Advertisement

ಕನಸು ನನಸು ಮಾಡಿದವರ ಋಣ ತೀರಿಸುವೆ

12:31 PM May 27, 2018 | |

ಮೈಸೂರು: ರಾಜಕೀಯದಲ್ಲಿ ನನ್ನ ಕನಸಿನ ಹುದ್ದೆಯನ್ನು ಪಡೆಯಲು ಶ್ರಮಿಸಿದ ನಿಮ್ಮೆಲ್ಲರ ಋಣ ನನ್ನ ಮೇಲಿದ್ದು, ನನ್ನ ಬದುಕಿನ ಕೊನೆಯವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಲ್‌.ನಾಗೇಂದ್ರ ಹೇಳಿದರು.

Advertisement

ಚಾಮರಾಜ ಕ್ಷೇತ್ರದ ಬಿಜೆಪಿ ವತಿಯಿಂದ ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕ್ಷೇತ್ರದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷದಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನನ್ನ ಕನಸಿನ ಪದವಿಯನ್ನು ಪಡೆಯಲು ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದಾರೆ.

ಹೀಗಾಗಿ ನಿಮ್ಮ ಸೇವಕನಾಗಿ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸಲಿದ್ದು, ಆ ಮೂಲಕ ನೀವು ನೀಡಿರುವ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಹಾಗೂ ಶಂಕರಲಿಂಗೇಗೌಡರ ಮಾದರಿಯಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದರು.

ಮುಂದೆಯೂ ಬೆಂಬಲಿಸಿ: ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಮುಂದೆ ನಡೆಯುವ ನಗರ ಪಾಲಿಕೆ ಹಾಗೂ ಪದವೀಧರರ, ಶಿಕ್ಷಣ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ. ಅಲ್ಲದೆ ಮುಂದಿನ ವರ್ಷದಲ್ಲಿ ನಡೆಯುವ ಲೋಕಸಬಾ ಚುನಾವಣೆಯಲ್ಲೂ ಸಹ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕಿದೆ ಎಂದು ಹೇಳಿದರು.

ಬಿಎಸ್‌ವೈ ಸಿಎಂ: ರಾಜದ 104 ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ಆದರೆ ಜೆಡಿಎಸ್‌-ಕಾಂಗ್ರೆಸ್‌ ಮಾಡಿಕೊಂಡ ಅಪವಿತ್ರ ಮೈತ್ರಿಯಿಂದಾಗಿ ಬಿ.ಎಸ್‌.ಯಡಿಯೂರಪ್ಪಮುಖ್ಯಮಂತ್ರಿಯಾಗುವುದು ಕೈ ತಪ್ಪಿದೆ. ಆದರೆ ಇದರಿಂದ ಪಕ್ಷದ ಕಾರ್ಯಕರ್ತರು ನಿರಾಶೆಯಾಗದೆ, ಪಕ್ಷದ ಏಳಿಗೆಗಾಗಿ ಕೆಲಸ ಮಾಡಬೇಕಿದೆ. ಇನ್ನೂ ಆರು ತಿಂಗಳಲ್ಲಿ ಮತ್ತೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

Advertisement

ಎನ್‌.ಆರ್‌.ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಸಂದೇಶ್‌ಸ್ವಾಮಿ ಮಾತನಾಡಿ, ಕಳೆದ 15 ವರ್ಷದಿಂದ ನಗರಪಾಲಿಕೆ ಸದಸ್ಯರಾಗಿದ್ದ ದಿನದಿಂದಲೂ ನಾಗೇಂದ್ರ ಹಾಗೂ ತಾವು ಉತ್ತಮ ಸ್ನೇಹಿತರಾಗಿದ್ದೇವೆ. ಆದರೆ ದುರಾದೃಷ್ಟವಶಾತ್‌ ನಾನು ಶಾಸಕನಾಗಿ ಆಯ್ಕೆ ಆಗಲು ಸಾಧ್ಯವಾಗಲಿಲ್ಲ.

ಆದರೂ ಬೇಸರವಿಲ್ಲ ನಾಗೇಂದ್ರ ಅವರು ಶಾಸಕರಾಗಿರುವ ಸಂತಸವಿದೆ. ಮುಂದೆಯೂ ಕಾರ್ಯಕರ್ತರು ಪಕ್ಷ ಸಂಘಟನೆಗೆ ಇದೇ ರೀತಿ ಬೆಂಬಲವಾಗಿ ನಿಂತು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮುಂದಿನ 30 ವರ್ಷ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಎಚ್‌.ಬಿ.ಮಂಜುನಾಥ್‌, ಮಾಜಿ ವಿಧಾನಪರಿಷತ್‌ ಸದಸ್ಯ ಡಿ.ಮಾದೇಗೌಡ, ತೋಂಟದಾರ್ಯ, ಮೈ.ವಿ.ರವಿಶಂಕರ್‌, ಮುಖಂಡರಾದ ಸಿ.ಬಸವೇಗೌಡ, ಮಲ್ಲಪ್ಪಗೌಡ, ಪಾಲಿಕೆ ಸದಸ್ಯರಾದ ವನಿತಾ ಪ್ರಸನ್ನ, ಶಿವಕುಮಾರ್‌, ಗಿರೀಶ್‌ಪ್ರಸಾದ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next