Advertisement

ಕಣ್ಮರೆಯಾದ ನಕಾಶೆ

05:07 AM Jun 29, 2020 | Lakshmi GovindaRaj |

ನಕಾಶೆ ಅಂದರೆ ಹಿಂದಿನಿಂದಲೂ ಮನುಷ್ಯನಿಗೆ ಅದೇನೋ ಕುತೂಹಲ. ಬಹಳ ಹಿಂದಿನ ಕಾಲದಲ್ಲಿ ಸಮುದ್ರಯಾನ ಮಾಡುತ್ತಿದ್ದ ನಾವಿಕರಿಗೆ ದಾರಿದೀಪವಾಗಿದ್ದು ಇದೇ ನಕಾಶೆ. ನಿಧಿ ಅವಿತಿಡಲು, ನಿಧಿ ಪತ್ತೆ ಹಚ್ಚಲು ಅಗತ್ಯವಾಗಿ ಬೇಕಾ ಗಿದ್ದೇ ನಕಾಶೆ. ರಾಜ್ಯ- ದೇಶ ಗಳ ಗಡಿ, ವ್ಯಾಪ್ತಿ, ವಿಸ್ತಾರವೆಲ್ಲವನ್ನೂ ನಕಾಶೆಗಳು ತಿಳಿಸುತ್ತಿದ್ದವು. ಇದೀಗ, ಗೂಗಲ್‌ ಮ್ಯಾಪು, ಸ್ಯಾಟಲೆ„ಟ್‌ ನ್ಯಾವಿ  ಗೇಷನ್‌ ಮತ್ತಿತರೆ ತಂತ್ರಜ್ಞಾನಗಳು ನಕಾಶೆಯ ಸ್ಥಾನವನ್ನು ತುಂಬಿವೆ.

Advertisement

ಹಿಂದೆಲ್ಲಾ  ನಗರಗಳ ನಕಾಶೆಯನ್ನು ಬಸ್‌ ಸ್ಟಾಂಡು, ಪುಸ್ತಕ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪಾಕೆಟ್‌ ನಲ್ಲಿ ಇಡಬಹುದಾಗಿದ್ದ ಆ ಕಾಗದದ ನಕಾಶೆಯನ್ನು ಬಿಡಿಸಿದರೆ, ನಗ ರದ ಚಿತ್ರಣ ಕಣ್ಮುಂದೆ ತೆರೆದು ಕೊಳ್ಳುತ್ತಿತ್ತು. ಈಗ, ಸ್ಮಾರ್ಟ್‌ ಫೋನಿನಲ್ಲಿ ಪ್ರಪಂಚದ ಯಾವುದೇ  ಮೂಲೆಯನ್ನೂ ಕ್ಷಣ ಮಾತ್ರದಲ್ಲಿ ವೀಕ್ಷಿಸಬಹುದು. ಅಲ್ಲಿನ ಸರ್ಚ್‌ ಬಾಕ್ಸ್‌ ನಲ್ಲಿ ಸ್ಥಳದ ಹೆಸರನ್ನು ಟೆ„ಪ್‌ ಮಾಡಿದರೆ ಸಾಕು;

ನಕಾಶೆ ಝೂಮ್‌ ಇನ್‌ ಆಗಿ ಆ ಸ್ಥಳದ ಚಿತ್ರ  ಬಳಕೆದಾರನ ಕಣ್ಮುಂದೆ  ಇರುತ್ತದೆ. ಅದರಲ್ಲಿ ದಾರಿ ಮಾತ್ರವಲ್ಲ, ಮನೆಗಳು, ಅಂಗಡಿ ಮಳಿಗೆಗಳು, ಪ್ರವಾಸಿ ತಾಣ ಗಳು, ರೈಲು-ಬಸ್‌ ವೇಳಾಪಟ್ಟಿ ಹೀಗೆ ಎಲ್ಲವೂ ನಮೂದಾಗಿರು ತ್ತದೆ. ಆದರೂ, ಕಾಗದದ ನಕಾಶೆ ಬಿಡಿಸಿದಾಗ ಸಿಗುತ್ತಿದ್ದ ಖುಷಿ ಡಿಜಿಟಲ್‌ ನಕಾಶೆ  ನೋಡಿದಾಗ ಸಿಗದು.

Advertisement

Udayavani is now on Telegram. Click here to join our channel and stay updated with the latest news.

Next