ದಾವಣಗೆರೆ: ನಾಟಕ ನಮ್ಮ ಜೀವನ, ನಮ್ಮ ಭಾವನೆ, ನಮ್ಮ ಆಧ್ಯಾತ್ಮ, ನಮ್ಮ ಸಮಾಜ ಎಂದು ಧಾರವಾಡ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥ, ದ್ವಿಭಾಷ ತಜ್ಞ ಪ್ರೊ| ಮಲ್ಲಿಕಾರ್ಜುನ್ ಪಾಟೀಲ್ ಅಭಿಪ್ರಾಯಪಟ್ಟರು.
ಭಾನುವಾರ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ. ಗೋವಿಂದೇಗೌಡರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಪ್ರಕಾಶ್ ಕೊಡಗನೂರುರವರ ರೋಲ್ ಪ್ಲೇàಜ್ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಸಿನಿಮಾ ಬೇರೆ, ನಾಟಕ ಬೇರೆ. ಸಿನಿಮಾದಿಂದ ಕೇವಲ ಮನೋರಂಜನೆ ಅಷ್ಟೇ ಸಿಗುವುದಿಲ್ಲ. ಮನೋಕ್ಲೇಷವೂ ಉಂಟಾಗುತ್ತದೆ. ಆದರೆ ನಾಟಕ ಹಾಗಲ್ಲ. ಸಮಾಜ ಸುಧಾರಣೆಗೆ ನಾಟಕ ಮನೋರಂಜನೆಯ ಜೊತೆಗೆ, ಮನೋವಿಕಾಸವನ್ನುಂಟು ಮಾಡಿ ಸಮಾಜದ ದಿಕ್ಸೂಚಿಯಾಗಬಲ್ಲದು ಎಂದರು.
ಕೃತಿ ಕುರಿತು ಮಾತನಾಡಿದ ಅಂತರಾಷ್ಟ್ರೀಯ ಶಿಕ್ಷಣ ಮತ್ತು ಭಾಷಾ ತಜ್ಞ ಎ.ಎಚ್. ಸಾಗರ್, ಬಹಳಷ್ಟು ದೇಶಗಳ ಹೋರಾಟಗಳಲ್ಲಿ ಮುಂಚೂಣಿಯಲ್ಲಿಧಿ ರುವವರು ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳನ್ನು ತಯಾರು ಮಾಡುವವರು ಪ್ರಕಾಶ್‌ರಂತಹ ಶಿಕ್ಷಕರು. ನಮ್ಮಲ್ಲಿ ಹೋರಾಟಗಳೆಲ್ಲ ಪ್ರತ್ಯೇಕಗೊಂಡಿವೆ.
ಇದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಮಾರಕ ಎಂದರು. ಪ್ರಕಾಶ್‌ರಂತಹ ಶಿಕ್ಷಕರು ಇಂಗ್ಲಿಷ್ ನಲ್ಲಿ ಅಥವಾ ಕಂಗ್ಲಿಷ್‌ನಲ್ಲಿ ಮಕ್ಕಳನ್ನು ನಿಪುಣರನ್ನಾಗಿ ಮಾಡಬಹುದು, ಮಾಡುತ್ತಾರೆ ಕೂಡ. ಆದರೆ ಮುಂದಿನ ಚಿತ್ರಣವೇ ಬೇರೆ.
ಜಾಣ ವಿದ್ಯಾರ್ಥಿಗಳೆಲ್ಲ ಮಲ್ಟಿನ್ಯಾಷನಲ್ ಕಂಪನಿಗಳು ನೀಡುವ ಅತ್ಯಾಕರ್ಷಕ ವೇತನದ ಗುಲಾಮರಾಗಿ ಸಮಾಜಕ್ಕೆ ನಿರೂಪಯೋಗಿಗಳಾಗುತ್ತಿದ್ದಾರೆ. ಹೀಗಾಗಿ ದೇಶದ ಭವಿಷ್ಯ ಅಂತಕದಲ್ಲಿದೆ. ಇಲ್ಲಿ ಪ್ರತ್ಯೇಕತಾ ಭಾವನೆಯನ್ನು ಹೊರತುಪಡಿಸಿ ನಾವು, ನಮ್ಮ ಸಮಾಜ, ನಮ್ಮ ಊರು,
ನಮ್ಮ ದೇಶ ಎಂಬೆಲ್ಲ ಐಕ್ಯತಾ ಭಾವನೆಗಳು ಒಡಮೂಡುವಲ್ಲಿ ಪ್ರಕಾಶರ ನಾಟಕಗಳು ಮತ್ತು ಇನ್ನಿತರ ರಂಗ ಪ್ರದರ್ಶನದ ಪ್ರಯೋಗಗಳು ಸಹಕಾರಿಯಾಗಬಲ್ಲವು ಎಂದು ಆಶಿಸಿದರು. ದೊಗ್ಗಳ್ಳಿಗೌಡ್ರ ಪುಟ್ಟರಾಜು, ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್. ಎಚ್. ಅರುಣಕುಮಾರ್, ಪ್ರಕಾಶ್ ಕೊಡಗನೂರು ವೇದಿಕೆಯಲ್ಲಿದ್ದರು.