Advertisement

ಮರಗಳ ಹನನ: ಗಂಧದಗುಡಿ ಫೌಂಡೇಶನ್‌ನಿಂದ ಧರಣಿ

09:45 PM Jun 11, 2019 | Team Udayavani |

ಮೈಸೂರು: ಕೊಡಗಿನಲ್ಲಿ ರೆಸಾರ್ಟ್‌ ನಿರ್ಮಾಣ ಮಾಡಲು 800 ಮರಗಳನ್ನು ಕಡಿದಿರುವುದನ್ನು ವಿರೋಧಿಸಿ ಗಂಧದಗುಡಿ ಫೌಂಡೇಷನ್‌ ಪ್ರತಿಭಟನೆ ನಡೆಸಿತು.

Advertisement

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಜಮಾವಣೆಗೊಂಡ ಗಂಧದಗುಡಿ ಫೌಂಡೇಷನ್‌ ಸ್ವಯಂ ಸೇವಕರು ಪರಿಸರ, ಅರಣ್ಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ, ಕೊಡಗಿನಲ್ಲಿ ಆಂಧ್ರ ಮೂಲದ ಉದ್ಯಮಿಯೊಬ್ಬರು ರೆಸಾರ್ಟ್‌ ನಿರ್ಮಾಣ ಮಾಡುವ ಸಲುವಾಗಿ 800 ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿ ಉದ್ಯಮಿ, ಕೊಡಗು ಜಿಲ್ಲಾಡಳಿ ಹಾಗೂ ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮರಗಳನ್ನು ಕಡಿದಿರುವುದರಿಂದ ಅರಣ್ಯಕ್ಕೆ ಕುತ್ತುಂಟಾಗಿದ್ದು, ಅಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳು ಜೀವಿಸಲು ತೊಂದರೆಯಾಗಿದೆ. ಉದ್ಯಮಿ ಮರಗಳನ್ನು ಕಡಿದಿರುವ ಸ್ಥಳದಲ್ಲಿ ಹಸಿರು ನ್ಯಾಯಾಧಿಕರಣದ ಆದೇಶದ ಪ್ರಕಾರ ಸಸಿಗಳನ್ನು ನೆಡಬೇಕು ಎಂದು ಫೌಂಡೇಷನ್‌ನ ಸದಾ ಅರಸ್‌ ಒತ್ತಾಯಿಸಿದರು.

ಕಳೆದ ಬಾರಿ ಕೊಡಗಿನಲ್ಲಿ ಭೂಕುಸಿತ ಮತ್ತು ಅತಿ ಹೆಚ್ಚು ಮಳೆ ಸುರಿದು ಸಾಕಷ್ಟು ಹಾನಿಯಾಗಿದೆ. ಹೀಗಿದ್ದರೂ ಅಲ್ಲಿನ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದೇ, ಅರಣ್ಯವನ್ನು ಕಡಿದು ರೆಸಾರ್ಟ್‌ ನಿರ್ಮಿಸಲು ಅನುಮತಿ ನೀಡಿರುವುದು ಕಾನೂನು ಉಲ್ಲಂಘನೆಯಾಗಿದೆ.

ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮತ್ತೆ ಆ ಸ್ಥಳದಲ್ಲಿ ಸಸಿ ನೆಡುವ ಮೂಲಕ ಅರಣ್ಯ ನಾಶವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮೋಹನ್‌ ಕುಮಾರ್‌, ಮನೋಹರ್‌, ವಿಜಯ್‌ಗೌಡ, ಮಹೇಶ್‌, ಶ್ರೀನಿವಾಸ್‌, ರಂಜಿತ್‌, ಯಶ್ವಂತ್‌ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next