Advertisement

ಗ್ರಾಪಂಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆಗ್ರಹ

10:41 AM Sep 11, 2019 | Team Udayavani |

ಬೆಳಗಾವಿ: ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಆಗುತ್ತಿರುವ ಅವ್ಯವಹಾರ, ಯೋಜನೆಗಳ ದುರುಪಯೋಗ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಿಷನ್‌ ಕ್ರಾಂತಿ ಸೇವಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಗ್ರಾಪಂಗಳಲ್ಲಿ ವಸತಿ, ಶೌಚಾಲಯ, ಕೃಷಿ ಹೊಂಡ, ದನದ ಶೆಡ್‌, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ದುರುಪಯೋಗ ಆಗುತ್ತಿದೆ. ಸವದತ್ತಿ ತಾಲೂಕಿ ಅಕ್ಕಿಸಾಗರ ಗ್ರಾಪಂ ಹಾಗೂ ಕೊಡ್ಲಿವಾಡ ಗ್ರಾಮದಲ್ಲಿ ಅನೇಕ ಯೋಜನೆಗಳು ದುರುಪಯೋಗ ಆಗಿವೆ. ನರೇಗಾ ಅಡಿ ಅರ್ಹರಿಗೆ ಸಿಗಬೇಕಾದ ವೇತನ ಮೊತ್ತ ಬೇರೆಯವರ ಪಾಲಾಗಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.

ಕೊಡ್ಲಿವಾಡ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಲೋಪದೋಷ, ಭ್ರಷ್ಟಾಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲಿ ಅವ್ಯವಹಾರ ನಡೆದು ವರ್ಷ ಕಳೆದರೂ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ತಪ್ಪಿತಸ್ಥರ ವಿಚಾರಣೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿಅಧ್ಯಕ್ಷ ಮಹಾದೇವ ಧರೆಣ್ಣವರ, ದೇವರಾಜ ಕಾಂಬಳೆ, ಸೋಮಶೇಖರ ಸಂಬಣ್ಣವರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next