Advertisement

ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದವನ ಸೆರೆ

11:59 AM Jun 09, 2018 | |

ಬೆಂಗಳೂರು: ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ವಂಚಿಸಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಫ್ರಾನ್‌ ಪಾಷಾ(30) ಬಂಧಿತ.

Advertisement

ರೆಸಿಡೆನ್ಸಿ ರಸ್ತೆಯಲ್ಲಿ ಎಸ್‌ಒಎಸ್‌ ಹೆಸರಿನ ಕಚೇರಿ ಹೊಂದಿದ್ದ ಇಫ್ರಾನ್‌ ಪಾಷಾ, ಟೆಲಿಕಾಲರ್‌ಗಳು ಬೇಕಾಗಿದ್ದಾರೆ ಎಂದು ಜಾಹಿರಾತುಗಳನ್ನು ನೀಡುತ್ತಿದ್ದ. ಜತೆಗೆ ಬೇರೆ ಬೇರೆ ವೆಬ್‌ಸೈಟ್‌ಗಳಲ್ಲಿ ಉದ್ಯೋಗ ಹುಡುಕಾಟ ನಡೆಸುತ್ತಿದ್ದ ಆûಾಂಕ್ಷಿಗಳಿಗೆ ಕರೆ ಮಾಡುತ್ತಿದ್ದ ಇಫ್ರಾನ್‌,

ಈ ಪೈಕಿ ಕೆಲವರಿಗೆ ಕರೆ ಮಾಡಿ ದೊಡ್ಡ ಮೊತ್ತದ ಸಂಬಳದ ಉದ್ಯೋಗ ಕೊಡಿಸುವುದಾಗಿ ಹೇಳುತ್ತಿದ್ದ. ಬಳಿಕ ಇದಕ್ಕೆ ಪ್ರತಿಫ‌ಲವಾಗಿ ಕಮಿಷನ್‌ ಕೊಡುವಂತೆ ಸೂಚಿಸುತ್ತಿದ್ದ. ಮುಂಗಡವಾಗಿ ಕೆಲವರಿಂದ ಸಾವಿರಾರ ರೂ. ಹಣ ಪಡೆದುಕೊಂಡಿದ್ದಾನೆ. ಇದೇ ರೀತಿ 200-300 ಮಂದಿ ಜನರಿಗೆ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಫ್ರಾನ್‌ ವಿರುದ್ಧ ಈ ಹಿಂದೆ ಕೋರಮಂಗರ ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿದ್ದರು. ನಕಲಿ ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ವಂಚಿಸಿದ ಆರೋಪದ ಮೇಲೆ 2017ರ ಅ.19ರಂದು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next