Advertisement
12 ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ನಡೆಯುವ ಐತಿಹಾಸಿಕ ಜಾಂಬ್ರಿ ಗುಹಾ ಪ್ರವೇಶದ ಸನಿಹದಲ್ಲಿ ಕಳೆಂಜನ ಗುಂಡಿ ಇದೆ. ಮುಳಿಹುಲ್ಲು ಆವರಿಸಿರುವ ಇಲ್ಲಿ ಜಾನುವಾರು ಮೇವಿಗೆಂದು ಬರುತ್ತಿದ್ದವರ ಬಾಯಾರಿಕೆ ತಣಿಸಲು ಈ ಹೊಂಡ ಆಶ್ರಯಿಸಿದ್ದರು. ಕಾಡು ಪ್ರಾಣಿ, ಜಾನುವಾರುವಿನ ದಾಹವನ್ನೂ ನೀಗಿಸುತಿತ್ತು. ಪ್ರತಿ ವರ್ಷ ಮಳೆ ಸುರಿದು ಜಾಂಬ್ರಿ ಕೆರೆ ತುಂಬಿ ಕಳೆಂಜನ ಗುಂಡಿ ಭರ್ತಿ ಆಗುತಿತ್ತು. ವರ್ಷವಿಡಿ ಒರೆತೆ ತುಂಬಿ ಜಲಚರಗಳ ದಾಹ ತಣಿಸುತ್ತಿತ್ತು.
ಈ ಕಳೆಂಜನ ಗುಂಡಿಗೆ ಒಂದು ಇತಿಹಾಸ ಇದೆ. ತುಳುನಾಡಿನ ಕರ್ಕಾಟಕ ಮಾಸ ಮನೆಗಳಿಗೆ ತೆರಳಿ ಕಷ್ಟಗಳನ್ನು ಕಳೆಯುವ ಆಟಿ ಕಳೆಂಜ ದಾನ ಧರ್ಮಗಳನ್ನು ಪಡೆಯುವ ತಿಂಗಳು. ಆದರೆ ಆಟಿ ಕಳೆಂಜನೋರ್ವ ಆಟಿ ತಿಂಗಳು ಕಳೆದು ಸಿಂಹ ಸಂಕ್ರಾಂತಿ ಬಂದರೂ ಯಾತ್ರೆ ಮುಂದುವರಿಸುತ್ತಾನೆ. ಸಿಂಹ ಮಾಸದಲ್ಲಿ ಧರ್ಮ ಬೇಡುವುದು ನಿಷಿದ್ಧವಾದರೂ ಕಟ್ಟಳೆಯನ್ನು ಮೀರಿ ಸಿಂಹ ಮಾಸದ ಮೊದಲ ದಿನ ಚೆಂಡೆತ್ತಡ್ಕ ಜಾಂಬ್ರಿ ಗುಹೆ ಸಮೀಪ ಬಂದಾಗ ಅದೃಶ್ಯನಾಗುತ್ತಾನೆ. ಈ ಪ್ರದೇಶ ಕಳೆಂಜನ ಗುಂಡಿ ಎಂದು ಜನಜನಿತವಾಗಿದೆ ಎನ್ನುತ್ತದೆ ಇತಿಹಾಸ.
ಇದೇ ಹೊಂಡ ಹತ್ತಿರ ಕಳೆಂಜ ತನ್ನ ಒಲಿಯ ಕೊಡೆಯನ್ನು ಊರಿದ ಸ್ಥಳ ವೆಂದು ಹೇಳಲಾಗುವ ಚಿಕ್ಕ ರಂಧ್ರವಿದೆ. ಊರಲ್ಲೂ ನೀರಿಗೆ ಬರ
ಚೆಂಡೆತ್ತಡ್ಕ ಸನಿಹದ ಪುತ್ತೂರು ತಾಲೂಕಿಗೆ ಸೇರಿರುವ ಗಿಳಿಯಾಲು ಪರಿಸರದಲ್ಲಿಯು ನೀರಿನ ಸಮಸ್ಯೆ ಉಂಟಾಗಿದೆ. ಕೃಷಿ ತೋಟಕ್ಕೆ ನೀರಿಲ್ಲದೆ ಜನರು ಸಮಸ್ಯೆಗೆ ಒಳಗಾಗಿದ್ದಾರೆ. ಪರಿಸ್ಥಿತಿ ಈ ತೆರನಾಗಿ ಮುಂದುವರಿದರೆ ಕುಡಿಯುವ ನೀರಿಗೂ ಬರ ಬಂದೊಗುವ ಸಾಧ್ಯತೆ ಇದೆ ಅನ್ನುತ್ತಾರೆ ಸ್ಥಳೀಯ ನಿವಾಸಿಗಳು.
Related Articles
ಎರಡು ವರ್ಷ ಹಿಂದೆ ನಡೆದ ಜಾಂಬ್ರಿ ಮಹೋತ್ಸವ ಸಂದರ್ಭ ಕಳೆಂಜನ ಗುಂಡಿ ನೀರಿನಿಂದ ತುಂಬಿತ್ತು. ಇತಿಹಾಸದಲ್ಲಿ ಪ್ರಥಮ ಬಾರಿ ಎಂಬಂತೆ ಬತ್ತಿರುವುದು ಪ್ರಕೃತಿ ನೀಡುವ ಬರಗಾಲದ ಸೂಚನೆ. ಎಲ್ಲೆಂದರಲ್ಲಿ ಕೊಳವೆ ಬಾವಿ ನಿರ್ಮಾಣ ಕಳೆಂಜನ ಗುಂಡಿ ಒರತೆ ನಿಲ್ಲಲು ಕಾರಣವಾಗಿರಬಹುದು ಅನ್ನುತ್ತಾರೆ ಸ್ಥಳೀಯ ನಿವಾಸಿಗಳು.
Advertisement
ನೀರಿಲ್ಲದೆ ಬತ್ತಿದೆಬೇಸಗೆಯಲ್ಲಿಯೂ ಈ ಹೊಂಡದಲ್ಲಿ ನೀರಿರುತ್ತಿತ್ತು. ಕೈಯಲ್ಲೇ ತೆಗೆದು ಕುಡಿಯಲು ಸಾಧ್ಯವಿರು ವಷ್ಟರ ಮಟ್ಟಿಗೆ ಮೇಲ್ಭಾಗದಲ್ಲಿ ನೀರು ಕಾಣುತಿತ್ತು. ಈ ಬಾರಿ ಬತ್ತಿದೆ. ಇದಕ್ಕೆ ಬರಗಾಲವೂ ಕಾರಣ. ಹೊಂಡ ತುಂಬಲು ಮಳೆ ಬರಬೇಕಷ್ಟೆ.
– ನಾರಾಯಣ ಪ್ರಕಾಶ, ಸ್ಥಳೀಯ ನಿವಾಸಿ ಮಾಧವ ನಾಯಕ್ ಕೆ.