Advertisement

ಮುದ್ರಾಧಾರಣೆಯಿಂದ ಜನ್ಮಾಂತರದ ಪಾಪಕರ್ಮ ನಾಶ : ಸುಬ್ರಹ್ಮಣ್ಯ ಶ್ರೀ

03:45 AM Jul 06, 2017 | |

ಬೆಳ್ತಂಗಡಿ: ಆಷಾಢ ಶುದ್ಧ ಏಕಾದಶಿ ಧಾರ್ಮಿಕವಾಗಿ ವಿಶೇಷ ಮಹತ್ವದ ದಿನ. ಹರಿದಿನವೆಂದೇ ಪ್ರತೀತಿಯಿರುವ ಅಂದು ಭಗವಂತ ಯೋಗನಿದ್ರೆ ಪ್ರಾರಂಭಿಸಿ ಉತ್ಥಾನ ದ್ವಾದಶಿಯವರೆಗೆ 4 ತಿಂಗಳ ಕಾಲ ಆತನ ಪೂಜೆ, ಆರಾಧನೆಗೆ ವಿಶೇಷ ಪ್ರಾಧಾನ್ಯ ಇದೆ. ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳುವುದರಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ, ಸಕಲ ಸೌಭಾಗ್ಯಗಳನ್ನು ಪಡೆದು ಅಂತ್ಯದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಹೇಳಿದರು.

Advertisement

ಅವರು ಆಷಾಢ ಪ್ರಥಮ ಏಕಾದಶಿ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರ  ನೇತೃತ್ವದಲ್ಲಿ ನಡೆದ ತಪ್ತಮುದ್ರಾಧಾರಣೆ ಕಾರ್ಯಕ್ರಮದಲ್ಲಿಭಕ್ತಾದಿಗಳಿಗೆ ಮುದ್ರಾಧಾರಣೆ ಮಾಡಿ ದಿನದ ಮಹತ್ವದ ಕುರಿತು ತಿಳಿಸಿದರು. ಬೆಳ್ತಂಗಡಿ ತಾಲೂಕಿನ ನಾನಾ ಭಾಗಗಳಿಂದ ಬಂದ ನೂರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಶ್ರೀಗಳು ಮುದ್ರಾಧಾರಣೆ ಮಾಡಿದರು.

ವೇ|ಮೂ| ಶ್ರೀಪತಿ ಎಳಚಿತ್ತಾಯರು ಸುದರ್ಶನ ಹೋಮ, ಧಾರ್ಮಿಕ ವಿಧಿ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೆ„ಪಾಡಿತ್ತಾಯ, ಉಪಾಧ್ಯಕ್ಷ ನಾಗೇಶ ರಾವ್‌, ಕಾರ್ಯದರ್ಶಿ ರಾಜಪ್ರಸಾದ್‌ ಪೋಳ್ನಾಯ, ಧರ್ಮಸ್ಥಳ ವಲಯಾಧ್ಯಕ್ಷ ಗಿರೀಶ್‌ ಕುದ್ರೆಂತ್ತಾಯ, ಪರಾರಿ ವೆಂಕಟ್ರಮಣ ಹೆಬ್ಟಾರ್‌ ಭಕ್ತರ ಮುದ್ರಾಧಾರಣೆಗೆ ವ್ಯವಸ್ಥೆ ಕಲ್ಪಿಸಿದರು.

ಜನ್ಮಾಂತರದ ಪಾಪಕರ್ಮ ನಾಶ
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ತಮ್ಮ ಹೇಮಲಂಬಿ ಸಂವತ್ಸರದ 21ನೇ ವರ್ಷದ ಚಾತುರ್ಮಾಸ್ಯ ವೃತವನ್ನು ಸುಬ್ರಹ್ಮಣ್ಯ ಸ್ವ ಮಠದಲ್ಲಿ ಜು.16ರಿಂದ ಸೆ. 7ರವರೆಗೆ ನಡೆಸಲಿದ್ದು  ಈ ಸಂದರ್ಭದಲ್ಲಿ ಪಾಠ, ಪ್ರವಚನ, ಹರಿಕಥೆ, ತಾಳಮದ್ದಳೆ, ಸಂಗೀತ, ನೃತ್ಯ, ಭರತನಾಟ್ಯ, ಚರ್ಚಾಗೋಷ್ಟಿ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next