Advertisement

ಭಕ್ತರಿಗೆ ಹತ್ತು ನಿಮಿಷ ಧ್ಯಾನಾಭ್ಯಾಸ 

07:40 AM Feb 19, 2019 | |

ತಿ.ನರಸೀಪುರ: ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರಿಗೆ ಧ್ಯಾನದ ಸವಿರುಚಿಯನ್ನು ಉಚಿತವಾಗಿ ಉಣಬಡಿಸಲಾಗುತ್ತಿದೆ. ಮನಃಶಾಂತಿ, ಮನಸಿನ ನಿಯಂತ್ರಣ, ಏಕಾಗ್ರತೆ, ತಾಳ್ಮೆ ಹಾಗೂ ಮನಸೊಲ್ಲಾಸಕ್ಕೆ ಸ್ಫೂರ್ತಿನೀಡಬಲ್ಲ ಧ್ಯಾನವನ್ನು ತಂಡತಂಡವಾಗಿ ಹೇಳಿಕೊಡುವ ಕಾರ್ಯ ತ್ರಿವೇಣಿ ಸಂಗಮದ ಪುಣ್ಯ ಭೂಮಿಯಲ್ಲಿ ನಡೆಯುತ್ತಿದೆ. ಹಾರ್ಟ್‌ಫ‌ುಲ್‌ನೆಲ್‌ ಮೆಡಿಟೇಷನ್‌ ಸಂಘಟನೆಯವರು ಭಕ್ತರಿಗೆ ಉಚಿತವಾಗಿ ಹತ್ತು ನಿಮಿಷಗಳ ಧ್ಯಾನಾಭ್ಯಾಸ ಮಾಡಿಸುತ್ತಿದ್ದಾರೆ. 

Advertisement

ಐದರಿಂದ ಹತ್ತು ಭಕ್ತರ ಗುಂಪನ್ನು ಕುರ್ಚಿಯ ಮೇಲೆ ಕುರಿಸಿಕೊಡು, ಅವರಿಗೆ ಓರ್ವ ಮಾರ್ಗದರ್ಶಕನ ಮೂಲಕ ಧ್ಯಾನಾಭ್ಯಾಸ ಮಾಡಿಸಲಾಗುತ್ತಿದೆ. ಧ್ಯಾನ ಎಂದರೆನು? ಏಕೆ ನಿತ್ಯ ಮಾಡಬೇಕು? ಅದರಿಂದಾಗುವ ಉಪಯೋಗ ಏನು ಮತ್ತು ಅದನ್ನು ನಿರಂತರವಾಗಿ ಮಾಡುವುದು ಹೇಗೆ ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಧ್ಯಾನಾಭ್ಯಾಸ ಮಾಡಿಸಲಾಗುತ್ತದೆ.

ಕಾಲು ಬೆರಳು, ಪಾದ, ಕೈಬೆರಳು, ಅಂಗೈ, ಹೊಟ್ಟೆ, ಕಣ್ಣು, ತಲೆ ಸಹಿತವಾಗಿ ಸಂಪೂರ್ಣ ಶರೀರವನ್ನು ಬಾಹ್ಯ ಮತ್ತು ಅಂತರಿಕವಾಗಿ ನಿಯಂತ್ರಣ ಮಾಡುವುದು ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸುವುದು ಹೇಗೆ ಎಂಬುದನ್ನು ಸುಮಾರು ಹತ್ತು ನಿಮಿಷಗಳ ಧ್ಯಾನಾಭ್ಯಾಸದಲ್ಲಿ ಹೇಳಿ ಕೊಡಲಾಗುತ್ತದೆ. ಇದನ್ನು ನಿತ್ಯ ಮನೆಯಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಅಭ್ಯಾಸ ಮಾಡಬಹುದು ಎಂದು ಆಯೋಜಕರು ತಿಳಿಸಿದರು.

ಮೂರು ದಿನವೂ ಧ್ಯಾನಾಭ್ಯಾಸ ಮಾಡಿಸುತ್ತೇವೆ. ಕುಂಭಮೇಳಕ್ಕೆ ಬಂದಿರುವ ಸಾವಿರಾರು ಭಕ್ತರು ಇದರ ಪ್ರಯೋಜನ ಪಡೆದಿದ್ದಾರೆ. ನಿರ್ದಿಷ್ಟ ಸಮಯದಲ್ಲೇ ಧ್ಯಾನ ಮಾಡಬೇಕೆಂದೇನೂ ನಿಯಮ ಇಲ್ಲ. ಬಿಡುವಿನ ಸಮಯದಲ್ಲಿ ದಿನಕ್ಕೆ ಎಷ್ಟು ಬಾರಿ ಬೇಕಾದರೂ ಧ್ಯಾನ ಮಾಡಬಹುದು. ಉಚಿತ ಧ್ಯಾನ ಶಿಬಿರದಲ್ಲಿ ಧ್ಯಾನವನ್ನು ಮಾಡುವುದು ಹೇಗೆ ಎಂಬುದನ್ನಷ್ಟೇ ಹೇಳಿ ಕೊಡುತ್ತೇವೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ವ್ಯಕ್ತಿಯ ಜೀವ ಶೈಲಿಯ ಮೇಲೆ ಅವಲಂಭಿಸಿರುತ್ತದೆ ಎಂದು ವಿವರ ನೀಡಿದರು.

ಕಾಲೇಜು ವಿದ್ಯಾರ್ಥಿಗಳು,  ಶಿಕ್ಷಕ ಪ್ರಾಧ್ಯಾಪಕರು, ಮಕ್ಕಳು, ಗೃಹಿಣಿಯರು, ಪೊಲೀಸ್‌ ಹಾಗೂ ಸಂಚಾರ ಪೊಲೀಸರು, ರೈತರು, ಸ್ವಾಮೀಜಿಗಳು ಉಚಿತ ಧ್ಯಾನದ ಪ್ರಯೋಜನ ಪಡೆದರು. ಹತ್ತು ನಿಮಿಷ ಧ್ಯಾನಾಭ್ಯಾಸ ಮಾಡಿದ ನಂತರ ಎರಡನೇ ಭಾರಿ ಮಾಡಬೇಕು ಎಂದೆನಿಸಿದರು ಪುನಃ ಧ್ಯಾನಾಭ್ಯಾಸಕ್ಕೆ ಅವಕಾಶ ಇದೆ. ಬಾಹ್ಯ ಪ್ರಪಂಚದಲ್ಲಿ ಎಷ್ಟೇ ಗದ್ದಲವಿದ್ದರೂ ಮನಸು ನಿಯಂತ್ರಿಸಿಕೊಳ್ಳಲು ಸಾಧ್ಯವಾದರೆ, ಅದೇ ಧ್ಯಾನದ ಶಕ್ತಿ. ನಮ್ಮೆಲ್ಲ ಕಷ್ಟಕ್ಕೂ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳಬಲ್ಲ ಮನೋಬಲ ಹೆಚ್ಚುತ್ತದೆ ಎಂದು ಆಯೋಜಕರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next