Advertisement

ಪ್ರಜಾಪ್ರಭುತ್ವದ ಗಟ್ಟಿತನ ಕುಸಿತ

12:52 PM May 19, 2018 | |

ಮೈಸೂರು: ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ಇದರ ಪರಿಣಾಮ ದಿನದಿಂದ ದಿನಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಇಲ್ಲದಂತಾಗಿ, ಪ್ರಜಾಪ್ರಭುತ್ವದ ಗಟ್ಟಿತನ ಕುಸಿಯುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ “ಭಾರತದಲ್ಲಿ ಪ್ರಜಾಪ್ರಭುತ್ವದಲ್ಲಿ ಉಳಿದಿರುವ ಅಂಶಗಳು’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಕಾರ್ಯಾಂಗ, ಶಾಸಕಾಂಗ ಸರಿಯಾಗಿ ಕೆಲಸ ಮಾಡದ ವೇಳೆ ನ್ಯಾಯಾಂಗ ಮಧ್ಯ ಪ್ರವೇಶಿಸುತ್ತದೆ. ಆದರೆ, ಇಂದು ನ್ಯಾಯಾಂಗದಲ್ಲಿರುವವರ ಮೇಲೆ ಭ್ರಷ್ಟಾಚಾರದ ಆರೋಪ,

ಅಪಾದನೆಗಳು ಕೇಳಿಬರುತ್ತಿದ್ದು, ಇದರಿಂದಾಗಿ ನ್ಯಾಯಾಂಗ ವ್ಯವಸ್ಥೆ ಮೇಲೆ ಜನರಿಗೆ ಇರುವ ನಂಬಿಕೆ ಕ್ಷೀಣಿಸುತ್ತಿದೆ. ದೇಶದ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗದ ಹಿಡಿತಕ್ಕೆ ಸಿಲುಕಿದ್ದು, ಇದರಿಂದಾಗಿ ಪ್ರಜಾಪ್ರಭುತ್ವದ ಗಟ್ಟಿತನವೂ ಕಡಿಮೆಯಾಗುತ್ತಿದೆ. ಸರ್ವೋತ್ಛ ನ್ಯಾಯಾಲಯ ಎಂಬುದು ದೇಶದ ಸಂವಿಧಾನವನ್ನು ಕಾಯುವ ಕಾವಲು ನಾಯಿಯಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ನ್ಯಾಯಾಂಗದ ಮೇಲೆ ನಂಬಿಕೆ ಕ್ಷೀಣ: ನ್ಯಾಯಾಂಗ ವ್ಯವಸ್ಥೆಯಲ್ಲಿ ಅರ್ಹತೆ, ನಡತೆ ಹಾಗೂ ವ್ಯಕ್ತಿತ್ವದ ಮಾನದಂಡದ ಆಧಾರದಲ್ಲಿ ನ್ಯಾಯಮೂರ್ತಿಗಳ ನೇಮಕವಾಗಬೇಕಿದೆ. ಇದರ ಹೊರತು ಜಾತಿ, ಹಣದ ಆಧಾರ ಮೇಲೆ ನೇಮಕವಾದರೆ ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕೆಲಸವಾಗುವುದಿಲ್ಲ.

ಜತೆಗೆ ಇಂತಹ ಸಂದರ್ಭದಲ್ಲಿ ನ್ಯಾಯಾಂಗದ ಮೇಲಿನ ನಂಬಿಕೆ ಕುಸಿಯುತ್ತದೆ. ಇನ್ನು ಪ್ರಜಾಪ್ರ¸‌ುತ್ವದಲ್ಲಿ ಮುಖ್ಯ ಪಾತ್ರ ವಹಿಸಿರುವ ಮಾಧ್ಯಮಗಳಲ್ಲೂ ಇಂದು ಭ್ರಷ್ಟಾಚಾರದ ಹಸ್ತಕ್ಷೇಪವಿರುವುದು ರಾಜ್ಯದ ಈ ಸ್ಥಿತಿಗೆ ಕಾರಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

Advertisement

ಯುವಪೀಳಿಗೆ ಎಚ್ಚೆತ್ತುಕೊಳ್ಳಿ: ಹಣ ರಾಜಕಾರಣಿಗಳ ಶಿಫಾರಸಿನಿಂದ ಬರುವ ಅಧಿಕಾರಗಳಿಂದ ನಾವು ಪ್ರಜಾಪ್ರಭುತ್ವ ನಿರೀಕ್ಷಿಸುವುದು ಅಸಾಧ್ಯವಾಗಲಿದೆ. ಯಾವುದೇ ಅಧಿಕಾರಿಗಳು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಹಣ ಸಂಪಾದಿಸಬೇಕಿದೆ.

ಆದರೆ ಇವರನ್ನು ತಿದ್ದಬೇಕಾದ ಯುವಜನತೆ ತಮ್ಮ ಜವಾಬ್ದಾರಿ ಮರೆತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದು, ಈ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಉಪನ್ಯಾಸ ಕಾರ್ಯಕ್ರಮದ ಬಳಿಕ ನ್ಯಾ.ಸಂತೋಷ್‌ ಹೆಗ್ಡೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಪ್ರಾಧ್ಯಾಪಕ ಡಾ.ಎಂ.ಕೆ.ರಮೇಶ್‌, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್‌, ಖಜಾಂಚಿ ಎಸ್‌.ಎನ್‌. ಲಕ್ಷ್ಮೀನಾರಾಯಣ್‌, ಕಾನೂನು ಕಾಲೇಜಿನ ಪ್ರಾಂಶುಪಾಲ ಕೆ.ಬಿ.ವಾಸುದೇವ್‌ ಹಾಜರಿದ್ದರು.

ಬೇಸರ ಮೂಡಿಸಿದೆ: ರಾಜ್ಯದಲ್ಲಿ ಜೈಲಿನಿಂದ ಬಂದವರಿಗೆ ಶಾಲು, ಹಾರ ಹಾಕುವ ಮಂದಿಯ ನಡೆಯಿಂದ ಬೇಸರವಾಗಿದೆ. ಜೀವದಹಂಗು ತೊರೆದು ನನ್ನೊಂದಿಗೆ 10ಕ್ಕೂ ಹೆಚ್ಚು ಮಂದಿ ಕೆಲಸ ಮಾಡಿ, ನೀಡಿದ್ದ ವರದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಆದರೆ ಅದನ್ನು ಪ್ರಶ್ನಿಸಿ ಯಾರು ಹೋರಾಟ ನಡೆಸುವ ಕೆಲಸ ಮಾಡಲಿಲ್ಲ.

ಈ ವೇಳೆ ಮತ್ತೆ ಮತದಾರರೇ ಅಂತಹವರನ್ನು ಕರೆದ ಶಾಲು ಹೊದಿಸಿ ಮುಖ್ಯಮಂತ್ರಿ ಸ್ಥಾನ ನೀಡಿರುವುದು ನಿಜಕ್ಕೂ ಬೇಸರ ಮೂಡಿಸಿದೆ ಎಂದು ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದೀರಿ ಇಂದು ಅವರೇ ಮುಖ್ಯಮಂತ್ರಿಯಾಗಿದ್ದು, ಇದಕ್ಕೆ ಏನು ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next