Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ, ರಾಷ್ಟ್ರೀಯ ಉದ್ಯಾನವನದ 10 ಕಿ.ಮೀ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ಹಾಗೂ ರಸ್ತೆ ವಿಸ್ತರಣೆಯಂತಹ ಕಾರ್ಯಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಆದರೆ ಈ ನಿರ್ದೇಶನಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ.
ಯಾಗುತ್ತಿದೆ. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಯುನೈಟೆಡ್ ಬೆಂಗಳೂರು ಸಂಸ್ಥೆಯ ಸಂಚಾಲಕ ಸುರೇಶ್ ಮಾತನಾಡಿ, ಗಣಿಗಾರಿಕೆ ಅವಶೇಷಗಳನ್ನು ಕಂಪನಿಗಳು ಹಳ್ಳಕೊಳ್ಳಗಳಲ್ಲಿ ಎಸೆಯುತ್ತಿವೆ. ಸ್ಫೋಟಕ ಬಳಸುವುದರಿಂದ ವನ್ಯ ಜೀವಿಗಳ ಸಹಜ ಓಡಟಕ್ಕೂ ತೊಂದರೆ ಯಾಗಿದೆ.
ಬಫರ್ ಝೋನ್‌ನ ಸುತ್ತ ರುವ ಗ್ರಾಮಗಳಲ್ಲಿ ಕೃಷಿಗೂ ಗಣಿಕಾರಿಕೆ ತೊಡಕುಂಟು ಮಾಡುತ್ತಿದೆ. ಇದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಆದರೂ ಅಧಿಕಾರಿಗಳು ಏನೂ ನಡೆಯುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿದಾರೆ. ಈ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಕುರಿತಂತೆ ಚರ್ಚಿಸಲು ಸೆ.29ರಂದು ಬೆಳಗ್ಗೆ 10 ಗಂಟೆಗೆ ಇಂದಿರಾನಗರದ ಕ್ಲಬ್‌ನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.