Advertisement

ಮತದಾನಕ್ಕೆ ಜಿಲ್ಲಾಡಳಿತ ಸರ್ವ ಸನ್ನದ್ಧ

03:42 PM Apr 20, 2019 | Team Udayavani |

ಕೊಪ್ಪಳ: ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಏ. 23ರಂದು ನಡೆಯಲಿದ್ದು, ಜಿಲ್ಲಾಡಳಿತವು ಸರ್ವ ಸನ್ನದ್ಧವಾಗಿದೆ. 2033 ಮತಗಟ್ಟೆಗಳಿಗೆ 9817 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏ. 23ರಂದು ಮತದಾನ ನಡೆಯಲಿದೆ. ಮೇ 23ಕ್ಕೆ ಮತ ಎಣಿಕೆ ನಡೆಯಲಿದ್ದು, ಮೇ 27ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಂತಿಮವಾಗಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 8 ಕ್ಷೇತ್ರದಲ್ಲಿ 2033 ಮತಗಟ್ಟೆ ಸ್ಥಾಪಿಸಲಾಗಿದ್ದು 8,62,466 ಪುರುಷ, 8,73,539 ಮಹಿಳೆ, 113 ಇತರೆ ಸೇರಿದಂತೆ ಒಟ್ಟಾರೆ 17,36,118 ಮತದಾರರಿದ್ದಾರೆ. ಕ್ಷೇತ್ರದಲ್ಲಿ 560 ಪುರುಷ, 15 ಮಹಿಳಾ ಸೇರಿದಂತೆ 575 ಸೇವಾ ಮತದಾರರಿದ್ದಾರೆ.

43 ಸಾವಿರ ಯುವ ಮತದಾರರು: ಈ ಬಾರಿ 43,216 ಯುವ ಮತದಾರರು ಮತಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 24,557 ಪುರುಷರಿದ್ದರೆ, 18655 ಮಹಿಳಾ ಮತದಾರದ್ದಾರೆ. ಇನ್ನೂ 8 ಕ್ಷೇತ್ರಗಳಲ್ಲಿ ವಿಕಲಚೇತನ, ಕಿವುಡ, ಮೂಗ ಮತದಾರರನ್ನು ಪತ್ತೆ ಮಾಡಲಾಗಿದ್ದು, ಅಂಧ ಮತದಾರರು 2271, ಕಿವುಡ ಮತ್ತು ಮೂಗ ಮತದಾರರು 2018, ವಿಕಲಚೇತನ 12185 ಇತರೆ 2323 ಸೇರಿದಂತೆ ಒಟ್ಟು 18,797 ಮತದಾರರಿದ್ದಾರೆ.

ವಿಕಲಚೇತನ, ಸಖೀ ಮತಗಟ್ಟೆ: ಕೊಪ್ಪಳದ ಎಂಎಚ್ಪಿಎಸ್‌ ಶಾಲೆಯ ಮತಗಟ್ಟೆಯಲ್ಲಿ ಎಲ್ಲ ವಿಕಲಚೇತನ ಸಿಬ್ಬಂದಿಗಳನ್ನೇ ನಿಯೋಜನೆ ಮಾಡಲಾಗಿದೆ. ಇನ್ನೂ ಸಿಂಧನೂರಿನ ಗ್ಲೋರಿ ಶಾಲೆ, ಎಪಿಎಂಸಿ ಯಾರ್ಡ್‌ನ ಸರ್ಕಾರಿ ಪ್ರಾಥಮಿಕ ಶಾಲೆ, ಮಸ್ಕಿಯ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಕುಷ್ಟಗಿಯ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಕನಕಗಿರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಂಗಾವತಿಯ ಎಚ್.ಆರ್‌. ಸರೋಜಮ್ಮ ಸ್ಮಾರಕ ಬಾಲಕಿಯರ ಸಂಯುಕ್ತ ಪಪೂ ಕಾಲೇಜು, ಯಲಬುರ್ಗಾದ ಪಪಂ ಕಾರ್ಯಾಲಯ, ಕೊಪ್ಪಳದ ಪಿಎಲ್ಡಿ ಬ್ಯಾಂಕ್‌, ಸಿರಗುಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮಹಿಳಾ ಅಥವಾ ಸಖೀ ಮತಗಟ್ಟೆ ಎಂದು ಸ್ಥಾಪಿಸಿದೆ. ಇಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೇ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಜಿಲ್ಲೆಯಲ್ಲಿ ಪೊಲೀಸ್‌ ತಂಡ 50595 ರೂ. ಮೌಲ್ಯದ 154 ಲೀಟರ್‌ ಅಕ್ರಮ ಮದ್ಯ ವಶ ಪಡಿಸಿಕೊಂಡಿದ್ದು, 42 ಎಫ್‌ಐಆರ್‌ ದಾಖಲಿಸಿದೆ. ಇನ್ನೂ ಅಬಕಾರಿ ತಂಡವು 49,06,929 ಮೌಲ್ಯದ 29,125 ಲೀ ಅಕ್ರಮ ಮದ್ಯ ವಶಕ್ಕೆ ಪಡೆದಿದೆ. 4 ವಾಹನ ವಶಕ್ಕೆ ಪಡೆದಿದ್ದು, 64 ಲಕ್ಷ ಮೌಲ್ಯದ್ದಾಗಿವೆ. ಇನ್ನೂ ಫ್ಲಯಿಂಗ್‌ ಸ್ಕ್ವಾಡ್‌ ತಂಡವು 6821 ಮೌಲ್ಯದ 17 ಲೀಟರ್‌ ಅಕ್ರಮ ಮದ್ಯ ವಶಕ್ಕೆ ಪಡೆದು 1 ಎಫ್‌ಐಆರ್‌ ದಾಖಲಿಸಿದ್ದರೆ ಇತರೆ 9 ಬ್ಯಾನರ್‌, 20 ಬಿಜೆಪಿ ಬಾವುಟ, 27 ಆಯುಷ್ಮಾನ್‌ ಭಾರತ ಕಾರ್ಡ್‌ ಸೇರಿ 53400 ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದು 21 ಎಫ್‌ಐಆರ್‌ ದಾಖಲಿಸಿದೆ.

Advertisement

ಲೆಕ್ಕಪತ್ರ ಸರ್ವೆಲೆನ್ಸ್‌ ತಂಡದ ದಾಳಿ: ಸ್ಟಾ ್ಯಟಿಕ್‌ ಸರ್ವೆಲೆನ್ಸ್‌ ತಂಡವು 2,05,600 ಮೌಲ್ಯದ 2 ಸಾವಿರ ಪಾಂಪ್ಲೆಟ್, 100 ಬ್ಯಾಡ್ಜ್, 200 ಸ್ಟಿಕರ್‌, 200 ಕ್ಯಾಂಡಲ್, 200 ಬಿಜೆಪಿ ಫ್ಲಾ ್ಯಗ್‌, 1 ಸ್ಕಾರ್ಪಿಯೋ ವಾಹನ, 1 ಸ್ಕೂಟಿ ವಶಕ್ಕೆ ಪಡೆದು 3 ಪ್ರಕರಣ ದಾಖಲಿಸಲಾಗಿದೆ. ಇನ್ನೂ ಚೆಕ್‌ಪೋಸ್ಟ್‌ಗಳಲ್ಲಿ 37,179 ವಾಹನಗಳ ತಪಾಸಣೆ ನಡೆಸಿದ್ದು, 24,555 ಕಾರ್‌, 4,537 ಟ್ರಕ್‌, 1,536 ಬಸ್‌, 6,551 ಇತರೆ ಸೇರಿ 2 ಲಕ್ಷ ಮೌಲ್ಯದ ವಾಹನ ಸೀಜ್‌ ಮಾಡಿದೆ. ವಿಐಪಿ ವಾಹನಗಳ ಪೈಕಿ 421 ವಾಹನಗಳಲ್ಲಿ 158 ಪೊಲೀಸ್‌ ವಾಹನ, 69 ವಿಐಪಿ ವಾಹನ, 102 ಆಂಬ್ಯುಲೆನ್ಸ್‌, 92 ಪ್ರಸ್‌ ವಾಹನಗಳ ತಪಾಸಣೆ ನಡೆಸಿದೆ.

ದೂರು: ಜಿಲ್ಲೆಯಲ್ಲಿ ಸಿವಿಜಿಲ್ ಆ್ಯಪ್‌ ಮೂಲಕ ದಾಖಲಾದ 114 ದೂರುಗಳ ಪರಿಶೀಲನೆ ನಡೆಸಿದ್ದು, ಅದರಲ್ಲಿ 55 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿವೆ. ಇನ್ನೂ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ 8 ದೂರು ಬಂದಿದ್ದು, 8 ದೂರು ವಿಲೇವಾರಿ ಮಾಡಿದೆ. ಇನ್ನೂ ಸಹಾಯವಾಣಿ 1950ಗೆ ಬಂದ ದೂರಿನಲ್ಲಿ 174 ದೂರುಗಳ ಪೈಕಿ 155 ದೂರು ವಿಲೇವಾರಿ ಮಾಡಿದ್ದು, 155 ದೂರು ಖಚಿತವಾಗಿವೆ.

9817 ಸಿಬ್ಬಂದಿ ನಿಯೋಜನೆ: 8 ಕ್ಷೇತ್ರಗಳಿಗೆ 9817 ಸಿಬ್ಬಂದಿಗಳ ನಿಯೋಜಿಸಲಾಗಿದೆ. ಅದರಲ್ಲಿ ಪಿಆರ್‌ಒ 2450, ಎಪಿಆರ್‌ಓ-2446, ಪಿಒ-4921 ಸಿಬ್ಬಂದಿ ನೇಮಕ ಮಾಡಿದೆ. ಮತಗಟ್ಟೆಯಲ್ಲಿ ಹೆಲ್ತ್ ಕಿಟ್, ಕುಡಿಯುವ ನೀರು, ಶೌಚಾಲಯ ಸೇರಿ ಇತರೆ ಸೌಲಭ್ಯ ಕಲ್ಪಿಸಿದೆ. ಸಿಬ್ಬಂದಿಯನ್ನು ಮತಗಟ್ಟೆಗೆ ಸಾಗಿಸಲು ಒಟ್ಟು 546 ವಾಹನಗಳನ್ನು ಬಳಕೆ ಮಾಡಲಾಗಿದೆ. ಇದರಲ್ಲಿ 435 ಮಾರ್ಗಗಳನ್ನು ಗುರುತಿಸಿದ್ದು, 215 ಕ್ರೂಷರ್‌, 256 ಕೆಎಸ್‌ಆರ್‌ಟಿಸಿ ಬಸ್‌, 28 ಖಾಸಗಿ ವಾಹನ, 47 ಇತರೆ ವಾಹನ ಬಳಕೆ ಮಾಡಿಕೊಳ್ಳಾಗುತ್ತಿದೆ.

ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮತ ಎಣಿಕೆ

ಚುನಾವಣೆಯ 2033 ಮತಗಟ್ಟೆಗಳಿಗೆ 2479 ಬಿಯು, 2526 ಸಿಯು, 2920 ವಿವಿ ಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಎಂಟೂ ಕ್ಷೇತ್ರದ ವಿವಿಧ ಸ್ಥಳದಲ್ಲಿ ಯಂತ್ರಗಳನ್ನು ಇಡಲಾಗಿದ್ದು, ಅಲ್ಲಿಂದಲೇ ಸಿಬ್ಬಂದಿಗೆ ಮತಯಂತ್ರ ವಿತರಣೆ ನಡೆಯಲಿದೆ. ಇನ್ನೂ ಮತದಾನ ಮುದಿ ಬಳಿಕ ಕೊಪ್ಪಳದ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು. ಜಿಪಂ ಸಿಇಒ ಆರ್‌.ಎಸ್‌. ಪೆದ್ದಪ್ಪಯ್ಯ, ಎಸ್‌ಪಿ ರೇಣುಕಾ ಸುಕುಮಾರ ಇತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next