Advertisement
ನಮ್ಮ ದೇಶದ ಆರ್ಥಿಕತೆಯ ಮೇಲೆ ಬೀರಿದ ಕ್ರೂರ ಪರಿಣಾಮದಿಂದ ದೇಶದ ಆರ್ಥಿಕತೆ ಹಿಂಜ ರಿತಕ್ಕೆ ಜಾರಿತು. ಲಾಕ್‌ಡೌನ್ ಸಡಿಲವಾದಂತೆ ಆರ್ಥಿಕ ಚೇತರಿಕೆಯ ಆಶಾಕಿರಣಗಳ ನಡುವೆ ಆರ್ಥಿಕಾಭಿವೃದ್ಧಿಗೆ ಶ್ರಮಿಸುವ ಅನಿವಾರ್ಯತೆ ಬಂದೊದ ಗಿದೆ. ದೇಶದ ಆರ್ಥಿಕತೆಯು ಕೆಳಗೆ ಬಿದ್ದಿರುವುದು ಎಷ್ಟು ಸತ್ಯವೋ ಚೇತರಿಕೆ ಕಾಣುತ್ತಿ ರುವುದು ಕೂಡಾ ಅಷ್ಟೇ ಸತ್ಯ ಎಂಬ ತಾರ್ಕಿಕ ಒಪ್ಪಂದಕ್ಕೆ ಬರಬಹುದಾದರೂ ಈ ಸಂದರ್ಭದಲ್ಲಿ ದೊಡ್ಡ ವ್ಯಾಪಾರೋದ್ಯಮಗಳ ದಕ್ಷತೆ, ಸಣ್ಣ ಉದ್ಯಮಗಳ ಸಮರ್ಥತೆ ಮತ್ತು ಕೃಷಿಕರ ಆದಾಯ ಹೆಚ್ಚಳ ಪ್ರಮುಖ ವಿಚಾರವಾಗಿದೆ.
Related Articles
Advertisement
ಅದೇ ರೀತಿಯಲ್ಲಿ ಪೂರೈಕೆ ವ್ಯವಸ್ಥೆಗೆ ಆಗಿರುವ ತೊಂದರೆಗಳನ್ನು ನಿವಾರಿಸಬೇಕು. ಗಮನಿಸಬೇಕಾದ ವಿಚಾರವೇನೆಂದರೆ ಸಾರ್ವಜನಿಕರು ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹಣಕ್ಕೆ ಸಿಗುವ ವಾರ್ಷಿಕ ಬಡ್ಡಿಯ ಪ್ರಮಾಣವು ಈಗ ಹಣದುಬ್ಬರದ ಪ್ರಮಾಣಕ್ಕಿಂತ ಕಡಿಮೆ ಇದೆ. ಇದೇ ಹಣದುಬ್ಬರ ಮತ್ತು ಬಡ್ಡಿದರ ಮುಂದುವರಿದರೆ ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಅದು ಈಗಾಗಲೇ ಸ್ವಲ್ಪ ಮಟ್ಟಿಗೆ ಆಗಿದೆ ಎಂಬುದೂ ನಿಜ.
ಹಣದುಬ್ಬರ ದರವು ತೀರಾ ಮೇಲ್ಮಟ್ಟದಲ್ಲಿರುವು ದರಿಂದ ಆರ್‌ಬಿಐ ರಿಪೋ ದರವನ್ನು ಕಡಿಮೆ ಮಾಡದಿರುವುದು ಸ್ವಾಗತಾರ್ಹ ನಿರ್ಧಾರವೇ ಸರಿ. ಫೆಬ್ರವರಿಯಲ್ಲಿ ಶೇ. 5.15 ರಷ್ಟಿದ್ದ ರಿಪೋ ದರವನ್ನು ಈಗಾಗಲೇ ಶೇ.4ಕ್ಕೆ ಇಳಿಕೆ ಮಾಡಿದೆ.
ಈ ಬಾರಿಯ ಬಜೆಟ್ ಮಹತ್ವ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು “ಈ ಫೆಬ್ರವರಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಯಾರು ಕಂಡು ಕೇಳರಿಯದ, ಆರ್ಥಿಕ ಸುಧಾರಣೆಗೆ ಪೂರಕವಾಗುವ ಭಿನ್ನ ರೀತಿಯ ಬಜೆಟನ್ನು ಸಾದರ ಪಡಿಸಲು ಬಯಸಿದ್ದೇನೆ. ಅಲ್ಲದೆ ದೇಶದ ಜನರ ನಿರೀಕ್ಷೆಯನ್ನು ಮನಸ್ಸಿನಲ್ಲಿರಿಸಿ ಕೊಂಡು ಜಾಗತಿಕ ಪ್ರಗತಿ ಗನುಗುಣವಾಗಿ ಹೆಜ್ಜೆ ಹಾಕಬೇಕಿದೆ ಎಂದಿದ್ದಾರೆ. ಆದರೆ ಸಂಕಷ್ಟಗಳನ್ನು ಪರಿಶ್ರಮದಿಂದಲೇ ಬಗೆಹರಿಸಬೇಕಿದೆ.
ವಿತ್ತ ಸಚಿವೆ 2019 ಜು. 5ರಂದು ಬಜೆಟ್ ಮಂಡಿಸುವಾಗ ಸರಕಾರದ ನೀತಿ ಯಿಂದಲೇ ಹುಟ್ಟಿ ಕೊಂಡಿದ್ದ ಆರ್ಥಿಕ ಸಂಕಷ್ಟಗಳನ್ನು ಗಮನಿಸಿರಲಿಲ್ಲ. ನೋಟ್ ಅಮಾನ್ಯಿàಕರಣ ಹಾಗೂ ದೋಷಪೂರಿತ ಜಿಎಸ್‌ಟಿಯಿಂದಾಗಿ ಸಾಂಪ್ರದಾಯಿಕ ಅಸ್ತಿತ್ವ ಹೊಂದಿದ್ದ ಕೈಗಾರಿಕೆಗಳ ಪುನರುಜ್ಜೀವನಕ್ಕೆ ಯೋಜನಾ ನಿಧಿ ಸ್ಥಾಪಿಸ ಬೇಕಾಯಿತು. ಆರ್ಥಿಕ ಚಟುವಟಿಕೆ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ, ನವೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ.
ಹವಾಮಾನ ಬದಲಾವಣೆಯ ಹೊಡೆತವನ್ನು ಜಲಶಕ್ತಿ ಸಚಿವಾಲಯ ಘೋಷಣೆ ಮಾಡಿದರೂ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಿಲ್ಲ. ಆರ್ಥಿಕ ವಿಶ್ಲೇಷಕರೇ “ಗೊತ್ತು ಗುರಿಯಿಲ್ಲದ ತಿಳಿವಳಿಕೆಗೆ ಬಾರದಂತಹ ಬಜೆಟ್‌ನಂತೆ ಗೋಚರವಾಗುತ್ತಿದೆ’ ಎಂದಿದ್ದರು. ಕೊರೊನಾ ಆರಂಭವಾಗುತ್ತಿದ್ದಂತೆ ಬಜೆಟ್‌ನ ಶಕ್ತಿ ಕರಗಿ ಹೋಯಿತು.
ವಿತ್ತ ಸಚಿವಾಲಯವು 2021ರ ಆಯವ್ಯಯವನ್ನು ಯಾವ ದಿಕ್ಕಿನಲ್ಲಿ ಕೇಂದ್ರೀಕರಿಸ ಬೇಕೆಂಬ ಕೂಲಂಕಷ ನಿರ್ಧಾರವನ್ನು ನುರಿತ ಆರ್ಥಿಕ ತಜ್ಞರ ಮಾಹಿತಿಯೊಂದಿಗೆ ರೂಪಿಸಬೇಕು. ಜಾಗತಿಕ ಸನ್ನಿವೇಶ, ಬಂಡವಾಳ ಹೂಡಿಕೆಗೆ ಮತ್ತು ರಫ್ತು ವ್ಯವಹಾರಕ್ಕೆ ಉತ್ತೇಜನ ನೀಡಬೇಕು. ಈಗಾಗಲೇ ಕೇಂದ್ರವು ಉದ್ಯಮ ವಲಯಕ್ಕೆ ಹಲವು ಯೋಜನೆಗಳ ಮೂಲಕ ಒಂದಷ್ಟು ನೆರವು ನೀಡಿದೆ. ಪ್ರಸಕ್ತ ಸನ್ನಿವೇಶದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕ ಮತ್ತು ಹೂಡಿಕೆಗೆ ಉತ್ತೇಜನ ನೀಡುವ ಆಯವ್ಯಯ ಅಗತ್ಯವಿದೆ.
ಗುರಿಮುಟ್ಟಲಾಗದ ಆಕಾಂಕ್ಷೆ?: 2025ರ ಹೊತ್ತಿಗೆ 5 ಟ್ರಿಲಿಯನ್ ಆರ್ಥಿಕತೆಯಾಗಿ ಹೊರಹೊಮ್ಮಲಿದ್ದೇವೆ ಎಂಬುದು ಗುರಿಮುಟ್ಟಲಾಗದ ಆಕಾಂಕ್ಷೆ ಎಂಬಂತೆ ತೋರುತ್ತಿದೆ. ಯಾಕೆಂದರೆ 2019ರಲ್ಲಿ ಭಾರತದ ಆರ್ಥಿಕತೆಯು 2.7 ಟ್ರಿಲಿಯನ್ ಡಾಲರ್, ಅದನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ಕಾರ್ಯಗತ ಗೊಳಿಸಲು ಸತತ ಆರು ವರ್ಷ ಶೇ. 9 ಜಿಡಿಪಿ ಬೆಳವಣಿಗೆ ಅಗತ್ಯ.
2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಸರಕಾರದ ಗುರಿ. ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆಯ ಕಾಯ್ದೆ ಹಾಗೂ ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆ ವಿರುದ್ಧ ರೈತರು ಸಿಡಿದೆದ್ದಿರುವ ಈ ಸಮಯದಲ್ಲಿ ಅವರ ಆದಾಯ ದುಪ್ಪಟ್ಟು ಸವಾಲು. ಕಾಯ್ದೆಯ ಕುಂದು ಕೊರತೆಗಳನ್ನು ನಿವಾರಿಸಿ, ರೈತರಿಗೆ ಸದುದ್ದೇಶಗಳನ್ನು ಮನವರಿಕೆ ಮಾಡಿ ಬಜೆಟ್‌ನಲ್ಲಿ ಒಂದಿಲ್ಲೊಂದು ರೀತಿಯ ಶಾಶ್ವತ ಪರಿಹಾರ ನೀಡಬೇಕು. ರೈತರು ಎಂದೂ ಬಳಲಬಾರದು, ಸೋಲಬಾರದು ಮತ್ತು ಅವರ ಕೈ ಖಾಲಿಯಿರಬಾರದು.
ಬ್ಯಾಂಕಿಂಗ್ ವಲಯದಲ್ಲಿ ಜನ ಸಾಲ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಠೇವಣಿಯಾಗಿ ಇರಿಸುತ್ತಿದ್ದಾರೆ. ಕೋವಿಡ್-19 ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನ ಉಳಿತಾಯಕ್ಕೆ ಹೆಚ್ಚು ಮಹತ್ವ ನೀಡುವ ವರದಿಗಳೂ ಬರುತ್ತಿವೆ. ವಸ್ತುಗಳ ಬೆಲೆಯು ಜನರ ಖರೀದಿ ಸಾಮರ್ಥ್ಯವನ್ನು ಮೀರಬಾರದು. ಖರೀದಿ ಸಾಮರ್ಥ್ಯ ಇನ್ನಷ್ಟು ತಗ್ಗದಂತೆ ನೋಡಿಕೊಂಡು ಮಾರುಕಟ್ಟೆಯಲ್ಲಿ ಉತ್ಸಾಹವನ್ನು ಮೂಡಿಸಬೇಕಾಗಿದೆ. ಜನರ ಖರೀದಿ ಸಾಮರ್ಥ್ಯ ಹೆಚ್ಚುವಂತೆ ಮಾಡಲು ಬಜೆಟ್ ಮೂಲಕ ಕೆಲವು ಉಪಕ್ರಮಗಳನ್ನು ಜಾರಿಗೆ ತರುವ ಅವಕಾಶ ಕೇಂದ್ರದ ಮುಂದಿದೆ. ಜನರ ಆರ್ಥಿಕ ಸಾಮರ್ಥ್ಯ ಹೆಚ್ಚಿದರೆ ಅದರ ಲಾಭ ಉದ್ಯಮಗಳಿಗೂ, ಮಾರುಕಟ್ಟೆಗೂ ಸಿಕ್ಕಿಯೇ ಸಿಗುತ್ತದೆ.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ