Advertisement

ಅನುಮತಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು

12:16 PM May 04, 2020 | Suhan S |

ಬೆಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ಸಿಲುಕಿ ಹಾಕಿಕೊಂಡ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ನೆಂಟರ ಮನೆಗೆ ಬಂದ ಕುಟುಂಬದವರು ತವರಿಗೆ ಮರಳಲು ರಾಜ್ಯ ಸರ್ಕಾರ ಮಾಡಿಕೊಟ್ಟ ಅವಕಾಶ ಅನುಕೂಲಕ್ಕಿಂತ ಅನಾನುಕೂಲವೇ ಆಗುತ್ತಿದೆ. ಸರ್ಕಾರದ ಉದ್ದೇಶ ಒಳ್ಳೆದಾದರೂ ಸೂಕ್ತ ಪೂರ್ವ ತಯಾರಿ ಇಲ್ಲದ ಕಾರಣ ಆಡಳಿತ ವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ. ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತದ ನಿಯಮಾವಳಿಗಳೂ ಸಹ ಈ ವಿಚಾರದಲ್ಲಿ ಸ್ಪಷ್ಟ ತೆ ಇಲ್ಲದೆ ಸಾರ್ವಜನಿಕರಲ್ಲಿ ತಲೆಬಿಸಿ ಉಂಟುಮಾಡಿದೆ.

Advertisement

ಯಾವ ಮಾರ್ಗಸೂಚಿ ಪಾಲನೆ, ಯಾವುದರ ಪ್ರಕಾರ ನಡೆಯಬೇಕು ಎಂಬುದು ನಿಖರತೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು, ಪ್ರವಾಸಿಗರಿಗೆ, ತುರ್ತು ಕಾರಣ ದಿಂದ ಹೊರ ಊರುಗಳಿಗೆ ಹೋಗಬೇಕಾದವರಿಗೆ ಪಾಸ್‌ ವ್ಯವಸ್ಥೆ ಸಹ ಕಠಿಣವಾಗಿ ಪರಿಣಮಿಸಿದೆ. ಆನ್‌ ಲೈನ್‌ ವ್ಯವಸ್ಥೆ ಕಲ್ಪಿಸಿದ್ದರೂ ಪ್ರಕ್ರಿಯೆ ವಿಳಂಬವಾಗುತ್ತಿದೆ. ತಕ್ಷಣ ಅನುಮತಿ ಸಿಗದೆ ಕಾಯುವಂತಾಗಿದೆ. ಇದರಿಂದ ಸರ್ಕಾರದ ಮೂಲ ಉದ್ದೇಶವೂ ಈಡೇರಿದಂತಾಗಿಲ್ಲ. ಖಾಸಗಿ ಬಸ್‌ ಹಾಗೂ ಟ್ಯಾಕ್ಸಿಗೆ ಅವಕಾಶ ಇದೆಯೇ ಇಲ್ಲವೇ ಎಂಬ ಬಗ್ಗೆ ಖಚಿತತೆ ಇಲ್ಲದೆ, ಅನುಮತಿ ಕೊಡುವ ಬಗ್ಗೆ ಯೂ ಸ್ಪಷ್ಟತೆ ಇಲ್ಲದ ಕಾರಣ ಈ ರೀತಿಯ ಸಮಸ್ಯೆಗೆ ದಾರಿಯಾಗಿದೆ. ಅಂತರ ರಾಜ್ಯ ಕಾರ್ಮಿಕರು ಸೂಕ್ತ ವ್ಯವಸ್ಥೆ ಇಲ್ಲದೆ ಅದರ ಮಾಹಿತಿಯೂ ಸಿಗದೆ, ಸಿಟಿ, ಯಶವಂತಪುರ ಕೆಆರ್‌ ಪುರ, ಕಂಟೋನ್ಮೆಂಟ್‌ ರೈಲು ನಿಲ್ದಾಣ, ಮೆಜೆಸ್ಟಿಕ್‌ ನಿಲ್ದಾಣಗಳ ಬಂದು ಕಾಯುವಂತಾಗಿದೆ.

ಪ್ರವಾಸಿಗರು ತವರಿಗೆ ಮರಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಸಾರಿಗೆ ವ್ಯವಸ್ಥೆ ಸಂಬಂಧ ಸ್ವಲ್ಪ ಗೊಂದಲವಿದೆ. ಸಿಎಂ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.   ಲಕ್ಷ್ಮಣ ಸವದಿ. ಸಾರಿಗೆ ಸಚಿವ

 

-ಎಸ್‌. ಲಕ್ಷ್ಮಿನಾರಾಯಣ

Advertisement
Advertisement

Udayavani is now on Telegram. Click here to join our channel and stay updated with the latest news.

Next