Advertisement
ಪ್ರಸ್ತುತ ಮಂಗಳೂರಿಗೆ ಬರಲು ಮೂರು ರೈಲುಗಳನ್ನು ಬದಲಾಯಿಸಬೇಕಿದೆ. ಇದು ತ್ರಾಸದಾಯಕವಾಗಿದ್ದು, ಹಿರಿಯರು, ಗರ್ಭಿಣಿಯರು, ಮಕ್ಕಳು ಮತ್ತು ರೋಗಿಗಳಿಗೆ ಕಷ್ಟ ಕ ರದ ಸಂಗತಿ. ಮುಂಬಯಿ ರೈಲು ಯಾತ್ರಿಕ ಸಂಘದ ಅಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ ಸೋಜಾ, ಉಪಾಧ್ಯಕ್ಷ ರಜತ್ ಸುವರ್ಣ, ಕಾನೂನು ಸಲಹೆಗಾರ ಸಾೖಮನ್ ಪೀಟರ್ ಡಿ’ಕೋಸ್ಟಾ ಅವರ ನಿಯೋಗವು 2009ರಿಂದ ಅಂದು ರೈಲ್ವೇ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿಯಿಂದ ಇಂದಿನ ರೈಲ್ವೇ ಸಚಿವ ಸುರೇಶ್ ಪ್ರಭುವರೆಗೂ ಎಲ್ಲರನ್ನೂ ಭೇಟಿಯಾಗಿ, ಬಾಂದ್ರಾ ಟರ್ಮಿನಸ್‌ನಿಂದ- ವಸಾಯಿ ರೋಡ್- ಪನ್ವೇಲ್ ಮಾರ್ಗವಾಗಿ ಮಂಗಳೂರು ಜಂಕ್ಷನ್‌ಗೆ ರೈಲುಸಂಖ್ಯೆ 2ರಿಂದ ಪ್ರತಿದಿನದ “ಸೂಪರ್ ಫಾಸ್ಟ್’ ಕುಡ್ಲ ಎಕ್ಸ್‌ಪ್ರೆಸ್ ಆರಂಭಿಸಲು ಮನವಿ ಸಲ್ಲಿಸಿದ್ದರು. ಬಳಿಕ ಸಂಸದ ಗೋಪಾಲ ಶೆಟ್ಟಿ ಜತೆ ಪಶ್ಚಿಮ ರೈಲ್ವೇ ಜನರಲ್ ಮ್ಯಾನೇಜರ್‌ರನ್ನು ಭೇಟಿ ಮಾಡಿ ಸುಮಾರು 40 ಲಕ್ಷ ಕನ್ನಡಿಗರು ಎದುರಿಸುವ ಸಮಸ್ಯೆಯ ಬಗ್ಗೆ ತಿಳಿಸಲಾಗಿತ್ತು. ರೈಲ್ವೇ ಯಾತ್ರಿಕ ಸಂಘದ ನಿಯೋಗವು ಕೊಂಕಣ ರೈಲ್ವೇಯ ಜನರಲ್ ಮ್ಯಾನೇಜರ್ ಸಂಜಯ್ ಗುಪ್ತರನ್ನೂ ಭೇಟಿ ಮಾಡಿದ್ದರು.34.72 ಲಕ್ಷಕ್ಕಿಂತಲೂ ಹೆಚ್ಚು ಜನ
ಪ್ರಯಾಣಿಕರಿಗೆ ಸಂಬಂಧಿಸಿ ಮಾಹಿತಿ ಹಕ್ಕಿನಡಿ ಪ್ರಶ್ನೆ ಕೇಳಿದಾಗ, 2010-11ರ ಆರ್ಥಿಕ ವರ್ಷದಲ್ಲಿ ಪಶ್ಚಿಮ ಬಾಂದ್ರಾದಿಂದ ಡಹಾಣೂ ರೋಡ್ ಮಧ್ಯ 34.72 ಲಕ್ಷಕ್ಕಿಂತಲೂ ಹೆಚ್ಚು ಮಧ್ಯ ರೈಲ್ವೇಯ ಕಡೆ ಬಂದು ಮಂಗಳೂರಿಗೆ ತೆರಳಿದ್ದಾರೆ ಎಂಬ ಉತ್ತರ ದೊರಕಿತ್ತು. ಸಾಮಾನ್ಯವಾಗಿ ವಸಾಯಿಯಲ್ಲಿ ನೆಲೆಸುವವರು ಮೊದಲ ಲೋಕಲ್ ರೈಲಿನಲ್ಲಿ ಬಾಂದ್ರಾಕ್ಕೆ ತೆರಳಿ ಅಲ್ಲಿಂದ ಎರಡನೇ ಲೋಕಲ್ ರೈಲಿನಲ್ಲಿ ವಡಾಲಕ್ಕೆ ಪ್ರಯಾಣಿಸಿ, ಪುನಃ ರೈಲು ಬದಲಾಯಿಸಿ ಮೂರನೇ ಲೋಕಲ್ ರೈಲಿನಲ್ಲಿ ತಿಲಕ್‌ನಗರ ನಿಲ್ದಾಣಕ್ಕೆ ಬರುತ್ತಾರೆ. ಅಲ್ಲಿಂದ 10 ನಿಮಿಷ ನಡೆದು “ಲೋಕಮಾನ್ಯ ತಿಲಕ್ ಟರ್ಮಿನಸ್’ಗೆ ಹೋಗಬೇಕಿದೆ. ಬಳಿಕ “ಮತ್ಸÂಗಂಧಾ ಎಕ್ಸ್‌ಪ್ರೆಸ್’ ಹತ್ತಿ ಮಂಗಳೂರಿಗೆ ಬರಬೇಕು.
ಪ್ರಸ್ತುತ ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಿ ಕೊಂಡು ಹೆಚ್ಚು ರೈಲುಗಳನ್ನು ಓಡಿಸಬಹುದು ಎಂಬುದು ಪ್ರಯಾಣಿಕರ ಅಭಿಮತ. ಬಾಂದ್ರಾ ಟರ್ಮಿನಸ್‌ನಲ್ಲಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯನ್ವಯ, ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಪ್ರತಿ ಸೋಮವಾರ ಹಾಗೂ ಶುಕ್ರವಾರ ಸಂಜೆ 16.55ಕ್ಕೆ ಗರೀಬ್ ರಥ್ ಹೊರಡುತ್ತಿದ್ದು, ಇದೇ ರೈಲು ಸಂಜೆ 18.10ಕ್ಕೆ ಪನ್ವೇಲ್‌ನಿಂದ ಹೊರಟು ರಾತ್ರಿ 23.05ಕ್ಕೆ ರತ್ನಾಗಿರಿ ತಲುಪುತ್ತದೆ. ಬೆಳಗ್ಗೆ 2.25ಕ್ಕೆ ಮಡ್ಗಾಂವ್, 6.22ಕ್ಕೆ ಉಡುಪಿ ಹಾಗೂ 8.15ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವುದರಿಂದ ಉಳಿದ 5 ದಿನ ಪನ್ವೇಲ್- ಮಂಗಳೂರು ಮಧ್ಯದ ರೈಲು ವೇಳೆಯಲ್ಲಿ ಬೇರೆ ರೈಲುಗಳನ್ನು ಹಾಕಬಹುದು. ಆದರೆ, ಪಶ್ಚಿಮ ರೈಲ್ವೇ ಅಧಿಕಾರಿಗಳು ಮಾತ್ರ, ವಸಾಯ್ ರೋಡ್ ನಿಲ್ದಾಣದಲ್ಲಿ ಉತ್ತರ ಕಡೆಯಿಂದ ಕಳಚಿ ಇನ್ನೊಂದು ಟ್ರಾÂಕ್ ದಕ್ಷಿಣದ ಕಡೆಗೆ ಜೋಡಿಸಿ ಪÌನೇಲ್‌ಗೆ ತರಬೇಕು. ಇದಕ್ಕೆ 2 ಟ್ರಾÂಕ್ ಫ್ರೀ ಬೇಕಿದ್ದು, ಕೊಡಲು ಸಾಧ್ಯವಿಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ. ಬೇಸಗೆ ರಜೆ, ದೀಪಾವಳಿ ಮತ್ತು ಕ್ರಿಸ್ಮಸ್ ರಜೆಯ ವೇಳೆ 26 ವಿಶೇಷ ರೈಲುಗಳನ್ನು ಬಾಂದ್ರಾ ಟರ್ಮಿನಸ್-ವಸಾಯ್ ರೋಡ್ ಮುಖಾಂತರ ಪನ್ವೇಲ್, ಮಡ್ಗಾಂವ್‌ವರೆಗೆ ಸಂಚರಿಸುತ್ತದೆ. ಇತ್ತೀಚೆಗೆ ಇಂದೋರ್‌ನಿಂದ ವಸಾಯ್-ಪನ್ವೇಲ್ ಮೂಲಕ ಕೊಚ್ಚುವೇಲಿಗೆ ಹೊಸ ಶಾಶ್ವತ ರೈಲನ್ನು ಹಾಕಲಾಗಿದೆ. ಹಬ್ಬದ ದಿನಗಳಲ್ಲಿ ನಿಯೋಜಿಸುವ ರೈಲುಗಳನ್ನು ಪ್ರತಿ ದಿ ನ ಯಾಕೆ ನೀಡಬಾರದೆಂಬುದು ರೈಲು ಯಾತ್ರಿಕ ಸಂಘದ ಪ್ರಶ್ನೆ.
Related Articles
Advertisement
ಮುಂಬಯಿ -ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಇರುವ ವಾಸ್ತವಿಕ ದೂರ ಕೇವಲ 835 ಕಿ.ಮೀ. ಆಗಿದೆ. ಆದರೆ, ಕೊಂಕಣ ರೈಲ್ವೇ ಹಳಿಗಳನ್ನು ಹಾಕಲು ಆದ ವೆಚ್ಚವನ್ನು ಹಿಂಪಡೆಯಲು ರೈಲ್ವೇಯ ವಾಸ್ತವಿಕ ದೂರವನ್ನು ಶೇ. 40ದಷ್ಟು ಹಿಗ್ಗಿಸಿ ದರವನ್ನು ವಸೂಲಿ ಮಾಡುತ್ತಿದೆ. ಕೊಂಕಣ ರೈಲ್ವೇ ಮಾಡಿದ ವೆಚ್ಚವೆಲ್ಲವೂ 2005ರ ಮಾರ್ಚ್‌ನೊಳಗೆ ವಾಪಸು ಬಂದಿದೆ. ಆದರೂ ಶೇ. 140ರಷ್ಟು ಟಿಕೆಟ್ ದರ ವಿಧಿಸಲಾಗುತ್ತಿದೆ ಎಂದು ಉಡುಪಿ ರೈಲ್ವೇ ಯಾತ್ರಿಕರ ಸಂಘದ ಕಾರ್ಯದರ್ಶಿ ಜಾನ್ ರೆಬೆಲ್ಲೊ ಆಪಾದಿಸಿದ್ದಾರೆ.
ಪ್ರಧಾನಿ ಗಮನಕ್ಕೆ ತರುವ ಯೋಜನೆಬಾಂದ್ರಾ ಟರ್ಮಿನಸ್‌ನಿಂದ ವಸಾಯ್, ಪನ್ವೇಲ್ ಮೂಲಕ ರೈಲು ಹಾಕಲು ಸಾಧ್ಯವಿದ್ದರೂ 9 ವರ್ಷಗಳಿಂದ ರೈಲು ಯಾತ್ರಿಕ ಸಂಘದ ಬೇಡಿಕೆ ಈಡೇರಿಲ್ಲ. ಪಶ್ಚಿಮ ರೈಲ್ವೇ ವಿಭಾಗದಲ್ಲಿ ಕೇಳುವಾಗ ವಸಾಯ್‌ನಲ್ಲಿ ಎಂಜಿನ್ ಬದಲಾಯಿಸಲು ಹಳಿ ಇಲ್ಲ, ಬಾಂದ್ರಾ ಟರ್ಮಿನಸ್‌ನಲ್ಲಿ ರೈಲು ಹೊರಡಲು ಬೇಕಾದ ಸಮಯದ ಅವಧಿ ಹಾಗೂ ಪ್ಲ್ರಾಟ್‌ಫಾರಂ ಇಲ್ಲವೆಂದು ವಿವಿಧ ಕಾರಣ ನೀಡುತ್ತವೆ. ಈಗಾಗಲೇ ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನೀಡಲಾಗಿದ್ದರೂ ಪ್ರಯೋಜನ ದೊರಕಿಲ್ಲ. ನಿಯಮದಂತೆ ಸ್ಥಳೀಯ ಸಂಸದರ ಗಮನಕ್ಕೆ ತಂದು ಬಳಿಕ ಪ್ರಧಾನಿಯವರ ಗಮನಕ್ಕೆ ತರಲಾಗುವುದು.
-ಒಲಿವರ್ ಡಿಸೋಜಾ, ಕಾರ್ಯಕಾರಿ ಕಾರ್ಯದರ್ಶಿ, ರೈಲು ಯಾತ್ರಿಕರ ಸೇವಾ ಸಂಘ, ಬೊರವಿಲಿ, ಮುಂಬಯಿ – ಭರತ್‌ರಾಜ್ ಕಲ್ಲಡ್ಕ