ. ಇದಕ್ಕೆ ಕಾರಣ ಮೂರು ಪಕ್ಷಗಳಲ್ಲಿರುವ ರಾಜಕಾರಣಿಗಳು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಮಾಲೀಕರಾಗಿರುವುದು. ಹೀಗಾಗಿ, ಎರಡೂ ಕಾಯ್ದೆಗಳ ವಿಚಾರದಲ್ಲಿ ಸರ್ಕಾರ
ಯಶಸ್ವಿಯಾಗುತ್ತಾ ಅಥವಾ ಲಾಬಿ ಮತ್ತು ಹೋರಾಟಕ್ಕೆ ಮಣಿಯುತ್ತಾ ಕಾದು ನೋಡಬೇಕಿದೆ. – ಎಸ್.ಲಕ್ಷ್ಮಿನಾರಾಯಣ