Advertisement
ಇತ್ತೀಚಿನ ದಿನಗಳಲ್ಲಿ ಅರಣ್ಯಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಅರಣ್ಯ ನಾಶವಾಗಿದೆ. ಅದೇ ರೀತಿ ರಸ್ತೆ ನಿರ್ಮಾಣಗಳ ಸಂದರ್ಭದಲ್ಲಿ ನೂರಾರು ವರ್ಷಗಳಿಂದ ಬೆಳೆದಿದ್ದ ಹಳೆಯ ಮರಗಳನ್ನು ಕಡಿದು ನೆಲಸಮ ಮಾಡಲಾಗಿದೆ. ಅದೇ ರೀತಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ನೆಡಲಾಗಿದ್ದ ಮರಗಳು ರಸ್ತೆ ನಿರ್ಮಾಣಕ್ಕಾಗಿ ಹವನ ಆಗಿವೆ.
Related Articles
Advertisement
ಅರಣ್ಯ ರಕ್ಷಣೆ: ಸರ್ಕಾರ ಅರಣ್ಯವನ್ನು ಉಳಿಸುವ ಸಲುವಾಗಿ ಮತ್ತು ಅರಣ್ಯದಲ್ಲಿ ವಾಸ ಮಾಡುವ ಕಾಡುಪ್ರಾಣಿಗಳ ರಕ್ಷಣೆ ಮಾಡುವ ಸಲುವಾಗಿ ಅಲ್ಲಲ್ಲಿ ಗಿಡಮರಗಳನ್ನು ನೆಡುತೋಪು ಯೋಜನೆಯಡಿಯಲ್ಲಿ ಸಾವಿರಾರು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಯೋಜನೆಗೆ ಮುಂದಾಗಿದೆ. ಕಾಡು ಬೆಳೆದರೆ ಮಳೆಯು ಸುರಕ್ಷಿತವಾಗಿ ಬರುವುದರಿಂದ ಕಾಡುಪ್ರಾಣಿಗಳ ರಕ್ಷಣೆ ಮಾಡಬಹುದೆಂಬ ಯೋಜನೆಯನ್ನು ಜಾರಿಗೆ ತಂದಿದೆ.
ಒತ್ತಾಯ: ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ನೆಡುತೋಪು ಯೋಜನೆಯಡಿಯಲ್ಲಿ ನೆಟ್ಟಿರುವ ಸಸಿಗಳನ್ನು ಕೂಡಲೇ ರಕ್ಷಣೆ ಮಾಡಿ ಅದನ್ನು ಉತ್ತಮ ರೀತಿಯಲ್ಲಿ ಬೆಳೆಯುವಂತೆ ಮಾಡಿ, ಕುಲುಷಿತಗೊಂಡಿರುವ ಪರಿಸರವನ್ನು ಸರಿಪಡಿಸಿ ಸಕಾಲದಲ್ಲಿ ಮಳೆ ಬರುವಂತೆ ಮಾಡಬೇಕು ಎಂದು ರೈತ ಮುಖಂಡ ಎಂ.ನಾಗರಾಜು ಒತ್ತಾಯಿಸಿದ್ದಾರೆ.
ಮೇಲೇಳದ ಸಸಿಗಳು: ನೆಡುತೋಪು ಯೋಜನೆಯಡಿಯಲ್ಲಿ ಸುಮಾರು 1.50 ಲಕ್ಷ ರೂ ಅಂದಾಜಿನಲ್ಲಿ ಜಮೀನುಗಳಲ್ಲಿ ಸಸಿಗಳನ್ನು ನೆಡಬೇಕು. ಮತ್ತು ನೆಟ್ಟ ಬಳಿಕ ಗಿಡಗಳಿಗೆ ಪೋಷಣೆಯನ್ನು ಅರಣ್ಯ ಇಲಾಖೆಯಿಂದಲೇ ರಕ್ಷಣೆ ಮಾಡಿ ಪೋಷಿಸಿ ಬೆಳೆಸುವಂತೆ ಸರ್ಕಾರದ ಸೂಕ್ತ ನಿರ್ದೇಶನ ಇದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ನೆಪಮಾತ್ರಕ್ಕೆ ಸಸಿಗಳನ್ನು ನೆಟ್ಟು ಅದನ್ನು ಸರಿಯಾಗಿ ಪೋಷಣೆ ಮಾಡದೆ ಇರುವುದರಿಂದ ಸಸಿಗಳು ಬೆಳೆಯಲಾಗದೆ ಮೊಳಕೆಯಲ್ಲಿಯೇ ಮೇಲೆ ಬರದಂತೆ ಆಗಿದೆ.
ನೆಡುತೋಪು ಯೋಜನೆಯಡಿಯಲ್ಲಿ ಅರಣ್ಯ ಬೆಳೆಸುವ ಸಲುವಾಗಿ ನೆಟ್ಟಿರುವ ಸಸಿಗಳ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ಗಿಡಗಳು ಉತ್ತಮ ರೀತಿಯಲ್ಲಿ ಬೆಳೆಯುವಂತೆ ಮಾಡಲಾಗುವುದು.-ಏಳುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ * ಡಿ.ನಟರಾಜು