Advertisement

ಜಂಕ್‌ಫ‌ುಡ್‌ನಿಂದ ಮಾನವ ಸಂಕುಲ ನಿರ್ನಾಮ

12:17 PM Jul 30, 2018 | |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಸಂಪೂರ್ಣ ಬದಲಾಗಿದ್ದು, ಜಂಕ್‌ಫ‌ುಡ್‌ ಮಾನವ ಸಂಕುಲವನ್ನು ನಿರ್ನಾಮ ಮಾಡುತ್ತಿದೆ ಎಂದು ಲೇಖಕ ನಾ.ಸೋಮೇಶ್ವರ ತಿಳಿಸಿದ್ದಾರೆ.

Advertisement

ನವ ಕರ್ನಾಟಕ ಪ್ರಕಾಶನ ಹಾಗೂ ಇಜ್ಞಾನ ಟ್ರಸ್ಟ್‌ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ “ಕನ್ನಡ ನೆಲ-ಜಲ: ನಾಳಿನ ಅರಿವು’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಪೀಳಿಗೆಯ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿದೆ.

ಸಿರಿಧಾನ್ಯಗಳ ಜಾಗವನ್ನು ಜಂಕ್‌ಫ‌ುಡ್‌ ಆವರಿಸಿದ್ದು, ಜಂಕ್‌ಫ‌ುಡ್‌ಗಳಲ್ಲಿ ಯಾವ ಪೌಷ್ಠಿಕಾಂಶವಾಗಲಿ, ನಾರಿನ ಅಂಶವಾಗಲಿ ಇರುವುದಿಲ್ಲ. ಆದರೂ ಜನ ಅದಕ್ಕೆ ಮುಗಿಬಿದ್ದು ಸೇವಿಸುತ್ತಿದ್ದಾರೆ. ಈ ಬದಲಾವಣೆಯಿಂದ ಮಾನವನ ಜೀವಿತಾವಧಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಸಾಕಷ್ಟು ಆಹಾರ ತಯಾರಿಕಾ ಕಂಪನಿಗಳು ವಿಷಪೂರಿತ ಜಂಕ್‌ಫ‌ುಡ್‌ಗಳನ್ನು ತಯಾರಿಸುತ್ತಿವೆ. ಇವುಗಳಿಂದ ಭಾರತೀಯ ಸಂಸ್ಕೃತಿಯ ಹಾಗೂ ಆಹಾರ ಪದ್ಧತಿ ನಿರ್ನಾಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಕಾರ್ಯಕಾರಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿ, ಕೆಲವು ದಶಕಗಳಿಂದ ಇಂಧನ ಮೂಲಗಳು ಕ್ಷೀಣವಾಗುತ್ತಿದ್ದು, ಬಳಕೆಯ ಪ್ರಮಾಣ ಮಾತ್ರ ಹೆಚ್ಚುತ್ತಿದೆ.

Advertisement

ಪ್ರಕೃತಿ ಹಾಗೂ ಮನುಷ್ಯರಿಗೆ ಮಾರಕವಾಗದ ಸುಸ್ಥಿರ ಮಾದರಿಯಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಮುಂದಾದರೆ ಗ್ರಾಮೀಣ ಸಮುದಾಯಕ್ಕೆ ಶುದ್ಧ ಇಂಧನ ಹಾಗೂ ಉದ್ಯೋಗಾವಕಾಶ ಒದಗಿಸಬಹುದು.

ಅಲ್ಲದೇ ಭೂಮಿಯನ್ನು ಜೈವಿಕ ಇಂಧನ ಉತ್ಪಾದನೆಗೆ ಬಳಸುವುದರಿಂದ ಸಣ್ಣ ಹಿಡುವಳಿದಾರರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಒಂದಷ್ಟು ಉತ್ಕೃಷ್ಟ ಸಂಶೋಧನೆಗಳಾಗಬೇಕು ಎಂದರು. ಪರಿಸರವಾದಿ ಎಚ್‌.ಎನ್‌.ಎ. ಪ್ರಸಾದ್‌ ಮಾತನಾಡಿದರು.

ಇಜ್ಞಾನ ಟ್ರಸ್ಟ್‌ ವತಿಯಿಂದ ಕಲಿಕೆಗೆ ಕೊಡುಗೆ ಯೋಜನೆಯ ಅಡಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಈ ವೇಳೆ ಲೇಖಕ ಟಿ.ಎಸ್‌.ಗೋಪಾಲ್‌ ಅವರ ಜ್ಞಾನಪೀಠಕ್ಕೆ  ಮೆರಗು ಕನ್ನಡದ ಬೆಡಗು ಸೇರಿದಂತೆ ಕೆಲವು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next