Advertisement

ರಾತ್ರಿಯೂ ಹಗಲಾಗುತ್ತಿದೆ!

06:15 AM Nov 24, 2017 | Team Udayavani |

ವಾಷಿಂಗ್ಟನ್‌: ಹಗಲು ಮತ್ತು ರಾತ್ರಿಯ ಮಧ್ಯೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ರಾತ್ರಿ ಅವಧಿ ಕ್ಷೀಣಿಸುತ್ತಿದ್ದರೆ, ಹಗಲಿನ ಅವಧಿ ವಿಸ್ತರಿಸುತ್ತಿದೆ. ಇದರಿಂದಾಗಿ ಜನರು, ಪಶು ಪಕ್ಷಿಗಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದೆ ಎಂದು ಜರ್ಮನಿಯ ಭೂವಿಜ್ಞಾನ ಸಂಶೋಧನೆ ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

Advertisement

2012 ರಿಂದ 2016ರ ಅವಧಿಯಲ್ಲಿ ವಿವಿಧ ಭೂಭಾಗಗಳ ಚಿತ್ರಣವನ್ನು ಸೆಟಲೈಟ್‌ಗಳಿಂದ ಸಂಗ್ರಹಿಸಿ ವಿಶ್ಲೇಷಿಸಲಾಗಿದ್ದು, ಏಷ್ಯಾ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಈ ಅವಧಿಯಲ್ಲಿ ರಾತ್ರಿ ದೀಪಗಳು ಹೆಚ್ಚಾಗಿವೆ. ಈ ಭಾಗದ ಭೂಮಿ ಹೆಚ್ಚಿನ ಪ್ರಮಾಣದಲ್ಲಿ ರಾತ್ರಿಯೂ ಪ್ರಕಾಶಮಾನವಾಗಿರುತ್ತದೆ ಎಂದು ವರದಿ ಮಂಡಿಸಿದೆ. ಪ್ರತಿ ವರ್ಷ ಭೂಮಿಯ ಮೇಲೆ ರಾತ್ರಿ ವೇಳೆ ಕೃತಕ ಬೆಳಕಿನ ಪ್ರಮಾಣ ಶೇ.2.2ರಷ್ಟು ಏರಿಕೆಯಾಗುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಇನ್ನೊಂದೆಡೆ ಎಲ್‌ಇಡಿ ಬಳಕೆ ಹೆಚ್ಚುತ್ತಿರುವಂತೆಯೇ ಬೆಳಕಿನ ಪ್ರಖರತೆ ಜಾಸ್ತಿಯಾ ಗಿದೆ. ಹಳೆಯ ವಿಧಾನದ ಬಲ್ಬ್ಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿರುವ ಎಲ್‌ಇಡಿಗಳನ್ನು ನಗರಗಳಲ್ಲಿ ಬಳಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 100 ವರ್ಷಗಳ ಹಿಂದಿನಿಂದಲೇ ರಾತ್ರಿ ದೀಪ ಬೆಳಗುವ ವಿಧಾನ ಚಾಲ್ತಿಗೆ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಭೂಮಿಯ ಮೇಲೆ ವಾಸಿಸುತ್ತಿರುವ ಜೀವಿಗಳಿಗೆ ಇದು ಹೊಸ ರೀತಿಯ ಒತ್ತಡವಾಗಿದ್ದು, ಮನುಷ್ಯನನ್ನು ಹೊರತು ಪಡಿಸಿ ಇತರ ಜೀವಿಗಳು ಈ ಒತ್ತಡವನ್ನು ನಿರ್ವಹಿಸಲಾರವು. ಮನುಷ್ಯರಲ್ಲೂ ನಿದ್ರೆ ಕೊರತೆ ಮತ್ತು ಇತರ ಆರೋಗ್ಯ ಸಮಸ್ಯೆಯನ್ನು ಇದು ಹೊಂದಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next