ಕಾಂಗ್ರೆಸ್‌ನೊಂದಿಗೆ ತೀವ್ರ ಹತ್ತಿರದ ಸ್ಪರ್ಧೆ ನಡೆಸಿ ಬಿಜೆಪಿ ಗೆಲುವು ಸಾಧಿಸಿದೆಯಾದರೂ, ಅದಕ್ಕಿ ದಕ್ಕಿರುವ ಸ್ಥಾನಗಳ
Advertisement
ಆಧಾರದಲ್ಲಿ ಹೇಳುವುದಾದರೆ ಒಳಗೊಳಗೆ ಬಿಜೆಪಿಯ ನಾಯಕರಿಗೆ ಈ ಫಲಿ ತಾಂಶದಿಂದೇನೂ ಸಂತೋಷವಾಗಿರಲಿಕ್ಕಿಲ್ಲ. ಹಾಗೆ ನೋಡುವು ದಾದರೆ ಗುಜರಾತ್ ಪ್ರಧಾನಿ ಮೋದಿಯವರ ತವರು ರಾಜ್ಯವಾಗಿರುವುದರಿಂದ ಮತ್ತು ಉತ್ತರಪ್ರದೇಶ-ಉತ್ತರಾಖಂಡ ವಿಧಾನಸಭಾ ಚುನಾವಣೆಗಳ ಅದ್ಭುತ ಗೆಲುವಿನ 9 ತಿಂಗಳ ನಂತರ ಗುಜರಾತ್‌ನ ವಿಧಾನಸಭಾ ಚುನಾವಣೆಗಳು ನಡೆದಿರುವು ದರಿಂದ, ಬಿಜೆಪಿ ಉತ್ತಮ ಪ್ರದರ್ಶನ ನೀಡಬೇಕಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಎಲ್ಲಾ 26 ಸ್ಥಾನಗಳನ್ನೂ ವಶಪಡಿಸಿಕೊಳ್ಳಲು ಸಫಲವಾಗಿತ್ತು. ಆ ಫಲಿತಾಂಶಕ್ಕೂ ಈಗಿನ ಪ್ರದರ್ಶನಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
Related Articles
Advertisement
ಗುಜರಾತ್‌ನ ಜನಸಂಖ್ಯೆಯಲ್ಲಿ 12.5 ಪ್ರತಿಶತದಷ್ಟಿರುವ ಪಾಟೀದಾರರದ್ದು ರಾಜಕೀಯ, ಶಿಕ್ಷಣ, ವ್ಯಾಪಾರ, ಉದ್ಯಮ ಮತ್ತು ಕೃಷಿಯಲ್ಲೂ ಸಹ ಪ್ರಾಬಲ್ಯ ಮೆರೆದಿರುವ ಜಾತಿ. ರಾಜಸ್ಥಾನದಲ್ಲಿ ಗುಜ್ಜರ್‌ಗಳು ಮತ್ತು ಹರ್ಯಾಣದಲ್ಲಿ ಜಾಟ್‌ಗಳು ನಡೆಸಿದ ಪ್ರತಿಭಟನೆಯಿಂದ ಸ್ಫೂರ್ತಿ ಪಡೆದಿದ್ದಾರೆ ಪಾಟೀದಾರರು. ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಇವರನ್ನು ಹೋರಾಟದ ಹಾದಿಗೆ ಇಳಿಸಿತು. ಪಾಟೀದಾರರು 1930ರ ದಶಕದಲ್ಲಿ ಸರ್ದಾರ್ ಪಟೇಲ್ ನೇತೃತ್ವದ “ಬಡೋìಲಿ ನೋ ಟ್ಯಾಕ್ಸ್ ಕ್ಯಾಂಪೇನ್’ನ ಬೆನ್ನೆಲುಬಾಗಿದ್ದವರು.
ಆದಾಗ್ಯೂ ಕಿರಿದಾದ ಬಹುಮತದ ಹೊರತಾಗಿಯೂ ಗುಜರಾತ್‌ನ ಮುಂದಿನ ಬಿಜೆಪಿ ಸರ್ಕಾರಕ್ಕೆ ಅಸ್ತಿತ್ವದ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ ಕೇಂದ್ರದಲ್ಲಿ ಇದೇ ಪಕ್ಷವೇ ಅಧಿಕಾರದಲ್ಲಿದೆ ಮತ್ತು ಪûಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿದೆ. ಹೀಗಾಗಿ ಗುಜರಾತ್‌ನಲ್ಲಿ “ಆಪರೇಷನ್ ಕಮಲ’ದ ಅಗತ್ಯ ಎದುರಾಗಲಿಕ್ಕಿಲ್ಲ.
ಬಿಜೆಪಿ ಅದಾಗಲೇ ಗುಜರಾತ್ ಚುನಾವಣಾ ಪ್ರಚಾರದಿಂದ ಅನೇಕ ಪಾಠಗಳನ್ನು ಕಲಿತಿರಬಹುದು. ಪ್ರಚಾರದ ಆರಂಭದಲ್ಲಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಅವರ ವಿಕಾಸದ ಮಾತುಗಳಿಗೆ, ಕಚ್ಚಾ ಜಾತೀಯತೆ ಮತ್ತು ರಾಹುಲ್ ಗಾಂಧಿಯವರ ಧರ್ಮ ಓಲೈಕೆಯ ಪ್ರವಾಹವನ್ನು ಎದುರಾಯಿತು.
ರಾಜ್ಯದ ಸೌರಾಷ್ಟ್ರ ಪ್ರದೇಶವಂತೂ ಸ್ಪಷ್ಟವಾಗಿ ಕಾಂಗ್ರೆಸ್‌ಗೆ ಮತ ನೀಡಿದೆ. ಆದಾಗ್ಯೂ ಈಗ ಬಿಜೆಪಿ ಗುಜರಾತ್‌ನಲ್ಲಿ ಗೆಲುವು ಸಾಧಿಸಿದೆ ಯಾದರೂ, ಮೋದಿಯವರು ಪ್ರಧಾನಿಯಾಗಿ ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳ ಬೇಕಿದೆ. ಅವರು ಸರ್ಕಾರದಲ್ಲಿನ ತಮ್ಮ “ಕೇಂದ್ರೀಕೃತ’ ಅಧಿಕಾರವನ್ನು ತ್ಯಜಿಸಬೇಕಿದೆ ಮತ್ತು ಹಿರಿಯ ಸಹೋದ್ಯೋಗಿಗಳನ್ನು, ಜೊತೆಗೆ ಪಕ್ಷದ ಮಾರ್ಗದರ್ಶಕರಾದ ಎಲ್.ಕೆ. ಆಡ್ವಾಣಿ ಮತ್ತು ಡಾ. ಮುರಳಿಮನೋಹರ ಜೋಷಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಿದೆ. ನೋಟ್‌ಬಂದಿ, ಜಿಎಸ್‌ಟಿಯಂಥ ಏಕಪಕ್ಷೀಯ ನಿರ್ಧಾರಗಳಿಂದ ಅವರು ದೂರ ಉಳಿಯಬೇಕು ಮತ್ತು ಸುಷ್ಮಾ ಸ್ವರಾಜ್‌ರನ್ನು ಹಿಂದೆ ತಳ್ಳಿ ಜವಾಹರಲಾಲ್ ನೆಹರೂರಂತೆ ವಿದೇಶಾಂಗ ಸಚಿವಾಲಯವನ್ನು ತಾವೇ ನಡೆಸುವುದನ್ನು ನಿಲ್ಲಿಸಬೇಕು.
ಇತ್ತ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳಾದ ಕ್ಷತ್ರಿಯರು, ಹರಿಜನರು, ಆದಿವಾಸಿಗಳು ಮತ್ತು ಮುಸಲ್ಮಾನರನ್ನು (ಕೆಎಚ್‌ಎಎಮ್) ಕಡೆಗಣಿಸಿ, ಪಾಟೀದಾರ್ ಕಾರ್ಡನ್ನೇ ಅತಿಯಾಗಿ ಬಳಸಿ ತಪ್ಪುಮಾಡಿತು. 1985ರಲ್ಲಿ ಕಾಂಗ್ರೆಸ್ ನಾಯಕ, ಮುಖ್ಯಮಂತ್ರಿ ಮಾಧವಸಿಂಹ ಸೋಲಂಕಿ ಈ ನಾಲ್ಕು ಗುಂಪುಗಳನ್ನು ಒಗ್ಗೂಡಿಸಿ ದಾಖಲೆಯ 149 ಸ್ಥಾನಗಳನ್ನು ಗೆದ್ದಿದ್ದರು.
ಗುಜರಾತ್‌ನ ಈ ಜಾತಿ ಸಮೀಕರಣ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಯೋಜಿತ ಅಹಿಂದ ಗುಂಪಿಗಿಂತ ಭಿನ್ನವಾಗೇನೂ ಇರಲಿಲ್ಲ. ಕಾಂಗ್ರೆಸ್ ಈಗ ದಕ್ಷಿಣ ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲೂ ಕಳಪೆ ಪ್ರದರ್ಶನ ನೀಡಿದೆ.
ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿಗಳಿಗಿಂತ ಪರಿಶಿಷ್ಟ ಪಂಗಡಗಳ ಮತ ಪ್ರಮುಖವಾಗಿದೆ. ಗುಜರಾತ್ ಎಂದರೆ ಕೇವಲ “ಪಟೇಲರು, ಶಾಗಳು ಮತ್ತು ದೇಸಾಯಿ’ಗಳಲ್ಲ. ಈಗ ರಾಜ್ಯದ ಭಾಗವಾಗಿರುವ ಅನೇಕ ಪ್ರದೇಶಗಳು ಹಿಂದೆ ಕ್ಷತ್ರೀಯರ ರಾಜಾಡಳಿತ ಪ್ರದೇಶಗಳಾಗಿದ್ದವು. ಬರೋಡಾಕ್ಕೆ ಮರಾಠಾ ಮಹಾರಾಜನಿದ್ದ(ಗಾಯಕ್‌ವಾಡ್).
ಇನ್ನು ಗುಜರಾತ್ ಚುನಾವಣೆಯ ಅಬ್ಬರದಲ್ಲಿ ಹಿನ್ನೆಲೆಗೆ ಸರಿದ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲೋಲಕವು ಬಿಜೆಪಿಯತ್ತ ವಾಲಿದೆ. 1983ರಿಂದಲೂ ಆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್‌ನ ವೀರಭದ್ರ ಸಿಂಗ್ ಮತ್ತು ಬಿಜೆಪಿಯ ಪ್ರೇಮಕುಮಾರ್ ಧುಮಲ್ ನಡುವೆ ಬದಲಾಗುತ್ತಾ ಬಂದಿದೆ. ಇಲ್ಲಿ ಪರಿಗಣಿಸಲೇಬೇಕಾದ ಮತ್ತೂಬ್ಬರೆಂದರೆ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಶಾಂತಾ ಕುಮಾರ್.
ಗುಜರಾತ್ ಫಲಿತಾಂಶ ಮುಂಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾ ಡಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. ಅತ್ತ ಗುಜರಾತ್‌ನಲ್ಲಿ ಪಾಟೀದಾರ ಹೋರಾಟ ಬಿಜೆಪಿಯ ಮೇಲೆ ಪರಿಣಾಮ ಬೀರಿದೆ ಎನ್ನುವುದಾದರೆ, ಇತ್ತ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಭಿನ್ನಾಭಿಪ್ರಾ ಯವನ್ನು, ಅದರಲ್ಲೂ ಪತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ವನ್ನು ಬಯಸುತ್ತಿರುವ ಲಿಂಗಾಯತರ ಬೇಡಿಕೆಯನ್ನು ಅದು ತಳ್ಳಿಹಾಕುವಂತಿಲ್ಲ.