Advertisement
ಭಾರತೀಯರಿಗೆ ಗ್ರಹಣ?ಇಂದು ಭಾರತೀಯರೂ ಗ್ರಹಣದರ್ಶನ ಮಾಡಬಹುದು. ಆದರೆ ಯೂಟ್ಯೂಬ್‌ನಲ್ಲಿ ಮಾತ್ರ! ಸ್ಪೇಸ್ ಇಂಡಿಯಾ ಸಂಸ್ಥೆ ಭಾರತೀಯರಿಗಾಗಿಯೇ ಖಗ್ರಾಸ ಸೂರ್ಯಗ್ರಹಣ ನೇರ ಪ್ರಸಾರ ಮಾಡಲಿದೆ. ದೆಹಲಿ ಮೂಲದ ಈ ಸಂಸ್ಥೆ ಅಮೆರಿಕದಿಂದ ವೈಜ್ಞಾನಿಕ ಸಂಸ್ಥೆಯೊಂದರ ಸಹಯೋಗದಲ್ಲಿ ಸೂರ್ಯಗ್ರಹಣದ ನೇರ ಪ್ರಸಾರ ಏರ್ಪಡಿಸಲಿದ್ದು, ಪ್ರೇಕ್ಷಕರು ಕಣ್ಣಿಗೆ ಗ್ಲಾಸ್ ಹಾಕಿಕೊಳ್ಳುವ ಅಗತ್ಯವಂತೂ ಇಲ್ಲ ಬಿಡಿ!
ಭೂಮಿಯ ಮೇಲ್ಮೆ„ ವಾತಾವರಣದ ಭಾಗವಾಗಿರುವ ಅಯಾನುಗೋಳದ ಮೇಲೆ ಗ್ರಹಣದ ಪರಿಣಾಮ ಹೇಗಿರಲಿದೆ ಎಂಬ ಅಧ್ಯಯನ. ಗ್ರಹಣವು ಭೂಮಿಯ ಮೇಲಿನ ಮತ್ತು ಉಪಗ್ರಹಗಳೊಂದಿಗಿನ “ರೇಡಿಯೋ ತರಂಗ ಸಂವಹನ’ದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ಅಧ್ಯಯನ ಸೂರ್ಯಗ್ರಹಣದ ಸಮಯದಲ್ಲಿ “ಸೋಲಾರ್ ವೆದರ್'(ಸೂರ್ಯನ ಅಂಚಿನ ಪ್ರದೇಶದಲ್ಲಿನ ಪರಿಣಾಮ ಗಳನ್ನು) ಅಪಾಯಕಾರಿ ವಿಕಿರಣಗಳನ್ನು ಹೊಮ್ಮಿಸುತ್ತದೆ. ಅದರಿಂದ ಗಗನ ಯಾತ್ರಿಗಳ ರಕ್ಷಣೆಗೆ ಸಂಬಂಧಿಸಿ ಅಧ್ಯಯನ.