Advertisement

ದೇಶಿ ಲಸಿಕೆ ಕೊವ್ಯಾಕ್ಸಿನ್‌ ಶೇ.60 ಪರಿಣಾಮಕಾರಿ

12:52 AM Nov 23, 2020 | mahesh |

ಹೊಸದಿಲ್ಲಿ: ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ 2ನೇ ಅಲೆಯ ಆತಂಕ ಎದುರಾಗಿರುವಾಗಲೇ, ದೇಶೀಯ ಲಸಿಕೆ ಕೋವ್ಯಾಕ್ಸಿನ್‌ ಬಗ್ಗೆ ಮತ್ತಷ್ಟು ಆಶಾಭಾವ ಮೂಡಿದೆ. ಈ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಭಾರತ್‌ ಬಯೋಟೆಕ್‌, ಸಿಹಿ ಸುದ್ದಿಯೊಂದನ್ನು ನೀಡಿದ್ದು, ಈ ಲಸಿಕೆ ಶೇ.60ರಷ್ಟು ಪರಿಣಾಮಕಾರಿ ಎಂದು ಹೇಳಿದೆ.

Advertisement

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತಲೂ ಇದು ಹೆಚ್ಚೇ ಇದೆ ಎಂದೂ ಭಾರತ್‌ ಬಯೋಟೆಕ್‌ನ ಗುಣಮಟ್ಟ ಕಾರ್ಯಾಚರಣೆಯ ಅಧ್ಯಕ್ಷ ಸಾಯಿ ಡಿ ಪ್ರಸಾದ್‌ ಹೇಳಿದ್ದಾರೆ. ಸದ್ಯ ಈ ಲಸಿಕೆಯ ಪ್ರಯೋಗ ನಡೆಸುತ್ತಿದ್ದು, ಇದರ ದತ್ತಾಂಶಗಳನ್ನು ಪರಿಶೀಲಿಸಿದ ಅನಂತರ ಶೇ.60ರಷ್ಟು ಪರಿಣಾಮ­ಕಾರಿ ಎಂಬುದು ಗೊತ್ತಾಗಿದೆ. ಜಾಗತಿಕ ಸಂಸ್ಥೆಗಳ ಪ್ರಕಾರ ಶೇ.50­ರಷ್ಟು ಪರಿಣಾಮಕಾರಿಯಾಗಿದ್ದರೆ ಸಾಕು. ಆದರೆ, ಇದನ್ನು ಮೀರಿದ ಫ‌ಲಿತಾಂಶ ಸಿಗುತ್ತಿದೆ ಎಂದರು.

ಈ ಮಧ್ಯೆ, ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ಪಂಜಾಬ್‌, ಹಿಮಾಚಲ ಪ್ರದೇಶ ಉತ್ತರ ಪ್ರದೇಶಕ್ಕೆ ತೆರಳಿವೆ. ಕಳೆದ ವಾರ­ವಷ್ಟೇ ರಾಜಸ್ಥಾನ, ಹರಿಯಾಣ, ಗುಜರಾತ್‌ ಮತ್ತು ಮಣಿಪುರಕ್ಕೆ ತೆರಳಿದ್ದವು.

ಅತ್ತ ಇಂಗ್ಲೆಂಡ್‌ನಲ್ಲಿ ಈಗಾಗಲೇ ಘೋಷಣೆಯಾಗಿರುವ ಲಾಕ್‌ಡೌನ್‌ ಡಿ.2ಕ್ಕೆ ಮುಗಿಯಲಿದ್ದು, ಬಳಿಕ ಜನರಿಗೆ ಕಠಿನ ನಿಯಮಗಳನ್ನು ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ತುರ್ತು ದೃಢೀಕರಣ?: ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫ‌ರ್ಡ್‌ ಲಸಿಕೆಗೆ ಭಾರತದಲ್ಲಿ ತುರ್ತು ದೃಢೀಕರಣ ಸಿಗುವ ಸಾಧ್ಯತೆ ಇದೆ. ಬ್ರಿಟನ್‌ನಲ್ಲಿ ಒಪ್ಪಿಗೆ ಸಿಕ್ಕಿದರೆ, ಇಲ್ಲಿ ಈ ಲಸಿಕೆಗೂ ಒಪ್ಪಿಗೆ ನೀಡಬಹುದು ಎಂದು ನೀತಿ ಆಯೋಗದ ಸದಸ್ಯರೊಬ್ಬರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next