Advertisement
ದೊಡ್ಡಕುದ್ರುವಿನಲ್ಲಿ ಸುಮಾರು 40 ಎಕ್ರೆ ಹಾಗೂ ಅಜ್ಜಿಗದ್ದೆ ಪ್ರದೇಶದಲ್ಲಿ 2 ಎಕ್ರೆಯಷ್ಟು ಕೃಷಿಭೂಮಿ ಇದೆ. ಇಲ್ಲಿ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ.
ಲಭ್ಯವಿರುವ ಅನುದಾನದಲ್ಲಿ ಗ್ರಾ.ಪಂ. ಎರಡು ಕಡೆಗಳಲ್ಲಿ ಮೂರ್‍ನಾಲ್ಕು ಬಾರಿ ಮರದ ಸೇತುವೆ ನಿರ್ಮಿಸಿದ್ದು, ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಶಾಶ್ವತ ಸೇತುವೆ ನಿರ್ಮಿ ಸುವಂತೆ ಗ್ರಾಮ ಸಭೆ, ಶಾಸಕರು ಮತ್ತು ಸಚಿವರಿಗೆ ಮನವಿ ಸಲ್ಲಿಸ ಲಾಗಿತ್ತು. ಯೋಜನ ಪಟ್ಟಿ ಸಿದ್ಧಪಡಿಸಿ ನಬಾರ್ಡ್‌ಗೆ ಪ್ರಸ್ತಾವನೆ ಯನ್ನೂ ಕಳುಹಿಸಲಾಗಿತ್ತು. ಆದರೆ ಇದುವರೆಗೆ ಪ್ರಯೋಜ ನವಾಗಿಲ್ಲ. ಆದಷ್ಟು ಶೀಘ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ ಎನ್ನುವುದು ಸ್ಥಳೀಯರ ಮನವಿಯಾಗಿದೆ.
Related Articles
ಹೊಳೆಯಲ್ಲಿ ಹೂಳು ತುಂಬಿರು ವುದರಿಂದ ಹಾಗೂ ಮರಗಳು ತುಂಡಾಗಿ ಬಿದ್ದಿರುವುದರಿಂದ ನೀರಿನ ಹರಿವಿಗೆ ಸಮಸ್ಯೆಯಾಗಿದ್ದು, ಈ ಬಾರಿ ನೆರೆಯ ಪ್ರಮಾಣ ಮತ್ತಷ್ಟು ಹೆಚ್ಚಿದೆ.
Advertisement
ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಹೊಳೆಯ ಹೂಳೆತ್ತುವ ಕಾಮಗಾರಿಯನ್ನು ಉದ್ಯೋಗ ಖಾತರಿ ಯೋಜನೆ ಮೂಲಕ ನಡೆಸಬಹುದು. ಆದರೆ ಸೇತುವೆಗೆ ಹೆಚ್ಚಿನ ಅನುದಾನ ಅಗತ್ಯ. ಹೀಗಾಗಿ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು.
– ಸುರೇಶ್, ಪಿಡಿಒ ಕೋಟ ಗ್ರಾ.ಪಂ. ಆತಂಕ ದೂರ ಮಾಡಿ
ಈ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸಲು ಸೇತುವೆ ಇಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿವೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಕೂಡಲೇ ಕ್ರಮ ಕೈಗೊಂಡು ರೈತರ ಆತಂಕ ದೂರಮಾಡಬೇಕಿದೆ.
-ಪಾರ್ವತಿ ಹಂದೆ, ಕೃಷಿಕರು.