Advertisement
ಕಳಪೆ ಕಾಮಗಾರಿ ಬಗ್ಗೆ ತನಿಖೆ ಹಾದಿ ಹಿಡಿಯುವ ಮೊದಲು ಗ್ರಾ. ಪಂ., ಊರ ವರು ಅದೇ ಸ್ಥಳದಲ್ಲಿ ಇಲಾಖೆ ಹಾಗೂ ಗುತ್ತಿಗೆ ವಹಿಸಿದ್ದ ಕಂಟ್ರಾಕ್ಟ್ದಾರರಿಗೆ ಹೊಸ ಅಣೆಕಟ್ಟು ನಿರ್ಮಿಸುವಂತೆ ಆಗ್ರಹಿಸಿದರು. ಈ ಒತ್ತಡಕ್ಕೆ ಮಣಿದ ಇಲಾಖೆ ಮತ್ತು ಗುತ್ತಿಗೆದಾರರು ನಾಲ್ಕು ತಿಂಗಳಲ್ಲಿ ಹಿಂದಿನ ಅಣೆಕಟ್ಟಿಗಿಂತ 80 ಮೀಟರ್ ದೂರದಲ್ಲಿ ಹೊಸ ಅಣೆಕಟ್ಟನ್ನು ಕಟ್ಟಿದ್ದಾರೆ.
ಸಣ್ಣ ನೀರಾವರಿ ಇಲಾಖೆ ವತಿಯಿಂದ 2013-14ರಲ್ಲಿ 47 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಉಬರಡ್ಕ ಗ್ರಾ.ಪಂ.ನ ದೊಡ್ಡಡ್ಕ ಸಮೀಪದ ಕಂದಡ್ಕ ಹೊಳೆಗೆ ನಿರ್ಮಿಸಲಾಗಿತ್ತು. ಕಾಮಗಾರಿ ಸಂದರ್ಭವೇ ಗ್ರಾಮಸ್ಥರು ಕಳಪೆ ಕಾಮಗಾರಿಯ ಬಗ್ಗೆ ದೂರಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸಿರಲಿಲ್ಲ. 2015ರಲ್ಲಿ ಕಾಮಗಾರಿ ಪೂರ್ಣಗೊಂಡು, ಇಲಾಖೆಯು ಮರದ ಹಲಗೆ ಹಾಕಿ ನೀರು ಸಂಗ್ರಹಿಸಲು ಮುಂದಾಗಿತ್ತು. ಕಾಲು ಭಾಗವಷ್ಟೇ ನೀರು ತುಂಬಿತ್ತು. ಅಷ್ಟರಲ್ಲಿ ಮಳೆಯಾಗಿದ್ದರಿಂದ ಈ ಹಲಗೆ ಹಾಕುವ ಪ್ರಕ್ರಿಯೆ ಮುಂದೂಡಲಾಗಿತ್ತು. ಪುನಃ 2016ರ ನವೆಂಬರ್ 30ರಂದು ಮರದ ಹಲಗೆ ಇರಿಸಿ ನೀರು ನಿಲ್ಲಿಸಲು ಇಲಾಖೆ ನಿರ್ಧರಿಸಿತು. ಡಿಸೆಂಬರ್ 1ರಂದು ಅಪರಾಹ್ನ 3ರ ಸುಮಾರಿಗೆ ಅಣೆಕಟ್ಟಿನ ಮುಕ್ಕಾಲು ಭಾಗ ನೀರು ತುಂಬುತ್ತಿದ್ದಂತೆ ಪಿಲ್ಲರ್ ಕುಸಿದು ಅಡ್ಡ ಇರಿಸಿದ್ದ ಹಲಗೆಗಳು ಕೊಚ್ಚಿ ಹೋದವು. ಅಣೆಕಟ್ಟಿನ ಮೇಲೆ ಹಾಕಿದ್ದ ಸ್ಲಾಬ್ ಗಳೂ ಜೋತಾಡುವಂತಿದ್ದವು. ಈ ಕಾಮಗಾರಿ ಯನ್ನು ಗುತ್ತಿಗೆದಾರ ಶಶಿಧರ ಆಲೆಟ್ಟಿ ಅವರು ನಿರ್ವಹಿಸಿದ್ದರು. ತುರ್ತು ಅಗತ್ಯವಿತ್ತು
ಈ ಹಿಂದೆ ಪೆರಾಜೆಯಲ್ಲೊಂದು ಇದೇ ರೀತಿ ಅಣೆಕಟ್ಟು ನಾಶವಾಗಿತ್ತು. ಅದು ತನಿಖೆಯ ಹಾದಿ ಹಿಡಿದಿದ್ದರಿಂದ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಇಲಾಖೆ ತನಿಖೆ ವಿಳಂಬವಾಗುವು ದರಿಂದ ಹಾಗೂ ಗ್ರಾಮಕ್ಕೆ ತುರ್ತು ಅಗತ್ಯವಿರುವುದರಿಂದ ಇಲಾಖೆ ಮತ್ತು ಗುತ್ತಿಗೆದಾರರೇ ಪರ್ಯಾಯ ಅಣೆಕಟ್ಟು ನಿರ್ಮಿಸಿ ಕೊಡುವಂತೆ ಒತ್ತಾಯಿಸಿದ್ದೆವು. ಅದರಂತೆ ಶೀಘ್ರವೇ ಪುನರ್ ನಿರ್ಮಾಣಗೊಂಡಿದೆ. ಸದ್ಯ ಹೊಳೆ ಯಲ್ಲಿ ನೀರಿನ ಒರತೆ ಇಲ್ಲದಿದ್ದುದರಿಂದ ನೀರು ನಿಲ್ಲಿಸುವ ಪ್ರಯತ್ನವಾಗಿಲ್ಲ.
ಹರೀಶ್, ಉಬರಡ್ಕ, ಗ್ರಾ.ಪಂ. ಅಧ್ಯಕ್ಷರು.
Related Articles
Advertisement