Advertisement

ಕಾನೂನು ಗೌರವಿಸುವುದು ಕರ್ತವ್ಯ: ನ್ಯಾ|ಕನುಮಯ್ಯ

12:25 PM Nov 11, 2018 | |

ಹುಮನಾಬಾದ: ನಾವು ಕಾನೂನನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ. ಈ ನಿಟ್ಟಿನಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆ ಹಕ್ಕುಗಳ ಕುರಿತು ಮಾತನಾಡುವುದರ ಜೊತೆಗೆ ಕರ್ತವ್ಯವನ್ನು ಮರೆಯಬಾರದು ಎಂದು ಬಸವಕಲ್ಯಾಣ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಎಂ.ಕನುಮಯ್ಯ ಹೇಳಿದರು.

Advertisement

ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ
ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವರಿಗೂ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ನ್ಯಾಯಾಲಯ, ಅನ್ಯಾಯಕ್ಕೊಳಗಾದ ಆರ್ಥಿಕವಾಗಿ ದುರ್ಬಲರಾದವರಿಗೂ ನ್ಯಾಯ ನೀಡುವುದಕ್ಕಾಗಿ ಉಚಿತ ಕಾನೂನು ನೆರವಿನ ವ್ಯವಸ್ಥೆ ಕಲ್ಪಿಸಿದೆ. ಅರ್ಹರು ಇದರ
ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧಿಧೀಶ ಆಶೆಪ್ಪ ಬಿ.ಸಣ್ಮನಿ ಅವರು, ಕಾನೂನು ದಿನಾಚರಣೆ ಮಹತ್ವ ಕುರಿತು ಆ ವ್ಯವಸ್ಥೆಯಿಂದ ಜನಸಾಮಾನ್ಯರು, ಆರ್ಥಿಕ ದುರ್ಬಲರಿಗೆ ಆಗುವ ಲಾಭಗಳ ಕುರಿತು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ತಾಲೂಕು ಘಟಕ ಅಧ್ಯಕ್ಷ ಶಂಭುಲಿಂಗ ಧುಮ್ಮನಸೂರೆ ಮಾತನಾಡಿ,
ಪ್ರತಿಯೊಬ್ಬರೂ ಕಾನೂನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘದ ಉಪಾಧ್ಯಕ್ಷ ಈಶ್ವರ ಸೋನಕೇರಾ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜೋತಗೊಂಡ, ಕಲ್ಯಾಣರಾವ್‌ ಪರಶಟ್ಟಿ, ದತ್ತಾರೆಡ್ಡಿ, ಮನೋಜಕುಮಾರ ಹಾಗೂ ನೂರಕ್ಕೂ ಅಧಿಕ ಜನ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು. ಭೀಮರಾವ್‌ ಓತಗಿ
ನಿರೂಪಿಸಿದರು. ಕೆ.ಶ್ರೀಮಂತ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next