Advertisement

ಅರಣ್ಯದ ಅಂಚಿನ ಗ್ರಾಮಗಳಿಗೆ “ಸೂಕ್ಷ್ಮಬೇಲಿ’

12:13 PM Mar 05, 2017 | |

ಮೈಸೂರು: ಅರಣ್ಯ, ಪರಿಸರ ಹಾಗೂ ವನ್ಯ ಜೀವಿಗಳ ಉಳಿವಿನ ದೃಷ್ಟಿಯಿಂದ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.

Advertisement

ರಾಜ್ಯದ ಎರಡು ಪ್ರಮುಖ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆ ಸುತ್ತಮುತ್ತ ಅರಣ್ಯೇತರ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಎರಡೂ ರಾಷ್ಟ್ರೀಯ ಉದ್ಯಾನವನಗಳ ಸುತ್ತಲಿನ ಹತ್ತು ಕಿಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಐದು ವರ್ಷಗಳ ನಂತರ ಕಾನೂನಿನ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುವ ಸಂಬಂಧ ಚಾಮರಾಜನಗರ,

ಮೈಸೂರು ಹಾಗೂ ಕೊಡಗು ಜಿಲ್ಲೆಯ 251 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಲು ಕರಡು ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ ಅಂತಿಮ ಅಧಿಸೂಚನೆ ಹೊರಬಿದ್ದರೆ, ಎರಡು ರಾಷ್ಟ್ರೀಯ ಉದ್ಯಾನವನಗಳ ಸುತ್ತಮುತ್ತ ಅರಣ್ಯೇತರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

ನಿಷೇಧಿತ ವಲಯ: ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕ್ರಷರ್‌, ಕೈಗಾರಿಕೆ, ಹೋಟೆಲ್‌, ರೆಸಾರ್ಟ್‌ ಸ್ಥಾಪನೆ, ಕೃಷಿ ಮತ್ತು ತೋಟಗಾರಿಕೆ ಭೂಮಿಯ ಪರಿವರ್ತನೆ, ಅಂತರ್ಜಲ ಸೇರಿ ನೈಸರ್ಗಿಕ ಜಲಮೂಲಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು, ಮಳೆನೀರು ಕೊಯ್ಲು, ಖನಿಜಯುಕ್ತ ನೀರಿನ ಘಟಕ, ಬಾಟಲಿ ನೀರಿನ ಘಟಕ, ದೊಡ್ಡ ಪ್ರಮಾಣದ ವಿದ್ಯುತ್‌ ಉತ್ಪಾದನಾ ಯೋಜನೆ,

ಕಾರ್ಪೊàರೆಟ್‌ ಕಂಪನಿಗಳ ಸ್ಥಾಪನೆ, ಪ್ರವಾಸಿಗರು ಮತ್ತು ಹೋಟೆಲ್‌ಗ‌ಳಲ್ಲಿ ಪಾಲಿಥಿನ್‌ ಚೀಲ ಬಳಕೆ, ಜಲಮೂಲಗಳಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ, ಸೂಕ್ಷ್ಮವಲಯದ ಗ್ರಾಮಗಳಲ್ಲಿ ಸೈನ್‌ಬೋರ್ಡ್‌, ಹೋರ್ಡಿಂಗ್‌ ಅಳವಡಿಕೆ, ರೈಲ್ವೆ ಮಾರ್ಗಗಳು ನಿಷಿದ್ಧವಾಗಿದೆ. ಇದಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಕೆರೆ, ಬಾವಿ, ಕೊಳವೆಬಾವಿಗಳ ನೀರನ್ನು ಬಳಸುವುದು, ವ್ಯವಸಾಯದಲ್ಲಿ ವಿದೇಶಿ ತಳಿಗಳ ಬಳಕೆ ಸೇರಿ ಪರಿಸರಕ್ಕೆ ಹಾನಿಕಾರಕವಾದ ಕೆಲಸಗಳ ಜತೆಗೆ

Advertisement

ಈ ವಲಯದಲ್ಲಿ ಪ್ರವಾಸಿಗರಿಂದ ಏರ್‌ಕ್ರಾಪ್ಟ್ ಬಳಕೆ, ಬಿಸಿಗಾಳಿ ಬಲೂನ್‌, ಹೆಲಿಕಾಪ್ಟರ್‌, ಗ್ಲೆ„ಡರ್‌, ಪ್ಯಾರಾಸೈಲಿಂಗ್‌ ಕೂಡ ನಿಷೇಧಿಸಲಾಗಿತ್ತು. ಇದೀಗ ಹೊಸ ಅಧಿಸೂಚನೆಯಲ್ಲಿ ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲೂಕಿನ 55 ಗ್ರಾಮಗಳು, ಕೊಡಗು ಜಿಲ್ಲೆಯ 57 ಗ್ರಾಮಗಳು, ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ 16 ಗ್ರಾಮ ಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ   ತರಲಾಗಿದೆ.

251 ಗ್ರಾಮಗಳು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಗುಂಡ್ಲುಪೇಟೆ, ನಂಜನಗೂಡು, ಎಚ್‌.ಡಿ. ಕೋಟೆ ಹಾಗೂ ಚಾಮರಾಜನಗರ ತಾಲೂಕುಗಳ ಒಟ್ಟು 123 ಗ್ರಾಮಗಳು ಈಗಾಗಲೇ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ್ದು, ಇದೀಗ ಗುಂಡ್ಲುಪೇಟೆ ತಾಲೂಕಿನ 16 ಗ್ರಾಮಗಳು, ಎಚ್‌.ಡಿ. ಕೋಟೆ ತಾಲೂಕಿನ 55, ಮಡಿಕೇರಿ ತಾಲೂಕಿನ 23, ಸೋಮವಾರಪೇಟೆ ತಾಲೂಕಿನ 12 ಹಾಗೂ ವಿರಾಜಪೇಟೆ ತಾಲೂಕಿನ 22 ಗ್ರಾಮಗಳು ಪರಿಸರ ಸೂಕ್ಷ್ಮಪ್ರದೇಶಕ್ಕೆ ಸೇರಲಿವೆ.

2012ರಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಣೆಯಾದಾಗ ಬಂಡೀಪುರ ಸುತ್ತಮುತ್ತ ಗರಿಷ್ಠ 7.8 ಕಿಮೀ-ಕನಿಷ್ಠ 5.5 ಕಿಮೀ ಪ್ರದೇಶವನ್ನು ಇದರ ವ್ಯಾಪ್ತಿಗೆ ತರಲಾಗಿತ್ತು. ಇದೀಗ ಕಸ್ತೂರಿರಂಗನ್‌ ವರದಿ ಆಧಾರದ ಮೇಲೆ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ. ಸರ್ಕಾರದಿಂದ ಅಧಿಸೂಚನೆ ಪ್ರತಿ ದೊರೆತ ನಂತರ ಅದರಂತೆ ಮುಂದುವರಿಯುತ್ತೇನೆ.
-ಹೀರಾಲಾಲ್‌, ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಕಾವೇರಿ ಜಲಾನಯನ ಪ್ರದೇಶ ಉಳಿವಿನ ದೃಷ್ಟಿಯಿಂದ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಒಳ್ಳೆಯದು. ಇರುವ ಕಾಡನ್ನು ಕಡಿದು ರೆಸಾರ್ಟ್‌ ನಿರ್ಮಿಸಿ, ನಿವೇಶನಗಳನ್ನು ಮಾಡಿ ಮನೆಕಟ್ಟಿಕೊಂಡರೆ, ದಟ್ಟಾರಣ್ಯಗಳಲ್ಲಿ ರೈಲ್ವೆ ಮಾರ್ಗ ಹಾದುಹೋದರೆ ಪರಿಸರಕ್ಕೆ ಮಾರಕವಲ್ಲವೆ? ಪರಿಸರ ಸೂಕ್ಷ್ಮ ಪ್ರದೇಶದಿಂದ ಇಂಥದ್ದಕ್ಕೆಲ್ಲ ಕಡಿವಾಣ ಬೀಳಲಿದೆ.
-ಕರ್ನಲ್‌ ಸಿ.ಪಿ.ಮುತ್ತಣ್ಣ, ಮಾಜಿ ಅಧ್ಯಕ್ಷರು, ಕೂರ್ಗ್‌ ವೈಲ್ಡ್‌ಲೈಪ್‌ ಸೊಸೈಟಿ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next