Advertisement

ಪುರಾತನ ವಿಷ್ಣು ವಿಗ್ರಹ ಪತ್ತೆ

04:55 PM Apr 22, 2021 | Team Udayavani |

ಗುಬ್ಬಿ: ಕೆರೆಯಲ್ಲಿ ಹೂಳು ತೆಗೆಯುವ ಸಂದರ್ಭ 600ವರ್ಷದ ಪುರಾತನ ಕಲ್ಲಿನ ವಿಷ್ಣು ವಿಗ್ರಹ ಪತ್ತೆಯಾದ ಘಟನೆತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ನಡೆದಿದೆ.ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ನಡೆದಿದ್ದು, 15ಅಡಿ ಆಳದಲ್ಲಿ ಜೆಸಿಬಿ ಯಂತ್ರಕ್ಕೆ ಸಿಲುಕಿದ ಈ ವಿಗ್ರಹವನ್ನುಗ್ರಾಮಸ್ಥರು ಸುರಕ್ಷಿತವಾಗಿ ಮೇಲೆತ್ತಿದರು.

Advertisement

ಕೂಡಲೇ ಪುರಾತತ್ವಇಲಾಖೆಗೆ ಮಾಹಿತಿ ರವಾನಿಸಲಾಗಿದ್ದು, ನಂತರ ಸ್ಥಳಕ್ಕೆ ಬಂದಇತಿಹಾಸ ತಜ್ಞ ಶ್ರೀನಿವಾಸ್‌ ಅಮ್ಮನಘಟ್ಟ ವಿಗ್ರಹವನ್ನುಪರಿಶೀಲನೆ ನಡೆಸಿದರು.ಹೊಯ್ಸಳರ ಕಾಲದ ಈ ವಿಗ್ರಹ ಸುಂದರವಿಷ್ಣುಮೂರ್ತಿಯಾಗಿದ್ದು, ವಿಗ್ರಹದ ಪ್ರಭಾವಳಿ ಸುತ್ತಲಿನಲ್ಲಿದ ಶವತಾರದ ಚಿತ್ರಗಳು ಮನಮೋಹಕವಾಗಿದೆ.

ಆದರೆ,ವಿಗ್ರಹದ ಎರಡು ಕೈಗಳು ತುಂಡರಿಸಲಾಗಿದೆ. ಅಂದಿನ ಶತ್ರುಗಳದಾಳಿಗೆ ಸಿಲುಕಿದ ವಿಷ್ಣುಮೂರ್ತಿಯ ಆಕರ್ಷಣಿಯ ಮುಖಸಹ ಭಿನ್ನವಾಗಿದೆ. ಹಾಗಲವಾಡಿ ಚನ್ನಕೇಶವ ಸ್ವಾಮಿದೇವಾಲಯಕ್ಕೆ ಸಂಬಂಧಿಸಿರಬಹುದು ಎಂದು ಪ್ರಾಥಮಿಕಮಾಹಿತಿ ತಿಳಿಸಿದ್ದಾರೆ.5 ಅಡಿಗಳ ಈ ಕಲ್ಲು ವಿಗ್ರಹ ಪೂಜೆ ಪುನಸ್ಕಾರಪಡೆದಿರಬಹುದು ಎನ್ನಲಾಗಿದೆ.

ಸ್ಥಳೀಯ ಹಿರಿಯರುಚನ್ನಕೇಶವಸ್ವಾಮಿ ದೇವಾಲಯ ಸಹ ಹೊಯ್ಸಳರಕಾಲದ್ದಾಗಿದೆ. ಈ ವಿಗ್ರಹ ಇಲ್ಲಿಗೆ ಸಂಬಂಧಿಸಿರಬಹುದು. ದಾಳಿನಡೆದ ಸಂದರ್ಭದಲ್ಲಿ ಕೆರೆಯ ಪಾಲಾಗಿದೆ. ಈಗ ವಿಗ್ರಹಸಿಕ್ಕಿರುವುದು ಗ್ರಾಮಕ್ಕೆ ಒಳಿತಾಗಲಿದೆ ಎಂದು ನಂಬಿದ್ದಾರೆ.ಸಧ್ಯಕ್ಕೆ ದೇವಾಲಯದಲ್ಲೇ ವಿಗ್ರಹ ಇಡಲಾಗಿದೆ. ಪುರಾತತ್ವಇಲಾಖೆ ಸ್ಪಷ್ಟ ಚಿತ್ರಣ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next