Advertisement
ಬೆಳೆಗಾರರಿಗೆ ಕಾಡುವ ಬಹುದೊಡ್ಡ ಸಮಸ್ಯೆಯಾದ ಅಡಿಕೆ ಮರ ಹತ್ತುವ ಕಾರ್ಯಕ್ಕೆ ವಿಭಿನ್ನ ಪ್ರಯತ್ನಗಳು ನಡೆ ಯುತ್ತಲೇ ಇವೆ. ಕೊಳೆರೋಗಕ್ಕೆ ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಇವೆಲ್ಲದಕ್ಕೂ ಅಡಿಕೆ ಮರ ಏರಲೇಬೇಕು ಆದರೆ ಕಾರ್ಮಿ ಕರ ಕೊರತೆ ಹಾಗೂ ಅಡಿಕೆ ಮರವನ್ನು ಹತ್ತಿ ಮೇಲೆ ಕುಳಿತು ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಸುಲಭದ ಕೆಲಸವಲ್ಲ. ಒಂದು ಕಡೆ ಯಂತ್ರಗಳ ಆವಿಷ್ಕಾರ ನಡೆಯುತ್ತಿದ್ದರೆ ಮತ್ತೂಂದು ಕಡೆ ಸುಲಭದಲ್ಲಿ ಹಾಗೂ ರಕ್ಷಣಾತ್ಮಕವಾಗಿ ಹೇಗೆ ಮರ ಏರಬಹುದು ಎನ್ನುವ ಬಗ್ಗೆಯೂ ಅಧ್ಯಯನ, ಪ್ರಯತ್ನ ನಡೆಯುತ್ತಿವೆ. ಲಾಲ್ ಕೃಷ್ಣ ಕೈಂತಜೆ ಪ್ರಯತ್ನ ಸುಲಭದಲ್ಲಿ ಅಡಿಕೆ ಮರ ಏರು ವುದು ಹಾಗೂ ತ್ರಾಸದಾಯಕವಲ್ಲದ ರೀತಿಯಲ್ಲಿ ಅಡಿಕೆ ಮರದಲ್ಲಿ ನಿಂತು ಔಷಧಿ ಸಿಂಪಡಣೆ ಹಾಗೂ ಕೊಯ್ಲು ಮಾಡುವುದಕ್ಕೆ ದಾರಿ ಕಂಡುಕೊಂಡಿದ್ದಾರೆ.
ಎರಡು ಬಳ್ಳಿ ಹಾಗೂ ಬೈಕ್ ಅಥವಾ ಸ್ಕೂಟರ್ ಟಯರ್ ಇದ್ದರೆ ಸಾಕು ಈ ಪ್ರಯತ್ನ ಸಾಧ್ಯವಾಗುತ್ತದೆ. ಬಳ್ಳಿಯ ಒಂದು ತುದಿಗೆ ಟಯರ್ ಕಟ್ಟಿ, ಇನ್ನೊಂದು ತುದಿಯನ್ನು ಅಡಿಕೆ ಮರಕ್ಕೆ ಸಿಕ್ಕಿಸಿಕೊಂಡು ಏರುವ ಉಪಾಯ ಇದು. ಇದರಲ್ಲಿ ಇನ್ನಷ್ಟು ಸುಧಾರಣೆಗಳು ಇವೆ. ಈ ಮೂಲಕ ಸುಲಭದಲ್ಲಿ ಮರ ಏರಲು ಸಾಧ್ಯವಾಗುತ್ತದೆ ಹಾಗೂ ಆಯಾಸ ಕಡಿಮೆಯಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.
Related Articles
ಕೃಷಿಯಲ್ಲಿ ಆಧುನಿಕ ಆವಿಷ್ಕಾರಗಳು ಹಾಗೂ ನೂತನ ಪ್ರಯತ್ನಗಳನ್ನು ಮಾಡಿ ದಾಗ ಮಾತ್ರ ಕೃಷಿಕರ ಬೆಳವಣಿಗೆ ಸಾಧ್ಯ ಇದನ್ನು ಮನಗಂಡಿರುವ ಲಾಲ್ ಕೃಷ್ಣ ಹಾಗೂ ಅವರ ಕುಟುಂಬ ಕೃಷಿ ಸುಲಭಕ್ಕೆ ವಿವಿಧ ಪ್ರಯೋಗ ಮಾಡುತ್ತಲೇ ಇದ್ದಾರೆ. ಕೃಷಿ ಬೆಳವಣಿಗೆಯಲ್ಲಿ ಹೊಸ ಆವಿಷ್ಕಾರಗಳೊಂದಿಗೆ ಸುಲಭ ಕೃಷಿಯಲ್ಲಿ ಯಶಸ್ಸು ಕಾಣುವ ಭರವಸೆಯೊಂದಿಗೆ ಲಾಲ್‌ಕೃಷ್ಣ ತೊಡಗಿಸಿಕೊಂಡಿದ್ದಾರೆ.
Advertisement
- ಉಮೇಶ್ ಮಣಿಕ್ಕಾರ