Advertisement
ಇಡೀ ದೇಶವನ್ನೇ ಲಾಕ್‌ಡೌನ್ ಮಾಡುವುದ ಕ್ಕಿಂತ ಸೋಂಕು ಹೆಚ್ಚಿರುವ ಕಡೆಗಳಲ್ಲಿ ಮಾತ್ರ ಕಠಿನ ನಿರ್ಬಂಧ ಹೇರುವುದು ಕೇಂದ್ರ ಸರಕಾರದ ಚಿಂತನೆ. ಸೋಂಕು ಕಾಣಿಸದ ಕಡೆಗಳಲ್ಲಿ ನಿಯಮಾವಳಿಗಳನ್ನು ಸ್ವಲ್ಪ ಸಡಿಲಗೊಳಿಸಿದರೆ ಆರ್ಥಿಕತೆ ಯನ್ನೂ ಕೊಂಚ ಮೇಲೆತ್ತಬಹುದು ಎಂಬ ಆಲೋಚನೆಯೂ ಇದರ ಹಿಂದಿದೆ. ಹೀಗಾಗಿ ಇಡೀ ದೇಶವನ್ನೇ ಮೂರು ವಲಯ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಈ ಮೂರು ವಲಯಗಳನ್ನು ಹೇಗೆ ವಿಂಗಡಿಸಲಾಗುತ್ತದೆ, ಈ ಬಣ್ಣಗಳು ಏನು ಹೇಳುತ್ತವೆ, ಯಾವ ಬಣ್ಣದ ವಲಯದಲ್ಲಿ ಏನೇನಿರುತ್ತದೆ, ಏನಿರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಅತಿ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣ ಹೊಂದಿರುವ ಜಿಲ್ಲೆಗಳನ್ನು ಕೆಂಪು ವಲಯ (ರೆಡ್ ಝೋನ್) ಎಂದು ಗುರುತಿಸಲಾಗುತ್ತದೆ. ಇಂಥಲ್ಲಿ ಕಟ್ಟೆಚ್ಚರ ಜಾರಿಯಲ್ಲಿ ಇರಲಿದ್ದು, ಯಾವುದೇ ಕಾರಣಕ್ಕೂ ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಹಾಲು, ಔಷಧ ದಂತಹ ಅಗತ್ಯ ಸೇವೆಗಳು ಮಾತ್ರ ಸಿಗಬಹುದು. ಕಿತ್ತಳೆ ವಲಯ
ಕೆಂಪು ವಲಯಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಪ್ರಕರಣಗಳಿರುವ ಮತ್ತು ಇತ್ತೀಚೆಗೆ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳದೆ ಇರುವ ಜಿಲ್ಲೆಗಳನ್ನು ಕಿತ್ತಳೆ ವಲಯ (ಆರೆಂಜ್ ಝೋನ್) ಎಂದು ಗುರುತಿಸಲಾಗುತ್ತದೆ. ನಿಯಮಿತ ಜನಸಂಚಾರ ಮತ್ತು ಕೃಷಿ ಉತ್ಪನ್ನಗಳ ಕಟಾವಿನಂತಹ ಚಟುವಟಿಕೆ ಗಳಿಗೆ ಇಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.
Related Articles
ಕೋವಿಡ್-19 ವೈರಸ್ ಸೋಂಕಿನ ಒಂದೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳನ್ನು ಹಸಿರು ವಲಯ (ಗ್ರೀನ್ ಝೋನ್
) ಗಳು ಎಂಬುದಾಗಿ ಗುರುತಿಸಲಾಗುತ್ತದೆ. ಇಲ್ಲಿ ಬಹುತೇಕ ಅಗತ್ಯ ಸೇವೆಗಳು ಇರಲಿವೆ.
Advertisement